Sruthi Hariharan: ಮತ್ತೆ ಮುನ್ನೆಲೆಗೆ ಬಂದ ಮೀಟೂ ಕೇಸ್​; ಬಿ ರಿಪೋರ್ಟ್​ ಚಾಲೆಂಜ್ ಮಾಡಿದ ಶ್ರುತಿ ಹರಿಹರನ್​ಗೆ ನೋಟಿಸ್

ಮೀಟೂ ಪ್ರಕರಣದಲ್ಲಿ ಪೊಲೀಸರು ಮೂರು ವರ್ಷ ತನಿಖೆ ನಡೆಸಿದರು. ಆದರೆ, ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ. ಹಾಗಾಗಿ ಪೊಲೀಸರು ಕೋರ್ಟ್​ಗೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಶ್ರುತಿ ಹರಿಹರನ್ ಪ್ರಶ್ನೆ ಮಾಡಿದ್ದರು.

Sruthi Hariharan: ಮತ್ತೆ ಮುನ್ನೆಲೆಗೆ ಬಂದ ಮೀಟೂ ಕೇಸ್​; ಬಿ ರಿಪೋರ್ಟ್​ ಚಾಲೆಂಜ್ ಮಾಡಿದ ಶ್ರುತಿ ಹರಿಹರನ್​ಗೆ ನೋಟಿಸ್
ಶ್ರುತಿ ಹರಿರಹರನ್-ಅರ್ಜುನ್ ಸರ್ಜಾ

Updated on: Jun 09, 2023 | 11:21 AM

2018ರಲ್ಲಿ ಭಾರಿ ಸದ್ದು ಮಾಡಿದ್ದ ಮೀಟೂ ಆಂದೋಲನದಲ್ಲಿ ಅರ್ಜುನ್​ ಸರ್ಜಾ (Arjun Sarja) ಮೇಲೆ ನಟಿ ಶ್ರುತಿ ಹರಿಹರನ್ ಅವರು ಕೆಲವು ಗಂಭೀರ ಆರೋಪಗಳನ್ನು ಹೊರಿಸಿದ್ದರು. ನಟನಿಂದ ಲೈಂಗಿಕ ಕಿರುಕುಳ ಆಗಿದೆ ಎಂದು ಶ್ರುತಿ ಹರಿಹರನ್ (Sruthi Hariharan)​ ಆರೋಪಿಸಿದ್ದರು. ಈ ಸಂಬಂಧ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು. ಆದರೆ, ಪೊಲೀಸರಿಗೆ ಸಾಕ್ಷ್ಯ ಸಿಗದ ಕಾರಣ ಕೋರ್ಟ್​ನಲ್ಲಿ ಬಿ ರಿಪೋರ್ಟ್​ ಸಲ್ಲಿಕೆ ಮಾಡಿದ್ದರು. ಇದನ್ನು ಶ್ರುತಿ ಹರಿಹರನ್ ಚಾಲೆಂಜ್ ಮಾಡಿದ್ದರು. ಅವರಿಗೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್​ನಿಂದ ನೋಟಿಸ್​ ಜಾರಿ ಆಗಿದೆ. ಸಾಕ್ಷ್ಯ ಒದಗಿಸುವಂತೆ ಸೂಚಿಸಲಾಗಿದೆ.

ಮೀಟೂ ಪ್ರಕರಣದಲ್ಲಿ ಪೊಲೀಸರು ಮೂರು ವರ್ಷ ತನಿಖೆ ನಡೆಸಿದರು. ಆದರೆ, ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ. ಹಾಗಾಗಿ ಪೊಲೀಸರು ಕೋರ್ಟ್​ಗೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಪ್ರಕರಣವೊಂದರ ತನಿಖೆ ಸಮಯದಲ್ಲಿ ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲು ಅಗತ್ಯ ಇರುವಷ್ಟು ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದು ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಅಂತಿಮ ವರದಿಯೇ ಬಿ ರಿಪೋರ್ಟ್‌. ಇದನ್ನು ಶ್ರುತಿ ಹರಿಹರನ್ ಪ್ರಶ್ನೆ ಮಾಡಿದ್ದರು.

ಶ್ರುತಿ ಹರಿಹರನ್ ಅವರು ಬಿ-ರಿಪೋರ್ಟ್​ನ ಒಪ್ಪಿಲ್ಲ. ಇದನ್ನು ಅವರು ಪ್ರಶ್ನೆ ಮಾಡಿದ್ದಾರೆ. ಶ್ರುತಿ ಅವರ ಮೇಲ್ಮನವಿಯನ್ನು ಕೋರ್ಟ್ ಒಪ್ಪಿದೆ. ಪೊಲೀಸರಿಗೆ ಸಾಕ್ಷ್ಯಾಧಾರ ಒದಗಿಸುವಂತೆ ಶ್ರುತಿಗೆ ನೋಟಿಸ್ ನೀಡಿದೆ. ಒಂದೊಮ್ಮೆ ಶ್ರುತಿ ಹರಿಹರನ್ ಸಾಕ್ಷ್ಯ ನೀಡದಿದ್ದರೆ ಬಿ-ರಿಪೋರ್ಟ್​ನ ಕೋರ್ಟ್ ಒಪ್ಪಲಿದೆ.

ಇದನ್ನೂ ಓದಿ: ಮಗು ಜನಿಸಿದ ನಂತರ ದೇಹದಲ್ಲಿ ಆಗುವ ಬದಲಾವಣೆಗಳೇನು ಎಂಬುದನ್ನು ವಿವರಿಸಿದ ಶ್ರುತಿ ಹರಿಹರನ್

ಅರುಣ್​ ವೈದ್ಯನಾಥನ್​ ನಿರ್ದೇಶನದ ‘ವಿಸ್ಮಯ’ ಸಿನಿಮಾದಲ್ಲಿ ಶ್ರುತಿ ಹರಿಹರನ್​ ಮತ್ತು ಅರ್ಜುನ್​ ಸರ್ಜಾ ಅವರು ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರೀಕರಣದ ವೇಳೆ ಅರ್ಜುನ್​ ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶ್ರುತಿ ಹರಿಹರನ್​ ಆರೋಪ ಹೊರಿಸಿದ ಬಳಿಕ ಇಡೀ ಸ್ಯಾಂಡಲ್​ವುಡ್​ನಲ್ಲಿ ವಿವಾದದ ಬೆಂಕಿ ಹೊತ್ತಿಕೊಂಡಿತ್ತು. ಕೆಲವರು ಶ್ರುತಿ ಪರವಾಗಿ ಮಾತನಾಡಿದ್ದರೆ, ಅನೇಕರು ಅರ್ಜುನ್​ ಸರ್ಜಾಗೆ ಬೆಂಬಲ ನೀಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಸಭೆ ನಡೆಸಲಾಗಿತ್ತು. ಅಂಬರೀಷ್​ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜಿ ಸಂಧಾನಕ್ಕೆ ಅರ್ಜುನ್​ ಸರ್ಜಾ ಮತ್ತು ಶ್ರುತಿ ಹರಿಹರನ್​ ಒಪ್ಪಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:37 am, Fri, 9 June 23

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us