AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

28ರಲ್ಲಿ ನನ್ನ ವಯಸ್ಸು ಬಹಳ ವರ್ಷ ಕಾಲ ನಿಂತುಹೋಗಿತ್ತು! ತುಂಟ ನಗೆ ಬೀರಿದ ಸ್ವರಾ ಭಾಸ್ಕರ್

ಹೆಣ್ಣುಮಕ್ಕಳು ಸಿರ್​​ರ್​ ಅಂತಾ ಸಿಟ್ಟಿಗೇಳುವ ವಿಷಯ ಅಂದ್ರೆ ಇದೇ ಅನ್ಸುತ್ತೆ.. ಯಾರಾದ್ರು ನಿಮ್ಮ ವಯಸ್ಸು ಎಷ್ಟು? ಎಂದು ಕೇಳಿಬಿಟ್ಟರೆ ಹುಡುಗಿಯರು ರೊಚ್ಚಿಗೇಳ್ತಾರೆ. ಏನ್ ಬೇಕಾದ್ರೂ ಕೇಳಿ ವಯಸ್ಸೊಂದನ್ನು ಬಿಟ್ಟು ಅನ್ನೊ ಈ ಕಾಲದಲ್ಲಿ.. ನಟಿ ಸ್ವರಾ ಭಾಸ್ಕರ್ ದೊಡ್ಡ ಸತ್ಯವೊಂದನ್ನು ಕಿರುನಗೆಯೊಂದಿಗೆ ಬಿಚ್ಚಿಟ್ಟಿದ್ದಾರೆ. ತನ್ನ ವಯಸ್ಸಿನ ಬಗ್ಗೆಯೇ ಅಪಸ್ವರ ಪಲುಕಿದ್ದ ಸ್ವರಾ ಭಾಸ್ಕರ್! ಹಿಂದಿ ಸಿನಿಮಾಗಳಲ್ಲಿ ಮಿಂಚಿ ಫ್ಲೇಸ್ ವೆಬ್ ಸರಣಿ ಮೂಲಕ ಡಿಜಿಟಲ್ ಲೋಕಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್ ತನ್ನ ವಯಸ್ಸಿನ ರಹಸ್ಯವನ್ನು ರಟ್ಟುಗೊಳಿಸಿದ್ದಾರೆ. […]

28ರಲ್ಲಿ ನನ್ನ ವಯಸ್ಸು ಬಹಳ ವರ್ಷ ಕಾಲ ನಿಂತುಹೋಗಿತ್ತು! ತುಂಟ ನಗೆ ಬೀರಿದ ಸ್ವರಾ ಭಾಸ್ಕರ್
ಸಾಧು ಶ್ರೀನಾಥ್​
|

Updated on: Nov 14, 2020 | 4:15 PM

Share

ಹೆಣ್ಣುಮಕ್ಕಳು ಸಿರ್​​ರ್​ ಅಂತಾ ಸಿಟ್ಟಿಗೇಳುವ ವಿಷಯ ಅಂದ್ರೆ ಇದೇ ಅನ್ಸುತ್ತೆ.. ಯಾರಾದ್ರು ನಿಮ್ಮ ವಯಸ್ಸು ಎಷ್ಟು? ಎಂದು ಕೇಳಿಬಿಟ್ಟರೆ ಹುಡುಗಿಯರು ರೊಚ್ಚಿಗೇಳ್ತಾರೆ. ಏನ್ ಬೇಕಾದ್ರೂ ಕೇಳಿ ವಯಸ್ಸೊಂದನ್ನು ಬಿಟ್ಟು ಅನ್ನೊ ಈ ಕಾಲದಲ್ಲಿ.. ನಟಿ ಸ್ವರಾ ಭಾಸ್ಕರ್ ದೊಡ್ಡ ಸತ್ಯವೊಂದನ್ನು ಕಿರುನಗೆಯೊಂದಿಗೆ ಬಿಚ್ಚಿಟ್ಟಿದ್ದಾರೆ.

