Veeram Movie: ಏ.7ರಂದು ರಿಲೀಸ್​ ಆಗಲಿದೆ ‘ವೀರಂ’; ವಿಷ್ಣುವರ್ಧನ್​ ಅಭಿಮಾನಿಗಳಿಗೆ ಈ ಚಿತ್ರದ ಮೇಲಿದೆ ವಿಶೇಷ ನಿರೀಕ್ಷೆ

Veeram Movie Release Date: ‘ವೀರಂ’ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​ ಅವರಿಗೆ ಮಾಸ್​ ಲುಕ್​ ಇದೆ. ಈ ಚಿತ್ರಕ್ಕೆ ಶಶಿಧರ್​ ಕೆ.ಎಂ. ಬಂಡವಾಳ ಹೂಡಿದ್ದು, ಕುಮಾರ್​ ರಾಜ್​ ನಿರ್ದೇಶನ ಮಾಡಿದ್ದಾರೆ.

Veeram Movie: ಏ.7ರಂದು ರಿಲೀಸ್​ ಆಗಲಿದೆ ‘ವೀರಂ’; ವಿಷ್ಣುವರ್ಧನ್​ ಅಭಿಮಾನಿಗಳಿಗೆ ಈ ಚಿತ್ರದ ಮೇಲಿದೆ ವಿಶೇಷ ನಿರೀಕ್ಷೆ
ವೀರಂ ಸಿನಿಮಾ ಪೋಸ್ಟರ್​

Updated on: Mar 09, 2023 | 7:14 PM

‘ಡೈನಾಮಿಕ್​ ಪ್ರಿನ್ಸ್​’ ಪ್ರಜ್ವಲ್​ ದೇವರಾಜ್ (Prajwal Devaraj)​ ಅವರು ನಟಿಸಿರುವ ‘ವೀರಂ’ ಚಿತ್ರಕ್ಕಾಗಿ ಸಿನಿಪ್ರಿಯರು ಕಾದಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಚಿತ್ರತಂಡದವರು ‘ವೀರಂ’ ಸಿನಿಮಾದ (Veeram Movie) ಬಿಡುಗಡೆ​ ದಿನಾಂಕವನ್ನು ಅನೌನ್ಸ್​ ಮಾಡಿದ್ದಾರೆ. ಏಪ್ರಿಲ್​ 7ರಂದು ಈ ಚಿತ್ರ ಅದ್ದೂರಿಯಾಗಿ ರಿಲೀಸ್​ ಆಗಲಿದೆ. ಈಗಾಗಲೇ ಟೀಸರ್​, ಪೋಸ್ಟರ್​ ಮತ್ತು ಹಾಡಿನ ಮೂಲಕ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಅದರಲ್ಲೂ ‘ಸಾಹಸ ಸಿಂಹ’ ವಿಷ್ಣುವರ್ಧನ್​ (Dr. Vishnuvardhan) ಅಭಿಮಾನಿಗಳು ‘ವೀರಂ’ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​ ಅವರು ವಿಷ್ಣುವರ್ಧನ್​ ಫ್ಯಾನ್​ ಆಗಿ ಕಾಣಿಸಿಕೊಂಡಿರುವುದೇ ಅದಕ್ಕೆ ಕಾರಣ. ಅವರ ಕೈ ಮೇಲೆ ಇರುವ ವಿಷ್ಣು ದಾದಾ ಟ್ಯಾಟೂ ಕೂಡ ಗಮನ ಸೆಳೆಯುತ್ತಿದೆ.

ರಿಲೀಸ್​ ಡೇಟ್​ ತಿಳಿಸುವ ಸಲುವಾಗಿ ‘ವೀರಂ’ ಚಿತ್ರತಂಡದವರು ಹೊಸ ಪೋಸ್ಟರ್​ ಹಂಚಿಕೊಂಡಿದ್ದಾರೆ. ಅದು ತುಂಬ ಮಾಸ್​ ಆಗಿದೆ. ಕಾರಿನ ಮೇಲೆ ಪ್ರಜ್ವಲ್​ ದೇವರಾಜ್​ ನಿಂತಿದ್ದಾರೆ. ಸುತ್ತಲೂ ಜನಜಂಗುಳಿ ಇದೆ. ಹಿಂಬದಿಯಲ್ಲಿ ವಿಷ್ಣುವರ್ಧನ್​ ಅಭಿನಯದ ‘ಬಂಧನ’ ಸಿನಿಮಾದ ಪೋಸ್ಟರ್​ ಕಾಣಿಸಿದೆ. ಸಿನಿಮಾದಲ್ಲಿ ಈ ಸೀನ್​ ಹೇಗೆ ಬಂದಿರಬಹುದು ಎಂಬ ಕೌತುಕ ಸೃಷ್ಟಿ ಆಗಿದೆ.

