ಸ್ಯಾಂಡಲ್ವುಡ್ನಲ್ಲಿ ಸದ್ಯ ಎಲ್ಲೆಲ್ಲೂ ದರ್ಶನ್ (Darshan) ವಿಚಾರವೇ ಚರ್ಚೆ ಆಗುತ್ತಿದೆ. ಈ ಮಧ್ಯೆ ಟೈಟಲ್ಗಾಗಿ ಕಿತ್ತಾಟ ಶುರುವಾಗಿದೆ. ನಿರ್ದೇಶಕ ನಾಗಾಭರಣ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಲಾಗಿದೆ. ನಿರ್ಮಾಪಕ ಕಿರಣ್ ತೋಟಂಬೈಲೆ ಅವರು ನಾಗಾಭರಣ ವಿರುದ್ಧ ದೂರು ನೀಡಿದವರು. ಇದಕ್ಕೆ ಕಾರಣವಾಗಿದ್ದು ‘ನಾಡಪ್ರಭು ಕೆಂಪೇಗೌಡ’ ಟೈಟಲ್. ಅಷ್ಟಕ್ಕೂ ಏನಿದು ಕಿತ್ತಾಟ ಎನ್ನುವ ಪ್ರಶ್ನೆಗೆ ಈ ಸ್ಟೋರಿಯಲ್ಲಿದೆ ಉತ್ತರ
ಕಿರಣ್ ಅವರು ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಹೆಸರಿನ ಸಿನಿಮಾ ಘೋಷಣೆ ಮಾಡಿ ಕೆಲವು ತಿಂಗಳು ಕಳೆದಿದೆ. ನಿರ್ದೇಶಕ ಬಾಬು ಅವವರು ಈ ಚಿತ್ರವನ್ನು ನಿರ್ದೇನ ಮಾಡುತ್ತಿದ್ದಾರೆ. ಇತ್ತ, ನಾಗಾಭರಣ ಅವರು ‘ನಾಡಪ್ರಭು ಕೆಂಪೇಗೌಡ’ ಟೈಟಲ್ ರಿಜಿಸ್ಟರ್ ಮಾಡಿಸಿ, ಸಿನಿಮಾ ಘೋಷಿಸಿದ್ದಾರೆ. ಇದಕ್ಕೆ ಡಾಲಿ ಧನಂಜಯ್ ಹೀರೋ.
ನಾಡಪ್ರಭು ಕೆಂಪೇಗೌಡ ಕಾಪಿರೈಟ್ಸ್ ನಮ್ಮದು ಎಂದು ನಾಗಾಭರಣ ಹೇಳಿಕೊಂಡಿದ್ದಾರೆ. ಜೊತೆಗೆ ಕಿರಣ್ ಅವರಿಗೆ ನಿರ್ಬಂಧಕ ನೋಟಿಸ್ ಕಳುಹಿಸಿದ್ದಾರೆ. ಜೂನ್ 27 ಕ್ಕೆ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಿತ್ರದ ಮುಹೂರ್ತ ಸಮಾರಂಭ ಇಟ್ಟುಕೊಳ್ಳಲಾಗಿತ್ತು. ಈಗ ಈ ಎಲ್ಲಾ ಬೆಳವಣಿಗೆಯಿಂದ ಮುಹೂರ್ತ ಮುಂದಕ್ಕೆ ಹೋಗಿದೆ.
ಇದನ್ನೂ ಓದಿ: ಕೆಂಪೇಗೌಡರ ಬಗ್ಗೆ ಮಾಡ್ತಿರೋ ಸಿನಿಮಾಗೆ ತಡೆ ತಂದ ನಾಗಾಭರಣ
ಸದ್ಯ ಇರುವ ಸ್ಟೇ ವೆಕೇಟ್ ಮಾಡಲು ಕೋರ್ಟ್ನಲ್ಲಿ ಕಿರಣ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ‘ನಾಡಪ್ರಭು ಅನ್ನುವುದು ಸಾರ್ವತ್ರಿಕ ಹೆಸರು. ಅದರ ಮೇಲೆ ಸ್ಟೇ ತರಲು ಸಾಧ್ಯವಿಲ್ಲ. ಅವರು ಕಾಪಿರೈಟ್ಸ್ ರಿಜಿಸ್ಟರ್ ಮಾಡಿಸಿಯೇ ಇಲ್ಲ. ಕೋರ್ಟ್ಗೆ ಸುಳ್ಳು ದಾಖಲೆ ನೀಡಿದ್ದಾರೆ’ ಎಂದಿದ್ದಾರೆ ಕಿರಣ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.