ನಿರ್ದೇಶಕರಿಗೆ ಮೆಸೇಜ್​ ಮಾಡಿ ರಕ್ಷಿತ್​ ಶೆಟ್ಟಿ ನಟನೆಯ ಸಿನಿಮಾದಲ್ಲಿ ಚಾನ್ಸ್​ ಕೇಳಿದ ರುಕ್ಮಿಣಿ ವಸಂತ್​

ಇತ್ತೀಚೆಗೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಯಿತು. ಆಗ ವೇದಿಕೆ ಮೇಲೆ ಅನೇಕ ವಿಚಾರಗಳನ್ನು ರುಕ್ಮಿಣಿ ವಸಂತ್​ ಅವರು ಹಂಚಿಕೊಂಡರು. ನಿರ್ದೇಶಕ ಹೇಮಂತ್​ ಎಂ. ರಾವ್​ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಮೆಸೇಜ್​ ಮಾಡಿ ಅವಕಾಶ ಪಡೆದಿದ್ದರ ಬಗ್ಗೆ ಅವರು ವಿವರಿಸಿದರು.

ನಿರ್ದೇಶಕರಿಗೆ ಮೆಸೇಜ್​ ಮಾಡಿ ರಕ್ಷಿತ್​ ಶೆಟ್ಟಿ ನಟನೆಯ ಸಿನಿಮಾದಲ್ಲಿ ಚಾನ್ಸ್​ ಕೇಳಿದ ರುಕ್ಮಿಣಿ ವಸಂತ್​
ರುಕ್ಮಿಣಿ ವಸಂತ್​, ಹೇಮಂತ್​ ರಾವ್​, ರಕ್ಷಿತ್​ ಶೆಟ್ಟಿ

Updated on: Aug 22, 2023 | 6:43 PM

ಯುವ ನಟಿ ರುಕ್ಮಿಣಿ ವಸಂತ್​ (Rukmini Vasanth) ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. 2019ರಲ್ಲಿ ಬಿಡುಗಡೆ ಆದ ‘ಬೀರ್​ಬಲ್​’ ಸಿನಿಮಾದಲ್ಲಿ ನಟಿಸುವ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಈಗ ಅವರು ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradaache Ello) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರುತ್ತಿದೆ. ಸೆಪ್ಟೆಂಬರ್ 1ರಂದು ಮೊದಲ ಭಾಗ ರಿಲೀಸ್​ ಆಗಲಿದೆ. ನಿರ್ದೇಶಕ ಹೇಮಂತ್​ ಎಂ. ರಾವ್​ (Hemanth M Rao) ಅವರು ಇದಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ರಕ್ಷಿತ್​ ಶೆಟ್ಟಿ ಜೊತೆ ಈ ಸಿನಿಮಾದಲ್ಲಿ ನಾಯಕಿಯರಾಗಿ ರುಕ್ಮಿಣಿ ವಸಂತ್​ ಮತ್ತು ಚೈತ್ರಾ ಆಚಾರ್​ ಅಭಿನಯಿಸಿದ್ದಾರೆ. ಇಂಥ ಬಹುನಿರೀಕ್ಷಿತ ಸಿನಿಮಾದಲ್ಲಿ ರುಕ್ಮಿಣಿ ವಸಂತ್​ ಅವರು ಅವಕಾಶ ಪಡೆದಿದ್ದೇ ಒಂದು ಇಂಟರೆಸ್ಟಿಂಗ್​ ಸಂಗತಿ.

ಮೊದಲು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಟೈಟಲ್​ ಪೋಸ್ಟರ್​ ಬಿಡುಗಡೆ ಆಯಿತು. ಇದು ರಕ್ಷಿತ್​ ಶೆಟ್ಟಿ ಮತ್ತು ಹೇಮಂತ್​ ರಾವ್​ ಕಾಂಬಿನೇಷನ್​ನ ಸಿನಿಮಾ ಎಂಬ ಕಾರಣಕ್ಕೆ ಬಹಳ ನಿರೀಕ್ಷೆ ಮೂಡಿತು. ಯಾಕೆಂದರೆ ಇದೇ ಕಾಂಬಿನೇಷನ್​ನಲ್ಲಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಮೂಡಿಬಂದಿತ್ತು. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಅನೌನ್ಸ್​ ಆದಾಗ ಅದು ರುಕ್ಮಿಣಿ ವಸಂತ್​ ಅವರ ಗಮನ ಸೆಳೆಯಿತು. ಕೂಡಲೇ ಅವರು ನಿರ್ದೇಶಕರಿಗೆ ಮೆಸೇಜ್​ ಮಾಡಿ ಅವಕಾಶ ಕೇಳಿದರು.

