‘ಮಾರ್ಕ್’ ಚಿತ್ರದ ನಿರ್ದೇಶಕನಿಗೆ ಪ್ರೀತಿಯಿಂದ ಕಾರ್ ಗಿಫ್ಟ್ ಕೊಟ್ಟ ಸುದೀಪ್; ಬೆಲೆ ಎಷ್ಟು?

‘ಮಾರ್ಕ್’ ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ಒಂದು ಐಷಾರಾಮಿ Skoda Kylaq ಕಾರನ್ನು ಸುದೀಪ್ ಉಡುಗೊರೆಯಾಗಿ ನೀಡಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡ ನಂತರ ಈ ಉಡುಗೊರೆ ನೀಡಲಾಗಿದೆ ಎನ್ನಲಾಗುತ್ತಿದೆ. ಸುದೀಪ್ ಅವರ ಉದಾರತೆ ಮತ್ತು ನಿರ್ದೇಶಕರೊಂದಿಗಿನ ಅವರ ಬಾಂಧವ್ಯ ಇದರಿಂದ ಸ್ಪಷ್ಟವಾಗುತ್ತದೆ.

‘ಮಾರ್ಕ್’ ಚಿತ್ರದ ನಿರ್ದೇಶಕನಿಗೆ ಪ್ರೀತಿಯಿಂದ ಕಾರ್ ಗಿಫ್ಟ್ ಕೊಟ್ಟ ಸುದೀಪ್; ಬೆಲೆ ಎಷ್ಟು?
ಸುದೀಪ್-ವಿಜಯ್

Updated on: Sep 25, 2025 | 8:53 AM

‘ಮ್ಯಾಕ್ಸ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ ಸುದೀಪ್. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ವಿಜಯ್ ಕಾರ್ತಿಕೇಯ. ಈ ಚಿತ್ರದ ಬಳಿಕ ಸುದೀಪ್ ಅವರು ಮತ್ತೆ ಅದೇ ನಿರ್ದೇಶಕನ ಜೊತೆ ಕೈ ಜೋಡಿಸಿದ್ದಾರೆ. ‘ಮಾರ್ಕ್’ ಎಂಬುದು ಚಿತ್ರದ ಟೈಟಲ್. ಈಗಾಗಲೇ ಸಿನಿಮಾ ಶೂಟ್ ಕೂಡ ಪೂರ್ಣಗೊಳ್ಳುತ್ತಾ ಬಂದಿದೆ ಎನ್ನಲಾಗಿದೆ. ಇದಾದ ಬೆನ್ನಲ್ಲೇ ವಿಜಯ್​ಗೆ ಸುದೀಪ್ ಪ್ರೀತಿಯಿಂದ ಕಾರೊಂದನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.

ಸುದೀಪ್ ಅವರಿಗೆ ಯಾರಾದರೂ ಇಷ್ಟ ಆದರೆ ಅವರನ್ನು ಆತ್ಮೀಯವಾಗಿ ನಡೆಸಿಕೊಳ್ಳುತ್ತಾರೆ. ಇದು ಅನೇಕ ಬಾರಿ ಸಾಬೀತಾಗಿದೆ. ಬಿಗ್ ಬಾಸ್ ನಡೆಸಿಕೊಡುವಾಗ ತಾವು ಧರಿಸೋ ಜಾಕೆಟ್, ಕಿವಿಗೆ ಹಾಕೋ ಚಿನ್ನದ ಸಸ್ಟಡ್​ಗಳನ್ನು ಸ್ಪರ್ಧಿಗಳಿಗೆ ಗಿಫ್ಟ್ ಆಗಿ ಕೊಟ್ಟ ಉದಾಹರಣೆ ಇದೆ. ಈಗ ‘ಮಾರ್ಕ್’ ನಿರ್ದೇಶಕನಿಗೆ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ
ಮುತ್ತುರಾಜ್ ಹೆಸರು ಬದಲಾಗಿದ್ದು ಅಣ್ಣಾವ್ರಿಗೇ ಗೊತ್ತಿರಲಿಲ್ಲ
ರಿಂಗ್ ಕೊಡಿಸಲು ರಮ್ಯಾ ಜೊತೆ ಜ್ಯುವೆಲರಿ ಶಾಪ್​ಗೆ ಹೋದ ವಿನಯ್;ಇದೆ ಟ್ವಿಸ್ಟ್
‘ಬಿಗ್ ಬಾಸ್ 12’ರ ನಾಲ್ಕು ಸ್ಪರ್ಧಿಗಳ ಹೆಸರು ಶನಿವಾರವೇ ರಿವೀಲ್?
‘BBK 12’ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ಬಂತು ಸ್ಪರ್ಧಿಗಳ ಹೊಸ ಪಟ್ಟಿ

