AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್ ಸಾವು ಪ್ರಕರಣ: ರಿಯಾ ಮನವಿ ಮೇಲಿನ ತೀರ್ಪು ಕಾಯ್ದಿರಿಸಿದ ಅಪೆಕ್ಸ್ ಕೋರ್ಟ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಅಕಾಲಿಕ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದೆ. ದಿವಂಗತ ನಟನ ತಂದೆ ಕೆ ಕೆ ಸಿಂಗ್ ಜುಲೈ ತಿಂಗಳ ಕೊನೆ ವಾರದಲ್ಲಿ ಪಾಟ್ನಾದಲ್ಲಿ ಎಫ್ ಐ ಆರ್ ಒಂದನ್ನು ದಾಖಲಿಸಿ, ರಿಯಾ ಚಕ್ರವರ್ತಿ ಹಾಗೂ ಇತರ ಐವರ ವಿರುದ್ಧ ಆಪಾದನೆಗಳನ್ನು ಮಾಡಿದ್ದರು. ಅದಾದ ಮೇಲೆ, ರಿಯಾ ಸುಪ್ರೀಮ್ ಕೋರ್ಟ್​ಗೆ ಮನವಿ ಸಲ್ಲಿಸಿ ಸುಶಾಂತ್ ಪ್ರಕರಣವನ್ನು ಬಿಹಾರದಿಂದ ಮುಂಬೈಗೆ ವರ್ಗಾಯಿಸಬೇಕೆಂದು ಕೋರಿದ್ದರು. ಅಕೆಯ ಮನವಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಸರ್ವೋಚ್ಛ ನ್ಯಾಯಲಯವು, […]

ಸುಶಾಂತ್ ಸಾವು ಪ್ರಕರಣ: ರಿಯಾ ಮನವಿ ಮೇಲಿನ ತೀರ್ಪು ಕಾಯ್ದಿರಿಸಿದ ಅಪೆಕ್ಸ್ ಕೋರ್ಟ್
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 11, 2020 | 8:44 PM

Share

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಅಕಾಲಿಕ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದೆ. ದಿವಂಗತ ನಟನ ತಂದೆ ಕೆ ಕೆ ಸಿಂಗ್ ಜುಲೈ ತಿಂಗಳ ಕೊನೆ ವಾರದಲ್ಲಿ ಪಾಟ್ನಾದಲ್ಲಿ ಎಫ್ ಐ ಆರ್ ಒಂದನ್ನು ದಾಖಲಿಸಿ, ರಿಯಾ ಚಕ್ರವರ್ತಿ ಹಾಗೂ ಇತರ ಐವರ ವಿರುದ್ಧ ಆಪಾದನೆಗಳನ್ನು ಮಾಡಿದ್ದರು. ಅದಾದ ಮೇಲೆ, ರಿಯಾ ಸುಪ್ರೀಮ್ ಕೋರ್ಟ್​ಗೆ ಮನವಿ ಸಲ್ಲಿಸಿ ಸುಶಾಂತ್ ಪ್ರಕರಣವನ್ನು ಬಿಹಾರದಿಂದ ಮುಂಬೈಗೆ ವರ್ಗಾಯಿಸಬೇಕೆಂದು ಕೋರಿದ್ದರು.

ಅಕೆಯ ಮನವಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಸರ್ವೋಚ್ಛ ನ್ಯಾಯಲಯವು, ಆಗಸ್ಟ 13, 2020 ಕ್ಕೆ ಆದೇಶವನ್ನು ಕಾಯ್ದಿರಿಸಿತು. ಪ್ರಕರಣಕ್ಕೆ ಸಂಬಂಧಪಟ್ಟವರೆಲ್ಲರಿಗೂ ಗುರುವಾರದೊಳಗೆ ಟಿಪ್ಪಣಿಗಳನ್ನು ಸಲ್ಲಿಸಲು ಕೋರ್ಟ್ ಕಾಲಾವಕಾಶ ನೀಡಿತು.

ಕೋರ್ಟ್​ಗೆ ಸಲ್ಲಿಸಿರುವ ಮನವಿಯಲ್ಲಿ ರಿಯಾ, ಮಾಧ್ಯಮದಲ್ಲಿ ತನ್ನ ವಿರುದ್ಧ ಅಪಪ್ರಚಾರ ನಿಲ್ಲಿಸುವಂತೆ ಆದೇಶ ನೀಡಲು ಕೋರಿದ್ದಾರೆ. ಆಕೆಯ ಪರವಾಗಿ ವಾದಿಸಿದ ವಕೀಲರು, ಸುಶಾಂತ್ ಪ್ರಕರಣ ಮುಂಬೈನಲ್ಲಿ ಜರುಗಿರುವುದರಿಂದ ಬಿಹಾರ ರಾಜ್ಯದ ವ್ಯಾಪ್ತಿಗೆ ಬರೋದಿಲ್ಲ ಎಂದು ಕೋರ್ಟ್​ಗೆ ತಿಳಿಸಿದರು.

ಬಿಹಾರ ಸರಕಾರದ ಪರ ವಾದಿಸಿದ ವಕೀಲರು ಸಹ ವ್ಯಾಪ್ತಿಯ ಬಗ್ಗೆ ನ್ಯಾಯಾಲಯದ ಗಮನ ಸೆಳೆಯುತ್ತಾ ಸರಕಾರದ ಇಚ್ಛೆ ಕೇವಲ ಸತ್ಯವನ್ನು ಮಾತ್ರ ಬಯಲಿಗೆ ತರುವುದಾಗಿದೆ ಎಂದರು.

ಏತನ್ಮಧ್ಯೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮುಂಬೈ ಪೊಲೀಸ್ ತನಿಖೆ ಕುರಿತು ಸಂದೇಹಗಳನ್ನು ವ್ಯಕ್ತಪಡಿಸಿ, ಸುಶಾಂತ್ ಕುಟುಂಬವು, ನಟನ ಆತ್ಮಹತ್ಯೆಬಗ್ಗೆ ಅನುಮಾನ ವ್ಯಕ್ತಪಡಿಸಿರಲಿಲ್ಲ ಎಂದರು.

ಎಲ್ಲರ ವಾದಗಳನ್ನು ಆಲಿಸಿದ ನಂತರ ಕೋರ್ಟು ಆಗಸ್ಟ 13ಕ್ಕೆ ತೀರ್ಪನ್ನು ಕಾಯ್ದಿರಿಸಿತು.