‘ಅಕ್ಟೋಬರ್​​ನಲ್ಲಿ ಸಿನಿಮಾನೇ ಬಿಡುಗಡೆ ಮಾಡ್ತೀವಿ ಎಂದಿಲ್ಲ’; ‘ಯುಐ’ ಬಿಡುಗಡೆ ಬಗ್ಗೆ ಶಾಕ್ ಕೊಟ್ಟ ಉಪ್ಪಿ

|

Updated on: Sep 18, 2024 | 1:06 PM

ನಟ ಉಪೇಂದ್ರ ಅವರಿಗೆ ಇಂದು (ಸೆಪ್ಟೆಂಬರ್ 18) ಜನ್ಮದಿನ. ಆ ಪ್ರಯುಕ್ತ ಅವರು ಬೆಂಗಳೂರಿನ ಕತ್ರಿಗುಪ್ಪೆ ನಿವಾಸದಲ್ಲಿ ವಿಶೇಷ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಇದು ‘ಯುಐ’ ಚಿತ್ರಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿ ಆಗಿತ್ತು. ಅವರು ಸಿನಿಮಾ ಬಗ್ಗೆ ಕೊಟ್ಟ ಮಾಹಿತಿ ಇಲ್ಲಿದೆ.

‘ಅಕ್ಟೋಬರ್​​ನಲ್ಲಿ ಸಿನಿಮಾನೇ ಬಿಡುಗಡೆ ಮಾಡ್ತೀವಿ ಎಂದಿಲ್ಲ’; ‘ಯುಐ’ ಬಿಡುಗಡೆ ಬಗ್ಗೆ ಶಾಕ್ ಕೊಟ್ಟ ಉಪ್ಪಿ
ಉಪೇಂದ್ರ
Follow us on

ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ‘ಯುಐ’ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಇಂದು (ಸೆಪ್ಟೆಂಬರ್ 18) ಸಿನಿಮಾ ಬಗ್ಗೆ ಮಾಹಿತಿ ನೀಡಲು ತಂಡ ಸುದ್ದಿಗೋಷ್ಠಿ ಕರೆದಿತ್ತು. ಅಕ್ಟೋಬರ್​ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ತಂಡ ಹೇಳಿದೆ. ಆದರೆ, ಅಕ್ಟೋಬರ್​ನಲ್ಲಿ ಯಾವ ದಿನಾಂಕಕ್ಕೆ ಚಿತ್ರ ಬಿಡುಗಡೆ ಆಗಲಿದೆ ಎನ್ನುವ ಕುರಿತು ಮಾಹಿತಿ ಸಿಕ್ಕಿಲ್ಲ. ಇದಕ್ಕಾಗಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲು ತಂಡ ನಿರ್ಧರಿಸಿದೆ.

‘ಯುಐ’ ಸಿನಿಮಾದ ರಿಲೀಸ್ ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಉಪೇಂದ್ರ ಬರ್ತ್​​ಡೇ ದಿನವೇ ಆ ಬಗ್ಗೆ ಮಾಹಿತಿ ಸಿಗಬಹುದು ಎಂದು ಫ್ಯಾನ್ಸ್ ಊಹಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಮುಂದಿನ ವಾರ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ನೀಡೋದಾಗಿ ತಂಡ ಹೇಳಿಕೊಂಡಿದೆ. ಈ ಮಧ್ಯೆ ಉಪೇಂದ್ರ ಬಾಂಬ್ ಹಾಕಿದ್ದಾರೆ. ‘ಅಕ್ಟೋಬರ್​ ರಿಲೀಸ್ ಆಗಲಿದೆ ಎಂದು ಹೇಳಿದ್ದೇವೆ. ಆದರು ಎನು ಎಂದು ಹೇಳಿದ್ದೀವಾ’ ಎಂದು ಶಾಕ್ ಕೊಟ್ಟರು ಉಪೇಂದ್ರ.

‘ಮೇಕಿಂಗ್ ಸ್ಟೈಲ್ ಬೇರೆ ಆಗಿದೆ. ರಾಜ್ಯದಲ್ಲಿ ಮಾತ್ರ ರಿಲೀಸ್ ಮಾಡುವ ಆಲೋಚನೆ ಇತ್ತು. ಆ ಬಳಿಕ ಸಿನಿಮಾ ಪ್ಯಾನ್ ಇಂಡಿಯಾ ಆಯಿತು. ಜನರು ಅತೀ ಬುದ್ಧಿವಂತರು ಎಂಬ ನಂಬಿಕೆ ಮೇಲೆ ಈ ಸಿನಿಮಾ ಮಾಡಿದ್ದೇವೆ. ಅಭಿಮಾನಿಗಳು ಯೆಸ್ ಎಂದರೆ ಸಿನಿಮಾ ಗೆದ್ದಂಗೆ. ಎಲ್ಲರೂ ಸಿನಿಮಾ ಮೇಕರ್​ಗಳಾಗಿದ್ದಾರೆ. ಹೀಗಾಗಿ, ಒಳ್ಳೆಯದನ್ನು ನೀಡಲು ನಾವು ಪ್ರಯತ್ನಿಸಬೇಕು’ ಎಂದಿದ್ದಾರೆ ಉಪ್ಪಿ.

ಇದನ್ನೂ ಓದಿ: ‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ

‘ಸಿನಿಮಾ ನಿರ್ದೇಶನ ಅನ್ನೋದು ದೊಡ್ಡ ಫೈಟ್. ಪ್ರತಿ ಒಂದು ಹಂತದಲ್ಲೂ ಫೈಟ್ ಮಾಡಿ ಸಿನಿಮಾ ತಲುಪಿಸಬೇಕು. ಹಲವು ಕಾರಣದಿಂದ ಸಿನಿಮಾ ವಿಳಂಬ ಆಗಿದೆ. ಯೂಟ್ಯೂಬ್​ನಲ್ಲಿ ಲೈವ್ ಹೋಗುವ ಸ್ಪೀಡ್​ನಲ್ಲಿ ಸಿನಿಮಾ ಮಾಡೋಕೆ ಆಗಲ್ಲ. ಯುಐ ಸಿನಿಮಾದಲ್ಲಿ ಇರೋದು ಲಾಜಿಕಲ್ ಹಾಗೂ ಸೈಕಲಾಜಿಕಲ್ ಕಲ್ಕಿ’ ಎಂದರು ಉಪೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.