ವಿಜಯ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು.. ಡೀಸೆಲ್ ಹಾಕಿ ಕಳಿಸಿದ್ರು!
ಶಿವಮೊಗ್ಗ: ನಟ ವಿಜಯ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿರುವ ಪ್ರಸಂಗ ನಡೆದಿದೆ. ಶಿವಮೊಗ್ಗ ನಗರದ ಭಾರ್ಗವಿ ಪೆಟ್ರೋಲ್ ಬಂಕ್ನಲ್ಲಿ ಇಂತಹದೊಂದು ಎಡವಟ್ಟು ನಡೆದಿದೆ. ಖಾಸಗಿ ಕೆಲಸದ ನಿಮಿತ್ತ ನಟ ವಿಜಯ ರಾಘವೇಂದ್ರ ಶಿವಮೊಗ್ಗಕ್ಕೆ ಆಗಮಿಸಿದ್ದರು. ಈ ವೇಳೆ ಭಾರ್ಗವಿ ಪೆಟ್ರೋಲ್ ಬಂಕ್ನಲ್ಲಿ ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಿದ್ದಾರೆ. ಆದರೆ ಬಂಕ್ ಸಿಬ್ಬಂದಿ ಮೆಚ್ಚಿನ ನಟನ ನೋಡುವ ಭರದಲ್ಲಿ ಚಿನ್ನಾರಿ ಮುತ್ತನ ಕಾರಿಗೆ ಪೆಟ್ರೋಲ್ ಹಾಕುವ ಬದಲು ಡೀಸೆಲ್ ಹಾಕಿ ಎಡವಟ್ಟು ಮಾಡಿದ್ದಾರೆ. ಹೀಗಾಗಿ ಕಾರಿನ […]
ಶಿವಮೊಗ್ಗ: ನಟ ವಿಜಯ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿರುವ ಪ್ರಸಂಗ ನಡೆದಿದೆ. ಶಿವಮೊಗ್ಗ ನಗರದ ಭಾರ್ಗವಿ ಪೆಟ್ರೋಲ್ ಬಂಕ್ನಲ್ಲಿ ಇಂತಹದೊಂದು ಎಡವಟ್ಟು ನಡೆದಿದೆ.
ಖಾಸಗಿ ಕೆಲಸದ ನಿಮಿತ್ತ ನಟ ವಿಜಯ ರಾಘವೇಂದ್ರ ಶಿವಮೊಗ್ಗಕ್ಕೆ ಆಗಮಿಸಿದ್ದರು. ಈ ವೇಳೆ ಭಾರ್ಗವಿ ಪೆಟ್ರೋಲ್ ಬಂಕ್ನಲ್ಲಿ ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಿದ್ದಾರೆ. ಆದರೆ ಬಂಕ್ ಸಿಬ್ಬಂದಿ ಮೆಚ್ಚಿನ ನಟನ ನೋಡುವ ಭರದಲ್ಲಿ ಚಿನ್ನಾರಿ ಮುತ್ತನ ಕಾರಿಗೆ ಪೆಟ್ರೋಲ್ ಹಾಕುವ ಬದಲು ಡೀಸೆಲ್ ಹಾಕಿ ಎಡವಟ್ಟು ಮಾಡಿದ್ದಾರೆ.
ಹೀಗಾಗಿ ಕಾರಿನ ಇಂಜಿನ್ ಸೀಜ್ ಆಗಿ, ಈಗ ಕಾರು ಓಡಿಸಲಾಗದಂತಾಗಿದೆ. ಬಳಿಕ ಬಂಕ್ ಸಿಬ್ಬಂದಿ ಹಾಗೂ ಮಾಲೀಕ, ವಿಜಯ ರಾಘವೇಂದ್ರ ಬಳಿ ಕ್ಷಮೆ ಕೇಳಿ ಕಾರು ರಿಪೇರಿಗೆ ಕಳುಹಿಸಿದ್ದಾರೆ. ನಂತರ ನಟ ವಿಜಯ ರಾಘವೇಂದ್ರ ಮತ್ತೊಂದು ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ!