‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’; ತಮಿಳು ನಟನ ಹೊಗಳಿಕೆ

| Updated By: ಮಂಜುನಾಥ ಸಿ.

Updated on: Mar 02, 2025 | 3:19 PM

Tamil actor: ಕನ್ನಡ ಚಿತ್ರರಂಗ ಇಂದು ಭಾರತದ ಪ್ರಮುಖ ಚಿತ್ರರಂಗಗಳಲ್ಲಿ ಒಂದು. ಕನ್ನಡ ಚಿತ್ರರಂಗದ ವಾರ್ಷಿಕ ವಹಿವಾಟು ಸಾವಿರ ಕೋಟಿಗೂ ಹೆಚ್ಚಾಗಿದೆ. ‘ಕೆಜಿಎಫ್’ ಸೇರಿದಂತೆ ಹಲವು ಸಿನಿಮಾಗಳು ದೊಡ್ಡ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದ ಹೆಸರು ದೇಶದೆಲ್ಲೆಡೆ ಕೇಳುವಂತೆ ಮಾಡಿದೆ. ಇದೀಗ ತಮಿಳು ನಟನೊಬ್ಬ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ.

‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’; ತಮಿಳು ನಟನ ಹೊಗಳಿಕೆ
Kgf Kantara
Follow us on

ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಸಾಕಷ್ಟು ಹಿಟ್ ಸಿನಿಮಾಗಳು ಬಂದಿವೆ. ಆದರೆ, ಬಿಸ್ನೆಸ್ ಎನ್ನುವ ವಿಚಾರ ಬಂದಾಗ ನೂರಾರು ಕೋಟಿ ರೂಪಾಯಿ ಮಾಡಿದ ಚಿತ್ರಗಳು ಕಡಿಮೆ. ಆದರೆ, ‘ಕೆಜಿಎಫ್’, ‘ಕೆಜಿಎಫ್ 2’, ‘ಕಾಂತಾರ’ ರೀತಿಯ ಸಿನಿಮಾಗಳು ಬಂದು ಇಂಡಸ್ಟ್ರಿಯನ್ನೇ ಬದಲಿಸಿತು. ಈ ಬಗ್ಗೆ ತಮಿಳು ನಟನೋರ್ವ ಮಾತನಾಡಿದ್ದಾರೆ. ತಮಿಳು ಸಿನಿಮಾ ಕಲಾವಿದರಿಗೆ, ನಿರ್ದೇಶಕರಿಗೆ ಕಿವಿ ಮಾತು ಹೇಳುವ ಕೆಲಸವನ್ನು ಅವರು ಮಾಡಿದ್ದಾರೆ. ಅವರು ಹೇಳಿದ್ದು ಏನು ಎಂಬ ಬಗ್ಗೆ ಇಲ್ಲಿದೆ ವಿವರ.

ಕನ್ನಡ ಚಿತ್ರರಂಗದಲ್ಲಿ ‘ಕೆಜಿಎಫ್’, ‘ಕೆಜಿಎಫ್ 2’ ಹಾಗೂ ‘ಕಾಂತಾರ’ ಚಿತ್ರಗಳು ಹೊಸ ಮೈಲಿಗಲ್ಲು ಸೃಷ್ಟಿಸಿದವು. ಪರಭಾಷೆಯಲ್ಲೂ ಈ ಸಿನಿಮಾ ಸದ್ದು ಮಾಡಿತು. ಈ ಚಿತ್ರದ ಮೂಲಕ ರಿಷಬ್, ಯಶ್, ಪ್ರಶಾಂತ್ ನೀಲ್ ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಬರುವಂತೆ ಆಯಿತು. ತಮಿಳಿನಲ್ಲೂ ಸ್ಟಾರ್ ಹೀರೋಗಳು ಇದ್ದಾರೆ. ಆದರೆ, ಅವರು ಅಷ್ಟು ಸದ್ದು ಮಾಡುತ್ತಿಲ್ಲ ಅನ್ನೋದು ತಮಿಳು ನಟನ ಆರೋಪ.

ಈ ರೀತಿ ಆರೋಪ ಮಾಡಿದ್ದು ಬೇರಾರೂ ಅಲ್ಲ, ನಟ ಶ್ಯಾಮ್ ಅವರು. ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಶ್ಯಾಮ್ ಅವರು ಈಗ ಮಾತನಾಡಿದ್ದಾರೆ. ‘ಕರ್ನಾಟಕದಲ್ಲಿ ಕಾಂತಾರ, ಕೆಜಿಎಫ್ ಪ್ಯಾನ್ ಇಂಡಿಯಾ ಹಿಟ್. ತೆಲುಗಿನಲ್ಲಿ ಪುಷ್ಪ ಸೂಪರ್ ಹಿಟ್. ಬಾಹುಬಲಿ ಕೇಳುವ ಮಾತೇ ಇಲ್ಲ. ಮಲಯಾಳಂನಲ್ಲಿ ಕಂಟೆಂಟ್​ಗೆ ಪ್ರಾಮುಖ್ಯತೆ ಕೊಡುತ್ತಾರೆ’ ಎಂದಿದ್ದಾರೆ ಅವರು.

ಇದನ್ನೂ ಓದಿ:‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ ಸುದೀಪ್​

‘ತಮಿಳಿನಲ್ಲಿ ಕಂಟೆಂಟ್​ ಇಲ್ಲ. ಸಿನಿಮಾ ದೊಡ್ಡ ಸದ್ದು ಮಾಡುತ್ತದೆ. ಆದರೆ, ಒಳಗೆ ಏನೂ ಇರುವುದಿಲ್ಲ. ನಮ್ಮ ಸಿನಿಮಾಗಳೂ ಪ್ಯಾನ್ ಇಂಡಿಯಾ ಆಗಬೇಕು. ಇಲ್ಲಿ ಸೂಪರ್​ಸ್ಟಾರ್​ಗಳು ಇದ್ದಾರೆ. ದಳಪತಿ, ತಲಾ ಇದ್ದಾರೆ. ಪ್ಯಾನ್ ಇಂಡಿಯಾ ಸದ್ದು ಮಾಡುತ್ತಿಲ್ಲ’ ಎಂದಿದ್ದಾರೆ ಶ್ಯಾಮ್.

‘ಕನ್ನಡ ಇಂಡಸ್ಟ್ರಿ ಒಂದು ಕಾಲದಲ್ಲೀ ಸಣ್ಣ ಇಂಡಸ್ಟ್ರಿ ಆಗಿತ್ತು. ಅದನ್ನು ಪರಿಗಣಿಸಲೂ ಸಾಧ್ಯವಿಲ್ಲವಾಗಿತ್ತು. ಆದರೆ, ಈಗ ಆ ಇಂಡಸ್ಟ್ರಿ ಆಳುತ್ತಿದೆ. ಮಲಯಾಳಂ ಇಂಡಸ್ಟ್ರಿಯಲ್ಲಿ ಕಂಟೆಂಟ್ ಸೂಪರ್’ ಎಂದು ಹೇಳಿದ್ದಾರೆ ಅವರು. ಸದ್ಯ ಕನ್ನಡದ ‘ಟಾಕ್ಸಿಕ್’, ‘ಕಾಂತಾರ: ಚಾಪ್ಟರ್ 1’ ಬಗ್ಗೆ ಪರಭಾಷಿಗರೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