ಇದನ್ನೂ ಓದಿ: ಸುದೀಪ್ ಅವರನ್ನು ಟ್ರೋಲ್ ಮಾಡಲು ಹೋದ್ರೆ ಹುಶಾರ್; ಬೀಳುತ್ತೆ ಕೇಸ್

ಜುಲೈ ತಿಂಗಳಲ್ಲಿ ‘ಮಾರ್ಕ್’ ಸಿನಿಮಾ ಅನೌನ್ಸ್ ಆಯಿತು. ಕೇವಲ 7 ತಿಂಗಳಲ್ಲಿ ಸಿನಿಮಾ ಶೂಟ್ ಮಾಡಿ, ಜನರ ಎದುರು ತಂದಿಡುವ ಆಲೋಚನೆ ಸುದೀಪ್​ ಹಾಗೂ ತಂಡಕ್ಕೆ ಇದೆ. ಈ ಕಾರಣದಿಂದಲೇ ವೇಗವಾಗಿ ಸಿನಿಮಾ ಶೂಟ್ ಮಾಡಲಾಗಿದೆ. ಇದಕ್ಕೆ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ವೇಗ ಕೂಡ ಕಾರಣ. ಇದು ಸುದೀಪ್​ಗೆ ಇಷ್ಟ ಆಗಿದೆ. ಹೀಗಾಗಿ, ಸ್ಕೋಡಾ ಕಂಪನಿಯ Kylaqನ ‘ಕಾರ್ಬನ್ ಸ್ಟೀಲ್’ (ಕಪ್ಪು) ಬಣ್ಣದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸ್ಕೋಡಾ Kylaq ಭಾರತದಲ್ಲಿ ಪರಿಚಯಗೊಂಡಿದ್ದು ಕಳೆದ ವರ್ಷ ನವೆಂಬರ್​ನಲ್ಲಿ. ಈ ಕಾರು ಮೊದಲು ರಸ್ತೆಗೆ ಇಳಿದಿದ್ದು ಈ ವರ್ಷ ಜನವರಿಯಲ್ಲಿ. ಈ ಕಾರಿನ ಆನ್​ ರೋಡ್ ಬೆಲೆ ಬೆಂಗಳೂರಿನಲ್ಲಿ ಬೆಸಿಕ್ ವರ್ಷನ್​ಗೆ 9.10 ಲಕ್ಷ ರೂಪಾಯಿಯಿಂದ ಆರಂಭ ಆಗಿ, ಹೈ ಎಂಡ್​ಗೆ 15.80 ಲಕ್ಷ ರೂಪಾಯಿವರೆಗೆ ಇದೆ. ಸುದೀಪ್ ನೀಡಿದ್ದು ಹೈ ಎಂಡ್ ವರ್ಷನ್ ಎನ್ನಲಾಗುತ್ತಿದೆ. ಇದರಲ್ಲಿ ಮ್ಯಾನ್ಯುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್​​ಮೀಷನ್ ಎರಡೂ ಕೂಡ ಲಭ್ಯವಿದೆ. ಪ್ರತಿ ಲೀಟರ್ ಪೆಟ್ರೋಲ್​ಗೆ 17 ಕಿಲೋಮೀಟರ್ ಮೈಲೇಜ್​​ನ ಈ ಕಾರು ನೀಡಬಲ್ಲದು. ಈ ಕಾರು ಆರು ಬಣ್ಣಗಳಲ್ಲಿ ಲಭ್ಯವಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us