‘ಹೇ ಪ್ರಭು’: ಹೊಸ ಕನ್ನಡ ಸಿನಿಮಾಗೆ ಈ ರೀತಿ ಶೀರ್ಷಿಕೆ ಇಟ್ಟ ಚಿತ್ರತಂಡ

|

Updated on: Jun 28, 2024 | 10:19 PM

ಸಂಹಿತಾ ವಿನ್ಯಾ, ಜಯ್, ಲಕ್ಷ್ಮಣ್ ಶಿವಶಂಕರ್, ಸೂರ್ಯ ರಾಜ್, ಮುಂತಾದವರು ‘ಹೇ ಪ್ರಭು’ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಇದರ ಟೈಟಲ್ ಪೋಸ್ಟರ್​ ಬಿಡುಗಡೆ ಆಗಿದೆ. ಶೀಘ್ರದಲ್ಲಿ ಈ ಸಿನಿಮಾದ ಫಸ್ಟ್​ಲುಕ್​ ಅನಾವರಣ ಆಗಲಿದೆ. ಈ ಚಿತ್ರದ ಬಹುತೇಕ ಶೂಟಿಂಗ್​ ಮುಗಿದಿದೆ. ಜೊತೆಜೊತೆಯಲ್ಲೇ ಸಂಕಲನ ಕಾರ್ಯ ಕೂಡ ನಡೆಯುತ್ತಿದೆ. ‘ಹೇ ಪ್ರಭು’ ಸಿನಿಮಾ ತಂಡದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

‘ಹೇ ಪ್ರಭು’: ಹೊಸ ಕನ್ನಡ ಸಿನಿಮಾಗೆ ಈ ರೀತಿ ಶೀರ್ಷಿಕೆ ಇಟ್ಟ ಚಿತ್ರತಂಡ
‘ಹೇ ಪ್ರಭು’ ಸಿನಿಮಾ ಟೈಟಲ್​ ಪೋಸ್ಟರ್​, ಸಂಹಿತಾ ವಿನ್ಯಾ
Follow us on

ಹೇ ಪ್ರಭು.. ಎಂದ ತಕ್ಷಣದ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುವ ವೈರಲ್​ ವಿಡಿಯೋ ನೆನಪಾಗುತ್ತದೆ. ಅಥವಾ ಇದು ದೇವರ ಕುರಿತಾದ ವಿಷಯ ಎಂಬ ಭಾವನೆ ಮೂಡುತ್ತದೆ. ಅದೂ ಅಲ್ಲ ಎಂದರೆ ನಾಡಪ್ರಭು ಕೆಂಪೇಗೌಡರ ಹೆಸರು ನೆನಪಿಗೆ ಬರುತ್ತದೆ. ಅಷ್ಟಕ್ಕೂ ಈಗ ಹೇ ಪ್ರಭು ಎನ್ನಲು ಕಾರಣ ಹೊಸದೊಂದು ಕನ್ನಡ ಸಿನಿಮಾ. ಹೌದು, ‘ಹೇ ಪ್ರಭು!’ ಎಂಬ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ಆ ಬಗ್ಗೆ ಇಲ್ಲಿದೆ ವಿವರ..

ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಈಗಾಗಲೇ ವಿನೂತನ ಟೈಟಲ್​​ ಮತ್ತು ವಿಭಿನ್ನ ಪ್ರಯೋಗಗಳ ಮೂಲಕ ಹೆಸರಾಗಿದ್ದಾರೆ. ಈಗ ಅವರು 13ನೇ ಸಿನಿಮಾ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಸಿನಿಮಾಗೆ ‘ಹೇ ಪ್ರಭು’ ಎಂದು ಶೀರ್ಷಿಕೆ ಇಡಲಾಗಿದೆ. ಇದರ ಶೂಟಿಂಗ್​ ಕೂಡ ಪೂರ್ಣಗೊಂಡಿದೆ. ಈ ಸಿನಿಮಾದ ಟೈಟಲ್​ ಅನಾವರಣ ಮಾಡಲಾಗಿದೆ. ಈ ಪೋಸ್ಟರ್​ನ ಹಿನ್ನೆಲೆಯಲ್ಲಿ ಕೆಂಪೇಗೌಡರ ಚಿತ್ರ ಇದ್ದು, ಕೌತುಕ ಮೂಡಿಸಿದೆ.

