AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕ ವಯಸ್ಸಲ್ಲಿ ಪುನೀತ್ ಕೇಳಿದ್ದ ಕಾರನ್ನು ಮನೆಗೆ ಕಳುಹಿಸಿದ್ದ ಎನ್​ಟಿಆರ್

ಪುನೀತ್ ಅವರು ರಾಜ್​ಕುಮಾರ್ ಜೊತೆ ಅನೇಕ ಕಡೆಗಳಲ್ಲಿ ತೆರಳುತ್ತಿದ್ದರು. ಶೂಟಿಂಗ್​ಗೆ ಹೋದಾಗ ಅನೇಕ ಜನರ ಪರಿಚಯ ಅವರಿಗೆ ಆಗುತ್ತಿತ್ತು. ಅದೇ ರೀತಿ ಪುನೀತ್ ಅವರು ತಂದೆಯ ಜೊತೆ ಒಮ್ಮೆ ಚಿತ್ರೀಕರಣಕ್ಕೆ ತೆರಳಿದಾಗ ಎನ್​ಟಿಆರ್​ ಸಿಕ್ಕಿದ್ದರು. ಅವರ ಬಳಿ ಒಂದು ರೇಸ್ ಕಾರ್ ಇತ್ತು. ಈ ಕಾರು ಬೇಕು ಎಂದು ಪುನೀತ್ ಹಠ ಹಿಡಿಸಿದ್ದರು.

ಚಿಕ್ಕ ವಯಸ್ಸಲ್ಲಿ ಪುನೀತ್ ಕೇಳಿದ್ದ ಕಾರನ್ನು ಮನೆಗೆ ಕಳುಹಿಸಿದ್ದ ಎನ್​ಟಿಆರ್
ಚಿಕ್ಕ ವಯಸ್ಸಲ್ಲಿ ಪುನೀತ್ ಕೇಳಿದ್ದ ಕಾರನ್ನು ಮನೆಗೆ ಕಳುಹಿಸಿದ್ದ ಎನ್​ಟಿಆರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 12, 2024 | 7:44 AM

Share

ಪುನೀತ್ ರಾಜ್​ಕುಮಾರ್ ಅವರು ಇಂದು ನಮ್ಮ ಜೊತೆಗೆ ಇಲ್ಲ. ಈ ನೋವು ಯಾವಾಗಲೂ ಕಡಿಮೆ ಆಗುವಂಥದ್ದಲ್ಲ. ಅವರು ಅನೇಕ ಕಲಾವಿದರ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದರು. ಅವರು ಸಣ್ಣ ವಯಸ್ಸಿನಿಂದಲೇ ಇಂಡಸ್ಟ್ರಿಯನ್ನು ಹತ್ತಿರದಿಂದ ಕಂಡವರು. ರಾಜ್​ಕುಮಾರ್ ಕಾರಣದಿಂದ ಅವರು ಅನೇಕ ದೊಡ್ಡ ಕಲಾವಿದರ ಜೊತೆ ಒಡನಾಟ ಹೊಂದಿದ್ದರು. ಒಮ್ಮೆ ಶೂಟಿಂಗ್​ಗೆ ಹೋದಾಗ ಅವರಿಗೆ ಒಂದು ಕಾರು ಸಖತ್ ಇಷ್ಟ ಆಗಿತ್ತು. ಅದಕ್ಕಾಗಿ ಅವರಯ ಬೇಡಿಕೆ ಇಟ್ಟಿದ್ದರು. ಆ ಬೇಡಿಕೆಯನ್ನು ಎನ್​ಟಿಆರ್​ ಅವರು ಈಡೇರಿಸಿದ್ದರು!