ತನ್ನ ವಯಸ್ಸಿನ ಬಗ್ಗೆಯೇ ಅಪಸ್ವರ ಪಲುಕಿದ್ದ ಸ್ವರಾ ಭಾಸ್ಕರ್! ಹಿಂದಿ ಸಿನಿಮಾಗಳಲ್ಲಿ ಮಿಂಚಿ ಫ್ಲೇಸ್ ವೆಬ್ ಸರಣಿ ಮೂಲಕ ಡಿಜಿಟಲ್ ಲೋಕಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್ ತನ್ನ ವಯಸ್ಸಿನ ರಹಸ್ಯವನ್ನು ರಟ್ಟುಗೊಳಿಸಿದ್ದಾರೆ. 32 ವರ್ಷದ ವಯಸ್ಸಿನ ನಟಿ ತನಗೆ 28 ವರ್ಷವೆಂದು ಬಹಳಷ್ಟು ವರುಷ ಕಾಲ ಹರುಷದಿಂದ ಹೇಳುತ್ತಾ ಬಂದಿದ್ದರು. 5 ವರ್ಷ ಕಡಿಮೆ ಎಂದರೆ 28 ವರ್ಷ ಎಂಬಂತೆ ಕೇಕ್ ನಲ್ಲಿ ಸೂಚಿಸಿದ್ದರು. ಇದೀಗ ಎಲ್ಲರ ಮುಂದೆ ಅದು ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ. ಅದೂ 32ನೇ ವಯಸ್ಸಿನ ಹುಟ್ಟುಹಬ್ಬ ಸಂದರ್ಭದಲ್ಲಿ ಈ ಭಯಂಕರ ಸತ್ಯವನ್ನು ಹೊರಹಾಕಿರುವುದು ಗಮನಾರ್ಹ! ಆದರೆ ಈ ಸತ್ಯವನ್ನು ಸಂದರ್ಶನವೊಂದರಲ್ಲಿ ಸ್ವತಃ ಸ್ವರಾ ಭಾಸ್ಕರ್ ಅವರೇ ತಿಳಿಸಿದ್ದಾರೆ.

ಸಂದರ್ಶನದಲ್ಲಿ ಸ್ವರಾ ಭಾಸ್ಕರ್ ಅವರು ‘ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳುತ್ತಾ ಬಂದಿದ್ದೇನೆ. ಪ್ರತಿ ಬಾರಿ ಸುಳ್ಳು ಹೇಳುವಾಗ ನನಗೆ ನಗು ಬರುತ್ತಿತ್ತು! ನನ್ನ ಸುಳ್ಳಿನ ಬಗ್ಗೆ ಯಾರೊಬ್ಬರೂ ಅನುಮಾನ ವ್ಯಕ್ತಪಡಿಸಿರಲಿಲ್ಲ. ಆದರೂ ಕೆಲವರಿಗೇ ಈ ವಿಚಾರ ತಿಳಿಸಿದ್ದೆ. ಈ ಸುಳ್ಳಿನ ಹಿಂದೆ ನಿಮ್ಮ ಉದ್ದೇಶವೇನಿದೆ? ಹೇಳುವ ಸುಳ್ಳನ್ನಾದರೂ ಸರಿಯಾಗಿ ಹೇಳಿ ಎಂದಿದ್ದರು. ಆದರೆ ಎಲ್ಲರ ಮುಂದೆ ಇದೀಗ ನನ್ನ ವಯಸ್ಸಿನ ಸುಳ್ಳಿನ ವಿಚಾರದ ಬಗ್ಗೆ ನಾನೇ ಒಪ್ಪಿಕೊಳ್ಳುತ್ತಿದ್ದೇನೆ’ ಎಂದು ತುಂಟ ನಗೆ ಬೀರಿದ್ದಾರೆ ಸ್ವರಾ ಭಾಸ್ಕರ್.