ಸದ್ದಿಲ್ಲದೇ ಶೂಟಿಂಗ್​ ಮಾಡಿರುವ ಚಿತ್ರತಂಡ ಇನ್ನು 5 ದಿನಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಅದರ ಜೊತೆಯಲ್ಲೇ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಈ ಸಿನಿಮಾದ ಫಸ್ಟ್​ ಕಾಪಿ ಹೊರಬರಲಿದೆ. ‘24 ರೀಲ್ಸ್​’ ಹಾಗೂ ‘ಅಮೃತಾ ಫಿಲ್ಮ್ ಸೆಂಟರ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ವೆಂಕಟ್ ಭಾರದ್ವಾಜ್ ಅವರು ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ಬರೆದಿದ್ದಾರೆ.

ಇದನ್ನೂ ಓದಿ: ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು

‘ಹೇ ಪ್ರಭು’ ಸಿನಿಮಾದಲ್ಲಿ ಜಯ್, ಲಕ್ಷ್ಮಣ್ ಶಿವಶಂಕರ್, ಸೂರ್ಯ ರಾಜ್, ಸಂಹಿತಾ ವಿನ್ಯಾ, ಗಜಾನನ ಹೆಗಡೆ, ಹರಿ ಧನಂಜಯ, ನಿರಂಜನ್ ಪ್ರಸಾದ್, ದಿಲೀಪ್ ದೇವ್, ಪ್ರಮೋದ್ ರಾಜ್, ನೇತ್ರಾ ಗೋಪಾಲ್, ಸುಚಿತ್ರಾ ದಿನೇಶ್, ಮನೋಹರ್ , ಸಾಧನಾ ಭಟ್, ಶಶಿರ್ ರಾಜು ಮುಂತಾದವರು ನಟಿಸಿದ್ದಾರೆ. ಶೀಘ್ರದಲ್ಲಿ ‘ಹೇ ಪ್ರಭು’ ಸಿನಿಮಾದ ಫಸ್ಟ್​ಲುಕ್​ ಬಿಡುಗಡೆ ಆಗಲಿದೆ.

ಪ್ರಮೋದ್ ಭಾರತೀಯ ಅವರು ‘ಹೇ ಪ್ರಭು’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಕಾಲಿವುಡ್​ನ ಖ್ಯಾತ ಮ್ಯೂಸಿಕ್​ ಡೈರೆಕ್ಟರ್​ ಸ್ಯಾಮ್ಸನ್ ಜೈಪಾಲ್ ಅವರ ಪುತ್ರ ಡ್ಯಾನ್ನಿ ಆಂಡರ್ಸನ್ ಅವರನ್ನು ವೆಂಕಟ್ ಭಾರಾದ್ವಾಜ್ ಅವರು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಪರಿಚಯಿಸುತ್ತಿದ್ದಾರೆ . ಚಂದನ್, ಶಮೀಕ್ ಭಾರದ್ವಾಜ್, ಲಾರೆನ್ಸ್ ಪ್ರೀತಮ್ ಮುಂತಾದವರು ಈ ಸಿನಿಮಾದ ತಾಂತ್ರಿಕ ಬಳಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹೇಶ್ ಮತ್ತು ಪ್ರವೀಣ್ ಅವರು ಸಂಭಾಷಣೆ ಬರೆದಿದ್ದಾರೆ. ಅರಸು ಅಂತಾರೆ ಹಾಗೂ ಮನೋಜ್ ರಾವ್ ಅವರು ಈ ಸಿನಿಮಾದ ಹಾಡಿಗಳಿಗೆ ಸಾಹಿತ್ಯ ರಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.