
ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿರುವ ‘ಕಬ್ಜ’ ಚಿತ್ರ (Kabzaa Movie) ಸಖತ್ ನಿರೀಕ್ಷೆ ಹುಟ್ಟುಹಾಕಿದೆ. ಉಪೇಂದ್ರ ಅಭಿಮಾನಿಗಳು ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಶನಿವಾರ (ಸೆ.17) ಈ ಸಿನಿಮಾದ ಟೀಸರ್ (Kabzaa Movie Teaser) ಬಿಡುಗಡೆ ಆಯಿತು. ಒಂದೇ ದಿನದಲ್ಲಿ ಒಂದು ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿರುವುದು ಇದರ ಹೆಚ್ಚುಗಾರಿಕೆ. ಈಗ ಒಂದೂವರೆ ಕೋಟಿ ವೀವ್ಸ್ ದಾಟಿ ಮುನ್ನುಗ್ಗುತ್ತಿದೆ. ಆ ಮೂಲಕ ನಿರ್ದೇಶಕ ಆರ್. ಚಂದ್ರು (R. Chandru) ಅವರ ಕೆಲಸಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಕನ್ನಡದಿಂದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಧೂಳೆಬ್ಬಿಸಲು ಬರುತ್ತಿದೆ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
‘ಕಬ್ಜ’ ಟೀಸರ್ನಲ್ಲಿ ಅನೇಕ ವಿಷಯಗಳು ಹೈಲೈಟ್ ಆಗಿವೆ. ಪ್ರತಿ ಫೇಮ್ನಲ್ಲೂ ಶ್ರೀಮಂತಿಕೆ ಕಾಣುತ್ತಿದೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣಕ್ಕೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ. ಇಡೀ ಸಿನಿಮಾ ಸಖತ್ ಅದ್ದೂರಿಯಾಗಿ ನಿರ್ಮಾಣ ಆಗಿದೆ ಎಂಬುದಕ್ಕೆ ಈ ಟೀಸರ್ನಲ್ಲಿ ಸಾಕ್ಷಿ ಸಿಕ್ಕಿದೆ. ಕಿಚ್ಚ ಸುದೀಪ್ ಅವರ ಗೆಟಪ್ ಕೂಡ ಇದರಲ್ಲಿ ರಿವೀಲ್ ಆಗಿದೆ. ಉಪೇಂದ್ರ ಅವರ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಈ ಟೀಸರ್ ಕಂಡು ಪರಭಾಷೆ ಸೆಲೆಬ್ರಿಟಿಗಳು ಕೂಡ ವಾವ್ ಎನ್ನುತ್ತಿದ್ದಾರೆ. ಯೂಟ್ಯೂಬ್ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿರುವ ಟೀಸರ್ ನೋಡಿ ರಾಮ್ ಗೋಪಾಲ್ ವರ್ಮಾ ಅವರು ಹೊಗಳಿದ್ದಾರೆ. ‘ಟೀಸರ್ ನಿಜಕ್ಕೂ ದೊಡ್ಡದಾಗಿದೆ. ಉಪೇಂದ್ರ, ಸುದೀಪ್ ಮತ್ತು ನಿರ್ದೇಶಕ ಆರ್. ಚಂದ್ರು ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. 24 ಗಂಟೆಗಳಲ್ಲಿ ಒಂದು ಕೋಟಿ ಪ್ಲಸ್ ವೀವ್ಸ್ ಪಡೆದುಕೊಂಡಿದೆ. ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ನನ್ನ ಸ್ವಾಗತ’ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಯೂಟ್ಯೂಬ್ನಲ್ಲಿ ನಾಲ್ಕೂವರೆ ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. 48 ಸಾವಿರಕ್ಕೂ ಹೆಚ್ಚು ಕಮೆಂಟ್ಗಳು ಬಂದಿವೆ. ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯೆ ತಿಳಿಸಿದ್ದಾರೆ. ಸಿನಿಮಾ ನೋಡಲು ಕಾಯುತ್ತಿರುವುದಾಗಿ ಪರಭಾಷೆಯ ಸಿನಿಪ್ರೇಮಿಗಳು ಕೂಡ ಕಮೆಂಟ್ ಮಾಡುತ್ತಿದ್ದಾರೆ.
ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ‘ಕಬ್ಜ’ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಕಥೆ ಏನು ಎಂದು ಜನರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಒಟ್ಟಿನಲ್ಲಿ ಈ ಟೀಸರ್ ಭಾರಿ ಹವಾ ಸೃಷ್ಟಿ ಮಾಡಿರುವುದಂತೂ ನಿಜ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:17 am, Mon, 19 September 22