ಇದನ್ನೂ ಓದಿ
Karnataka Ratna Award: ವಿಷ್ಣುವರ್ಧನ್​ಗೆ ‘ಕರ್ನಾಟಕ ರತ್ನ’ ನೀಡಬೇಕು ಎಂಬ ಬೇಡಿಕೆ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
Vishnuvardhan Memorial Inauguration: ‘ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಆಗುತ್ತಿರುವುದು ಮನಸ್ಸಿಗೆ ಖುಷಿ ನೀಡಿದೆ’; ಶಿವರಾಜ್​ಕುಮಾರ್​
Vishnuvardhan Memorial: ವಿಷ್ಣು​ ಅಭಿಮಾನಿಗಳ ಅನ್ನದಾನ ಕಾರ್ಯಕ್ಕೆ ಅಡೆತಡೆ; ಸ್ಮಾರಕ ಉದ್ಘಾಟನೆ ದಿನವೂ ತಪ್ಪದ ಪರದಾಟ
Vishnuvardhan Memorial: ಬೆಂಗಳೂರಿನಲ್ಲಿ ವಿಷ್ಣುವರ್ಧನ್​ ಅಂತ್ಯ ಸಂಸ್ಕಾರ ಆದರೂ ಮೈಸೂರಿನಲ್ಲಿ ಸ್ಮಾರಕ ಆಗಿದ್ದೇಕೆ? ಇಲ್ಲಿದೆ ವಿವರ

ಇದನ್ನೂ ಓದಿ: Prajwal Devaraj: ಟೈಮ್​ ಲೂಪ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​; ‘ಮಮ್ಮಿ’ ಖ್ಯಾತಿಯ ಲೋಹಿತ್​ ನಿರ್ದೇಶನ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ‘ವೀರಂ’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊವಿಡ್​ ಮುಂತಾದ ಕಾರಣಗಳಿಂದಾಗಿ ರಿಲೀಸ್​ ದಿನಾಂಕ ಮುಂದೂಡುವುದು ಅನಿವಾರ್ಯ ಆಯಿತು. ಈಗ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದ್ದೂರಿಯಾಗಿ ರಿಲೀಸ್​ ಮಾಡಲು ಸಕಲ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Meghana Raj: ಮೇಘನಾ ರಾಜ್​ ಕಮ್​ಬ್ಯಾಕ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​; ಅಭಿಮಾನಿಗಳು ಫುಲ್​ ಖುಷ್​

‘ವೀರಂ’ ಚಿತ್ರಕ್ಕೆ ಶಶಿಧರ್​ ಕೆ.ಎಂ. ಬಂಡವಾಳ ಹೂಡಿದ್ದಾರೆ. ಕುಮಾರ್​ ರಾಜ್​ (ಖದರ್​ ಕುಮಾರ್​) ನಿರ್ದೇಶನ ಮಾಡಿದ್ದಾರೆ. ಲವಿತ್​ ಛಾಯಾಗ್ರಹಣ, ಅನೂಪ್​ ಸಿಳೀನ್​ ಸಂಗೀತ ನಿರ್ದೇಶನ, ರವಿಚಂದ್ರನ್​ ಸಂಕಲನ, ಡಿಫರೆಂಡ್​ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್​ ದೇವರಾಜ್​ ಜೊತೆ ಶ್ರುತಿ, ಶ್ರೀನಗರ ಕಿಟ್ಟಿ, ಶಿಷ್ಯ ದೀಪಕ್​, ರಚಿತಾ ರಾಮ್​ ಮುಂತಾದವರು ನಟಿಸಿದ್ದಾರೆ. ತುಂಬ ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದೆ ಎಂಬುದು ಈಗಾಗಲೇ ಟೀಸರ್​ ಮೂಲಕ ಗೊತ್ತಾಗಿದೆ.

‘ವೀರಂ’ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​ ಅವರ ಗೆಟಪ್​ ಸಂಪೂರ್ಣ ಬದಲಾಗಿದೆ. ಸಿಕ್ಕಾಪಟ್ಟೆ ಮಾಸ್​ ಅವತಾರದಲ್ಲಿ ಅವರು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳೂ ಈ ಸಿನಿಮಾದಲ್ಲಿ ಇವೆ. ‘ವೀರಂ’ ಚಿತ್ರವನ್ನು ಸ್ವಾಗತಿಸಲು ಅಭಿಮಾನಿಗಳು ಹುಮ್ಮಸ್ಸಿನಿಂದ ಸಜ್ಜಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:14 pm, Thu, 9 March 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us