ಡೈರೆಕ್ಷನ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಉಪೇಂದ್ರ ಅವರು (Upendra) ಇತ್ತೀಚಿನ ವರ್ಷಗಳಲ್ಲಿ ನಟನೆಯಲ್ಲಿ ಬ್ಯುಸಿ ಆದರು. ಈಗ ಅವರು ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಅವರು ಅಭಿನಯಿಸಿ, ನಿರ್ದೇಶನ ಮಾಡುತ್ತಿರುವ ಸಿನಿಮಾದ ಪೋಸ್ಟರ್ ಈ ಮೊದಲು ರಿಲೀಸ್ ಆಗಿತ್ತು. ಈಗ ಸಿನಿಮಾದ ಮುಹೂರ್ತಕ್ಕೆ ದಿನಾಂಕ ಫಿಕ್ಸ್ ಆಗಿದೆ. ಜೂನ್ 3ರಂದು ಸಿನಿಮಾದ ಮುಹೂರ್ತ ನೆರವೇರಲಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಭಿನ್ನ-ವಿಭಿನ್ನವಾದ ಶೀರ್ಷಿಕೆಗಳನ್ನು ಇಡುವುದರಲ್ಲಿ ಅವರು ಫೇಮಸ್. ಈ ಬಾರಿ ಕೂಡ ಅಂಥದ್ದೇ ಒಂದು ಹೊಸ ಟೈಟಲ್ ಇಟ್ಟಿದ್ದಾರೆ. ಈ ಟೈಟಲ್ಗೆ ಏನೆಂದು ಕರೆಯಬೇಕು ಎಂಬುದು ಫ್ಯಾನ್ಸ್ಗೂ ಕೂಡ ಗೊತ್ತಾಗಿಲ್ಲ. ಮುಹೂರ್ತದ ವೇಳೆ ಉಪೇಂದ್ರ ಇದಕ್ಕೆ ಸ್ಪಷ್ಟನೆ ನೀಡಬಹುದು ಎಂದು ಫ್ಯಾನ್ಸ್ ಕಾದಿದ್ದಾರೆ.
ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಭಿನ್ನ-ವಿಭಿನ್ನವಾದ ಶೀರ್ಷಿಕೆಗಳನ್ನು ಇಡುವುದರಲ್ಲಿ ಅವರು ಫೇಮಸ್. ಈ ಬಾರಿ ಕೂಡ ಅಂಥದ್ದೇ ಒಂದು ಹೊಸ ಟೈಟಲ್ ಇಟ್ಟಿದ್ದಾರೆ. ಅದನ್ನು ಕುದುರೆ ಲಾಳ ಎನ್ನಬೇಕೋ, ಮೂರು ನಾಮ ಎನ್ನಬೇಕೋ, ಉಗುರಿನ ಮೇಲೆ ಮತದಾನದ ಇಂಕು ಹತ್ತಿರುವ ಗುರುತು ಎನ್ನಬೇಕೋ ಎಂಬುದು ಇನ್ನೂ ಬಗೆಹರಿದಿಲ್ಲ. ಮುಹೂರ್ತದ ವೇಳೆ ಉಪೇಂದ್ರ ಇದಕ್ಕೆ ಸ್ಪಷ್ಟನೆ ನೀಡಬಹುದು.
ಫಸ್ಟ್ ಲುಕ್ನಲ್ಲಿ ಕೊಂಬು ಇರುವ ಕುದುರೆಯನ್ನು ಏರಿ ಉಪೇಂದ್ರ ಬಂದಿದ್ದರು. ಅವರ ಲುಕ್ ಕೂಡ ಗಮನ ಸೆಳೆದಿತ್ತು. ಉಪೇಂದ್ರ ಅವರ ನಟನೆಗಿಂತಲೂ ಅವರ ನಿರ್ದೇಶನಕ್ಕೆ ಅಭಿಮಾನಿಗಳು ಜಾಸ್ತಿ ಎಂದರೆ ತಪ್ಪಿಲ್ಲ. ‘ಉಪ್ಪಿ 2’ ಸಿನಿಮಾ ಬಳಿಕ ಅವರು ನಿರ್ದೇಶನದಿಂದ ಕೊಂಚ ದೂರ ಉಳಿದುಕೊಂಡಿದ್ದರು. ಹಾಗಾಗಿ ಅವರು ಆದಷ್ಟು ಬೇಗ ಡೈರೆಕ್ಟರ್ ಕ್ಯಾಪ್ ಧರಿಸಲಿ ಎಂಬುದು ಎಲ್ಲ ಅಭಿಮಾನಿಗಳ ಆಸೆ ಆಗಿತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಹೊಸ ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡುವುದರ ಜೊತೆಗೆ ಹೀರೋ ಆಗಿ ನಟಿಸುತ್ತಿದ್ದಾರೆ.
ಈ ಸಿನಿಮಾಗೆ ‘ಲಹರಿ ಫಿಲ್ಮ್ಸ್’ ಮತ್ತು ‘ವೀನಸ್ ಎಂಟರ್ಟೇನರ್ಸ್’ ಸಂಸ್ಥೆಗಳು ಬಂಡವಾಳ ಹೂಡುತ್ತಿವೆ. ಜಿ. ಮನೋಹರನ್ ಮತ್ತು ಶ್ರೀಕಾಂತ್ ಕೆ.ಪಿ. ಜೊತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅದ್ದೂರಿಯಾಗಿ ಸಿನಿಮಾ ಮೂಡಿಬರಲಿದೆ.
ಚಿತ್ರ ವಿಚಿತ್ರವಾಗಿ ಬರೆದುಕೊಂಡಿದ್ದ ಉಪೇಂದ್ರ
ಈ ಮೊದಲು ರಿಲೀಸ್ ಆಗಿದ್ದ ಫಸ್ಟ್ ಲುಕ್ ಪೋಸ್ಟರ್ ಜೊತೆ ಉಪೇಂದ್ರ ಬರೆದುಕೊಂಡಿರುವ ಸಾಲುಗಳು ಕೂಡ ಗಮನ ಸೆಳೆದಿತ್ತು. ‘ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ 33 ವರ್ಷದ ಚಿತ್ರಕಥೆಯಲ್ಲಿ ಸಂಭಾಷಣೆ ಹೇಳಿಸಿ, ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.