Toxic Release Date: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗೋದು ಯಾವಾಗ? ಇಲ್ಲಿದೆ ವಿವರ

‘ಟಾಕ್ಸಿಕ್’ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅಭಿಮಾನಿಗಳು ಟೈಟಲ್​ನ ಇಷ್ಟಪಟ್ಟಿದ್ದಾರೆ. ಈ ಸಿನಿಮಾ 2025ರ ಏಪ್ರಿಲ್ 10ರಂದು ರಿಲೀಸ್ ಆಗಲಿದೆ.

Toxic Release Date: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗೋದು ಯಾವಾಗ? ಇಲ್ಲಿದೆ ವಿವರ
ಯಶ್
Edited By:

Updated on: Dec 08, 2023 | 12:05 PM

ಯಶ್​ ನಟನೆಯ ಮುಂದಿನ ಚಿತ್ರಕ್ಕೆ ‘ಟಾಕ್ಸಿಕ್’ (Toxic Movie) ಟೈಟಲ್ ಫೈನಲ್ ಮಾಡಲಾಗಿದೆ. ಈ ಚಿತ್ರದ ಟೈಟಲ್ ರಿವೀಲ್ ಆಗಿದೆ. ಯಶ್ ಅವರ ಲುಕ್ ಹೇಗಿರಬಹುದು ಎನ್ನುವ ಬಗ್ಗೆ ಒಂದು ಹಿಂಟ್ ನೀಡಲಾಗಿದೆ. ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಬಗ್ಗೆಯೂ ತಂಡ ಮಾಹಿತಿ ಹಂಚಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2025ರ ಏಪ್ರಿಲ್ 10ರಂದು ಸಿನಿಮಾ ರಿಲೀಸ್ ಆಗಲಿದೆ. ಯಶ್ ಹೊಸ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಇನ್ನೂ ಸಾಕಷ್ಟು ಸಮಯ ಕಾಯಬೇಕು.

ಪರಭಾಷೆಗಳಲ್ಲಿ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಗೀತು ಮೋಹನ್​ದಾಸ್ ಅವರು ‘ಟಾಕ್ಸಿಕ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಟೈಟಲ್​ನ ಇಂದು (ಡಿಸೆಂಬರ್ 8) ರಿವೀಲ್ ಮಾಡಲಾಗಿದೆ. ಕೈಯಲ್ಲಿ ಗನ್ ಹಿಡಿದು, ತಲೆಗೆ ಟೋಪಿ ಹಾಕಿ, ಬಾಯಲ್ಲಿ ಸಿಗಾರ್ ಹಿಡಿದುಕೊಂಡಿರುವ ರೀತಿಯಲ್ಲಿ ‘ಟಾಕ್ಸಿಕ್’ ಪೋಸ್ಟರ್ ಮೂಡಿ ಬಂದಿದೆ. ವಿಶ್ವಾದ್ಯಂತ ಈ ಸಿನಿಮಾ 10-4-2025ರಂದು ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ನೀಡಿದೆ.

‘ಕೆಜಿಎಫ್’ ರಿಲೀಸ್ ಆಗಿದ್ದು 2018ರ ಡಿಸೆಂಬರ್ 21ರಂದು. ಇದಾದ ಬಳಿಕ ‘ಕೆಜಿಎಫ್ 2’ ಬರಲು ಮೂರು ವರ್ಷಕ್ಕೂ ಅಧಿಕ ಸಮಯ ಹಿಡಿಯಿತು. ಅಂದರೆ, 2022ರ ಏಪ್ರಿಲ್ 14 ರಂದು ‘ಕೆಜಿಎಫ್ 2’ ರಿಲೀಸ್ ಆಯಿತು. ‘ಕೆಜಿಎಫ್ 2’ ಚಿತ್ರದ ನಂತರ ಯಶ್ ಸಿನಿಮಾ ದೊಡ್ಡ ಪರದೆ ಮೇಲೆ ಬರಲು ಮೂರು ವರ್ಷ ಹಿಡಿದಂತೆ ಆಗಲಿದೆ.

‘ಕೆವಿಎನ್ ಪ್ರೊಡಕ್ಷನ್​’ಗೆ ದೊಡ್ಡ ಮಟ್ಟದ ಹೆಸರು ಇದೆ. ಹಲವು ಸಿನಿಮಾಗಳನ್ನು ಈ ಸಂಸ್ಥೆ ಹಂಚಿಕೆ ಮಾಡಿದೆ. ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ವೆಂಕಟ್​ ಕೆ ಅವರು ಕೆವಿಎನ್ ಪ್ರೊಡಕ್ಷನ್​ ಸಂಸ್ಥೆಯ ಸ್ಥಾಪಕರು. ಅವರೇ ಈ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ ಅವರ ‘ಟಾಕ್ಸಿಕ್’ ಹೆಸರಿನ ಬಿಗ್ ಬಜೆಟ್ ಸಿನಿಮಾ​ಗೆ ಕೈ ಹಾಕಿದ್ದಾರೆ.

ಇದನ್ನೂ ಓದಿ: ಯಶ್ ಹೊಸ ಚಿತ್ರಕ್ಕೆ ‘Toxic’ ಟೈಟಲ್; ಕ್ರೇಜಿಯಾಗಿದೆ ‘Yash19’ ಶೀರ್ಷಿಕೆ

‘ಟಾಕ್ಸಿಕ್’ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅಭಿಮಾನಿಗಳು ಟೈಟಲ್​ನ ಇಷ್ಟಪಟ್ಟಿದ್ದಾರೆ. ಜನವರಿ ಅಂತ್ಯದ ವೇಳೆಗೆ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಇಷ್ಟು ದಿನಗಳ ಕಾಲ ಯಶ್ ಹಾಗೂ ಗೀತು ಮೋಹನ್​ದಾಸ್ ಅವರು ಸಿನಿಮಾದ ಪ್ರೀಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:59 am, Fri, 8 December 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us