ಯಶ್ ಹೊಸ ಚಿತ್ರಕ್ಕೆ ‘Toxic’ ಟೈಟಲ್; ಕ್ರೇಜಿಯಾಗಿದೆ ‘Yash19’ ಶೀರ್ಷಿಕೆ

Yash 19: ಯಶ್ ಹೊಸ ಸಿನಿಮಾ ಬಗ್ಗೆ ತಿಳಿಯಲು ಅಭಿಮಾನಿಗಳು ಹಲವು ಸಮಯದಿಂದ ಕಾದಿದ್ದರು. ಅದಕ್ಕೆ ಮುಹೂರ್ತ ಕೂಡಿಬಂದಿದೆ. ಇಂದು ಟೈಟಲ್ ರಿವೀಲ್ ಆಗಿದೆ.

ಯಶ್ ಹೊಸ ಚಿತ್ರಕ್ಕೆ ‘Toxic’ ಟೈಟಲ್; ಕ್ರೇಜಿಯಾಗಿದೆ ‘Yash19’ ಶೀರ್ಷಿಕೆ
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Dec 08, 2023 | 11:59 AM

ಯಶ್ (Yash) ಅವರ ಹೊಸ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘Yash 19’ಗಾಗಿ ಫ್ಯಾನ್ಸ್ ಕಾಯುತ್ತಲೇ ಇದ್ದರು. ಕೊನೆಗೂ ಈ ವಿಚಾರ ರಿವೀಲ್ ಆಗಿದೆ. ‘Yash 19 ಚಿತ್ರಕ್ಕೆ ‘ಟಾಕ್ಸಿಕ್’ (Toxic) ಎಂದು ಟೈಟಲ್ ಇಡಲಾಗಿದೆ. ಈ ಟೈಟಲ್ ನೊಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ಕಾರಣಕ್ಕೆ ಈ ಚಿತ್ರಕ್ಕೆ ಟೈಟಲ್ ಸೂಕ್ತ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಯಶ್ ಅವರ ‘ಕೆಜಿಎಫ್ 2’ ಸಿನಿಮಾ 2022ರ ಏಪ್ರಿಲ್​ನಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡವು. ನರ್ತನ್ ಅವರು ‘ಯಶ್ 19’ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ನಡೆಯಲಿಲ್ಲ. ಈಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ‘ಕೆಜಿಎಫ್ 2’ ರಿಲೀಸ್ ಆಗಿ ಒಂದೂವರೆ ವರ್ಷದ ಬಳಿಕ ಯಶ್ ಹೊಸ ಚಿತ್ರದ ಟೈಟಲ್ ಘೋಷಣೆ ಆಗಿದೆ.

‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆದಿದೆ. ಈ ಚಿತ್ರದ ರಿಲೀಸ್ ದಿನಾಂಕವನ್ನೂ ರಿವೀಲ್ ಮಾಡಲಾಗಿದೆ. 10-4-2025ರಂದು ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗಲಿದೆ.

ಟ್ವಿಟರ್​ನಲ್ಲಿ ಸದ್ಯ #Toxic ಹ್ಯಾಶ್​ಟ್ಯಾಗ್ ಟ್ರೆಂಡ್ ಆಗುತ್ತಿದೆ. ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಅದಕ್ಕೆ ಸೂಕ್ತ ಆಗುವಂಥ ಟೈಟಲ್​ನ ಫೈನಲ್ ಮಾಡಲಾಗಿದೆ. ಗೀತು ಮೋಹನ್​ದಾಸ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ರಿವೀಲ್ ಆಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:00 am, Fri, 8 December 23