ಪ್ರೀತಿಯ ಡಾರ್ಲಿಂಗ್​​ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ತನಿಷಾ ಕುಪ್ಪಂಡ

|

Updated on: Jul 15, 2024 | 11:58 AM

ತನಿಷಾ ಕುಪ್ಪಂಡ ಅವರು ಹಂಚಿಕೊಂಡಿರೋ ವಿಡಿಯೋದ ಕ್ಯಾಪ್ಶನ್ ನೋಡಿದರೆ ಕೆಲವರು ಅಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನು ನೋಡಿದ ಅನೇಕರು ಕಮೆಂಟ್ ಮಾಡುವವರಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದಾಗ್ಯೂ ಈ ವಿಡಿಯೋಗೆ ವಿವಿಧ ರೀತಿಯ ಕಮೆಂಟ್​ಗಳು ಬರುತ್ತಿವೆ.

ಪ್ರೀತಿಯ ಡಾರ್ಲಿಂಗ್​​ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ತನಿಷಾ ಕುಪ್ಪಂಡ
ತನಿಷಾ
Follow us on

ಕಿರುತೆರೆ ಹಾಗೂ ಹಿರಿತೆರೆ ಮೂಲಕ ಫೇಮಸ್ ಆದವರು ತನಿಷಾ ಕುಪ್ಪಂಡ. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ನೀಡಿದ್ದು ‘ಬಿಗ್ ಬಾಸ್ ಕನ್ನಡ ಸೀಸನ್ 10’. ಈಗ ಅವರು ಏನೇ ಮಾಡಿದರೂ ಸುದ್ದಿ ಆಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ ಸಾಕಷ್ಟು ಚರ್ಚೆ ಆಗುತ್ತದೆ. ಈಗ ಅವರು ಪ್ರೀತಿಯಿಂದ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್ ಭರ್ಜರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಅವರು ಹಾಕಿರೋ ವಿಡಿಯೋದಲ್ಲಿ ಏನಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

‘ಹ್ಯಾಪಿ ಬರ್ತ್ ​ಡೇ ಡಾರ್ಲಿಂಗ್’ ಎಂದು ಪೋಸ್ಟ್ ಹಾಕಿದ್ದಾರೆ ತನಿಷಾ ಕುಪ್ಪಂಡ. ಇದರಲ್ಲಿ ಅವರು ವ್ಯಕ್ತಿಯೊಬ್ಬರ ಜೊತೆ ಇದ್ದಾರೆ. ಈ ವಿಡಿಯೋದಲ್ಲಿ ಅವರು ಸ್ವಿಮ್ಮಿಂಗ್ ಮಾಡುತ್ತಿದ್ದಾರೆ. ಅಂದಹಾಗೆ ಅವರ ಜೊತೆ ಇರೋದು ತನಿಷಾ ಅವರ ಅಣ್ಣ. ‘ನಿಮಗೆ ಬೆಂಬಲ, ಯಶಸ್ಸು, ನೆಮ್ಮದಿ ಎಲ್ಲವೂ ಸಿಗಲಿ. ಲವ್ ಯೂ ಸೋ ಮಚ್ ಅಪ್ಪು. ಮೊದ್ಲೆಲ್ಲಾ ತಮ್ಮ ಅಂತಿದ್ರು, ಇವಾಗ ಅಣ್ಣ ಅಂತಾರೆ. ಸ್ವಲ್ಪ ಕಮ್ಮಿ ಕಿತ್ತಾಡು. ಇಷ್ಟೇ ಲೈಫ್. ಸಾಕು ಅಲ್ವಾ ಮರ ಯಾಕೆ. ಒಳ್ಳೆಯ ದಿನಗಳು ಬರಲಿ’ ಎಂದು ಅವರು ಕೋರಿದ್ದಾರೆ.

ಈ ವಿಡಿಯೋದ ಕ್ಯಾಪ್ಶನ್ ನೋಡಿದರೆ ಕೆಲವರು ಅಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನು ನೋಡಿದ ಅನೇಕರು ಕಮೆಂಟ್ ಮಾಡುವವರಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ. ‘ಅವರು ತನಿಷಾರ ಸಹೋದರ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಆದಾಗ್ಯೂ ಈ ವಿಡಿಯೋಗೆ ವಿವಿಧ ರೀತಿಯ ಕಮೆಂಟ್​ಗಳು ಬರುತ್ತಿವೆ.

ಇದನ್ನೂ ಓದಿ: ‘ಪೆನ್​ಡ್ರೈವ್’ ಚಿತ್ರದಲ್ಲಿ ನಟಿಸಲಿದ್ದಾರೆ ತನಿಷಾ ಕುಪ್ಪಂಡ; ಸೆಬಾಸ್ಟಿನ್ ನಿರ್ದೇಶನದಲ್ಲಿರೋ ಸಿನಿಮಾದ ಕಥೆ ಏನು?

ಬಿಗ್ ಬಾಸ್​ನಿಂದ ಬಂದ ಬಳಿಕ ತನಿಷಾ ಕುಪ್ಪಂಡ ಅವರ ಖ್ಯಾತಿ ಹೆಚ್ಚಿದೆ. ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರಿಗೆ ಇತ್ತೀಚೆಗೆ ‘ಪೆನ್​ಡ್ರೈವ್’ ಹೆಸರಿನ ಸಿನಿಮಾ ಆಫರ್ ಸಿಕ್ಕಿದೆ. ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಡೇವಿಡ್ ಸೆಬಾಸ್ಟಿಯನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:54 am, Mon, 15 July 24