ಪುನೀತ್ ರಾಜ್​ಕುಮಾರ್ ಅವರು ರಾಜ್​ಕುಮಾರ್ ಜೊತೆ ಅನೇಕ ಕಡೆಗಳಲ್ಲಿ ತೆರಳುತ್ತಿದ್ದರು. ಶೂಟಿಂಗ್​ಗೆ ಹೋದಾಗ ಅನೇಕ ಜನರ ಪರಿಚಯ ಅವರಿಗೆ ಆಗುತ್ತಿತ್ತು. ಅದೇ ರೀತಿ ಪುನೀತ್ ಅವರು ತಂದೆಯ ಜೊತೆ ಒಮ್ಮೆ ಚಿತ್ರೀಕರಣಕ್ಕೆ ತೆರಳಿದಾಗ ಟಾಲಿವುಡ್ ನಟ ಎನ್​ಟಿಆರ್​ ಸಿಕ್ಕಿದ್ದರು. ಅವರ ಬಳಿ ಒಂದು ರೇಸ್ ಕಾರ್ ಇತ್ತು. ಈ ಕಾರು ಬೇಕು ಎಂದು ಪುನೀತ್ ಹಠ ಹಿಡಿಸಿದ್ದರು.

ಸಾಮಾನ್ಯವಾಗಿ ಸಣ್ಣ ವಯಸ್ಸಲ್ಲಿ ಚಾಕೋಲೇಟ್ ಬೇಕು ಎಂದರೆ ಅದನ್ನು ಕೊಡಿಸಬಹುದು. ಆದರೆ, ಪುನೀತ್ ಕೇಳಿದ್ದು ಕಾರನ್ನು. ಆದರೆ, ಎನ್​ಟಿಆರ್ ಅವರು ಇದನ್ನು ಗಂಭೀರವಾಗಿ ಸ್ವೀಕರಿಸಿದರು. ವಿಶೇಷ ಎಂದರೆ ಈ ಕಾರನ್ನು ಎನ್​ಟಿಆರ್​ ಅವರು ಪುನೀತ್ ಮನೆಗೆ ಕಳುಹಿಸಿದ್ದರು. ಅದು ರೇಸ್ ಕಾರಾಗಿತ್ತು. ಕೊನೆಗೆ ಅದನ್ನು ಹಿಂದಿರುಗಿಸಿ ಕಳುಹಿಸಲಾಗಿತ್ತು. ಈ ವಿಚಾರವನ್ನು ಪುನೀತ್ ಈ ಮೊದಲು ಹೇಳಿಕೊಂಡಿದ್ದರು.

ಪುನೀತ್ ಅವರಿಗೆ ಕಾರಿನ ಬಗ್ಗೆ ಅಪಾರ ಪ್ರೀತಿ ಇತ್ತು ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಅವರು ಪ್ರೀತಿಯ ಪತ್ನಿಗೆ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಉಡುಗೊರೆ ಆಗಿ ನೀಡಿದ್ದರು. ಅವರ ಬಳಿಯೂ ಕೆಲವು ದುಬಾರಿ ಕಾರುಗಳು ಇವೆ.

ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್​ಕುಮಾರ್ ಬಗ್ಗೆ ಕೀಳು ಮಟ್ಟದ ಟ್ರೋಲ್: ಕೆಂಡವಾದ ಅಭಿಮಾನಿಗಳು

ಪುನೀತ್ ಅವರು ನಮ್ಮನ್ನು ಅಗಲಿ ಮೂರು ವರ್ಷ ಕಳೆಯುತ್ತಾ ಬಂದಿದೆ. ಈ ನೋವು ಎಂದಿಗೂ ಮರೆಯಾಗುವಂಥದ್ದಲ್ಲ. ಪುನೀತ್ ರಾಜ್​ಕುಮಾರ್ ಅವರು 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಮೃತಪಟ್ಟ ಬಳಿಕ ಅನೇಕ ರಸ್ತೆಗಳಿಗೆ ಪುನೀತ್ ಅವರ ಹೆಸರನ್ನು ಇಡಲಾಗಿದೆ. ಪುನೀತ್ ಅವರ ಅಗಲುವಿಕೆ ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ. ಬಹುತೇಕ ಹೀರೋಗಳ ಜೊತೆ ಅವರು ಒಳ್ಳೆಯ ಸಂಬಂಧ ಹೊಂದಿದ್ದರು. ಅವರನ್ನು ಈಗಲೂ ನೆನಪು ಮಾಡಿಕೊಳ್ಳುವ ಕೆಲಸ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