ರಕ್ಷಿತ್​ ಶೆಟ್ಟಿ-ರಾಜ್​ ಬಿ. ಶೆಟ್ಟಿ ನಡುವೆ ಸ್ಪರ್ಧೆ ಇದೆಯಾ? ಬಹಿರಂಗ ವೇದಿಕೆಯಲ್ಲಿ ‘ಟೋಬಿ’ ಹೀರೋ ಹೇಳಿದ್ದಿಷ್ಟು..

ಇತ್ತೀಚೆಗೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಯಿತು. ಆಗ ವೇದಿಕೆ ಮೇಲೆ ಅನೇಕ ವಿಚಾರಗಳನ್ನು ರುಕ್ಮಿಣಿ ವಸಂತ್​ ಅವರು ಹಂಚಿಕೊಂಡರು. ನಿರ್ದೇಶಕ ಹೇಮಂತ್​ ರಾವ್​ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಮೆಸೇಜ್​ ಮಾಡಿ ಅವಕಾಶ ಪಡೆದಿದ್ದರ ಬಗ್ಗೆ ಅವರು ವಿವರಿಸಿದರು. ಆ ಆಸಕ್ತಿಕರ ಸಂಗತಿ ಬಗ್ಗೆ ಇಲ್ಲಿದೆ ಮಾಹಿತಿ.

‘ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಹಿಟ್ ಆಗುತ್ತೆ’; ಕಾರಣಗಳೊಂದಿಗೆ ವಿವರಿಸಿದ ರಕ್ಷಿತ್ ಶೆಟ್ಟಿ

‘ಸಮುದ್ರದ ಪೋಸ್ಟರ್​ ನೋಡಿದ ತಕ್ಷಣ ಈ ಸಿನಿಮಾದಲ್ಲಿ ನಾನು ನಟಿಸಲೇಬೇಕು ಎಂದುಕೊಂಡೆ. ನಾನು ಇನ್​ಸ್ಟಾಗ್ರಾಮ್​ನಲ್ಲಿ ನಿರ್ದೇಶಕ ಹೇಮಂತ್​ ರಾವ್​ ಅವರಿಗೆ ಮೆಸೇಜ್​ ಮಾಡಿದೆ. ನಾನು ಒಂದು ಸಿನಿಮಾ ಮಾಡಿದ್ದೇನೆ. ಇದು ನನ್ನ ರೆಸ್ಯೂಮೆ. ದಯವಿಟ್ಟು ನನಗೆ ಆಡಿಷನ್​ ಮಾಡಿ ಅಂತ ಮೆಸೇಜ್​ ಕಳಿಸಿದೆ. ನಂತರ ಆಡಿಷನ್​ ನೀಡಿ ಸೆಲೆಕ್ಟ್​ ಆದೆ. ನಾನು ಆಯ್ಕೆ ಆಗಿದ್ದೇನೆ ಎಂಬುದು ಖಚಿತ ಆದಾಗ ಅದನ್ನು ವಿವರಿಸಲು ನನಗೆ ಪದಗಳೇ ಇರಲಿಲ್ಲ’ ಎಂದು ರುಕ್ಮಿಣಿ ವಂಸತ್​ ಅವರು ಹೇಳಿದ್ದಾರೆ.

ರುಕ್ಮಿಣಿ ವಸಂತ್​ ಇನ್​ಸ್ಟಾಗ್ರಾಮ್​ ಪೋಸ್ಟ್​:

ಈಗಾಗಲೇ ರುಕ್ಮಿಣಿ ವಸಂತ್​ ಅವರಿಗೆ ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತಿವೆ. ಗಣೇಶ್​ ನಟನೆ ‘ಬಾನ ದಾರಿಯಲ್ಲಿ’ ಸಿನಿಮಾಗೆ ಅವರು ಆಯ್ಕೆ ಆಗಿದ್ದಾರೆ. ಶಿವರಾಜ್​ಕುಮಾರ್​ ನಟನೆಯ ‘ಭೈರತಿ ರಣಗಲ್​’ ಸಿನಿಮಾದಲ್ಲೂ ರುಕ್ಮಿಣಿ ನಟಿಸುತ್ತಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್​ ಆದ ಬಳಿಕ ಅವರಿಗೆ ಇನ್ನಷ್ಟು ಅವಕಾಶಗಳು ಹರಿದು ಬರಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us