ಕನ್ನಡದಲ್ಲೇ ದೀಪಿಕಾ ಎದುರು ಪ್ರೀತಿ ವ್ಯಕ್ತಪಡಿಸಿದ್ದ ರಣವೀರ್ ಸಿಂಗ್

ದೀಪಿಕಾ ಪಡುಕೋಣೆ ಅವರು ಕರ್ನಾಟಕದವರು. ಅವರಿಗೆ ಕನ್ನಡ ಬರುತ್ತದೆ. ಬೆಂಗಳೂರಲ್ಲಿ ದೀಪಿಕಾ ಶಿಕ್ಷಣ ಪಡೆದಿದ್ದರು. ಅವರು ನಟಿಸಿದ ಮೊದಲ ಸಿನಿಮಾ ಕನ್ನಡದ್ದು. ಅವರು ಈ ಮೊದಲು ಕನ್ನಡದಲ್ಲಿ ದೀಪಿಕಾಗೆ ಪ್ರಪೋಸ್ ಮಾಡಿದ್ದರು ಅನ್ನೋದು ವಿಶೇಷ.

ಕನ್ನಡದಲ್ಲೇ ದೀಪಿಕಾ ಎದುರು ಪ್ರೀತಿ ವ್ಯಕ್ತಪಡಿಸಿದ್ದ ರಣವೀರ್ ಸಿಂಗ್
ರಣವೀರ್-ದೀಪಿಕಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Sep 11, 2024 | 9:01 AM

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಹೆಣ್ಣು ಮಗುವಿನ ಪಾಲಕರಾಗಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದೀಪಿಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣವೀರ್ ಹಾಗೂ ದೀಪಿಕಾ ಪ್ರೀತಿ ಶುರುವಾಗಿದ್ದು ದಶಕಗಳ ಹಿಂದೆ. ಈಗ ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅವರ ಕುಟುಂಬಕ್ಕೆ ಹೊಸ ಸದಸ್ಯೆಯ ಆಗಮನ ಆಗಿದ್ದು ಕುಟುಂಬದ ಖುಷಿ ಹೆಚ್ಚಿಸಿದೆ.

ದೀಪಿಕಾ ಪಡುಕೋಣೆ ಅವರು ಕರ್ನಾಟಕದವರು. ಅವರಿಗೆ ಕನ್ನಡ ಬರುತ್ತದೆ. ಬೆಂಗಳೂರಲ್ಲಿ ದೀಪಿಕಾ ಶಿಕ್ಷಣ ಪಡೆದಿದ್ದರು. ಅವರು ನಟಿಸಿದ ಮೊದಲ ಸಿನಿಮಾ ಕನ್ನಡದ್ದು. ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ. ರಣವೀರ್ ಸಿಂಗ್ ಅವರದ್ದು ಪಂಜಾಬಿ ಕುಟುಂಬ. ಅವರು ಕೆಲವೊಮ್ಮೆ ಬೆಂಗಳೂರಿಗೆ ಬಂದಿದ್ದಾರೆ ಅಷ್ಟೇ ಹೊರತು, ಕನ್ನಡದ ಟಚ್ ಇಲ್ಲ. ಅವರು ಈ ಮೊದಲು ಕನ್ನಡದಲ್ಲಿ ದೀಪಿಕಾಗೆ ಪ್ರಪೋಸ್ ಮಾಡಿದ್ದರು ಅನ್ನೋದು ವಿಶೇಷ.

ಹೌದು, ರಣವೀರ್ ಸಿಂಗ್ ಕಾರ್ಯಕ್ರಮ ಒಂದಕ್ಕಾಗಿ ವೇದಿಕೆ ಏರಿದ್ದರು. ಅಲ್ಲಿ ಇದ್ದಿದ್ದು ಕನ್ನಡದ ಅಕುಲ್ ಬಾಲಾಜಿ. ಅವರು ಕನ್ನಡದ ಹಲವು ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಆ ಶೋನ ಅಕುಲ್ ಅವರೇ ನಡೆಸಿಕೊಡುತ್ತಾ ಇದ್ದರು. ಈ ವೇಳೆ ರಣವೀರ್ ಸಿಂಗ್​ಗೆ ಕನ್ನಡದಲ್ಲಿ ಪ್ರಪೋಸ್ ಮಾಡೋದನ್ನು ಹೇಗೆ ಎಂದು ಹೇಳಿಕೊಟ್ಟಿದ್ದರು.

View this post on Instagram

A post shared by Asimiii (@asim000071)

‘ದೀಪಿಕಾ, ಓ ನನ್ನ ದೀಪಿಕಾ’ ಎಂದರು ಅಕುಲ್. ಆದರೆ ರಣವೀರ್​ ಸಿಂಗ್​ಗೆ ನಂಬಿಕೆ ಬರಲಿಲ್ಲ. ಏನೋ ಬೇರೆ ಹೇಳಿಕೊಡುತ್ತಿದ್ದಾರೆ ಎಂಬ ಅನುಮಾನ ರಣವೀರ್​ಗೆ ಮೂಡಿತು. ಈ ಕಾರಣದಿಂದಲೇ ‘ನಾನು ಈ ಮಾತನ್ನು ಹೇಳಲ್ಲ, ನನಗೆ ಮನೆಗೆ ಹೋಗಬೇಕು’ ಎಂದರು ಅವರು. ಆಗ, ಅಕುಲ್ ಅವರು ಬೇರೆ ಏನನ್ನೂ ಹೇಳಿಕೊಡಲ್ಲ ಎಂದು ಪ್ರಾಮಿಸ್ ಮಾಡಿದರು. ಅದರಂತೆಯೇ, ‘ದೀಪಿಕಾ, ಓ ನನ್ನ ದೀಪಿಕಾ, ನೀನೆ ನನ್ನ ಜೀವನದ ದೀಪ’ ಎಂದು ಅಕುಲ್ ಹೇಳಿಕೊಟ್ಟರು. ದೀಪ ಎನ್ನುತ್ತಿದ್ದಂತೆ ‘ಯು ಆರ್​ ದಿ ಲೈಟ್ ಆಫ್ ಮೈ ಲೈಫ್’ ಎಂದರು ರಣವೀರ್.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಮಗುವಿಗಾಗಿ ದುಬೈನಲ್ಲಿ ಶಾಪಿಂಗ್ ಮಾಡಿ ಟ್ರೋಲ್ ಆದ ರಾಖಿ ಸಾವಂತ್

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ 2018ರಲ್ಲಿ ಮದುವೆ ಆದರು. ಈಗ ಅವರು ಆರು ವರ್ಷಗಳ ಬಳಿಕ ತಂದೆ ಆಗಿದ್ದಾರೆ. ದೀಪಿಕಾ ಪಡುಕೋಣೆ ಮಗಳನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ದೀಪಿಕಾ ಸದ್ಯ ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟಿದ್ದಾರೆ. ಈ ಮೊದಲು ಇವರು ವಿಚ್ಛೇದನ ಪಡೆಯುತ್ತಾರೆ ಎಂದೆಲ್ಲ ಸುದ್ದಿ ಆಗಿತ್ತು. ಆದರೆ, ಯಾವುದೂ ನಿಜ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:00 am, Wed, 11 September 24