‘ಕ್ರೇಜ್’ ಹುಟ್ಟಿಸ್ತಿದೆ ವಿಕ್ರಮ್ ರವಿಚಂದ್ರನ್ ಚೊಚ್ಚಲ ಚಿತ್ರ ತ್ರಿವಿಕ್ರಮ!

ತ್ರಿವಿಕ್ರಮ ಸದ್ಯ ಸ್ಯಾಂಡಲ್​ವುಡ್​ನಲ್ಲಿ ತೆರೆಗೆ ಬರೋ ಮುನ್ನವೆ ಸಾಕಷ್ಟು ವಿಶೇಷತೆಗಳೊಂದಿಗೆ ಸದ್ದು ಮಾಡ್ತಾ ಇರೋ ಸಿನಿಮಾ. ಹೇಳಿ ಕೇಳಿ ಇದು ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ರವಿಚಂದ್ರನ್​ ಅವರ ಎರಡನೇ ಪುತ್ರ ವಿಕ್ರಮ್​ ರವಿಚಂದ್ರನ್​ ಅವರ ಚೊಚ್ಚಲ ಚಿತ್ರ. ಈ ಕಾರಣಕ್ಕೆ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟಿಸಿದೆ. ಇದರ ಹೊರತಾಗಿಯೂ ಚಿತ್ರದ ಸ್ಟಾರ್​ ಕಾಸ್ಟ್, ಸಾಹಸ ದೃಶ್ಯಗಳ ಶೂಟಿಂಗ್​ ​ಸೇರಿದಂತೆ ಅನೇಕ ವಿಚಾರದಲ್ಲಿ ಚಿತ್ರೀಕರಣದ ಹಂತದಲ್ಲೇ ಸಿನಿರಸಿಕರಲ್ಲಿ ನಿರೀಕ್ಷೆಗಳ ಬೆಟ್ಟವನ್ನೆ ಕಟ್ಟುವಂತೆ ಮಾಡಿದೆ. ರಾಜಸ್ಥಾನದ ಮರುಳುಗಾಡಿನಲ್ಲಿ ತ್ರಿವಿಕ್ರಮನ ಸಂಚಾರ ಸಹನಾ […]

'ಕ್ರೇಜ್' ಹುಟ್ಟಿಸ್ತಿದೆ ವಿಕ್ರಮ್ ರವಿಚಂದ್ರನ್ ಚೊಚ್ಚಲ ಚಿತ್ರ ತ್ರಿವಿಕ್ರಮ!
Follow us
ಸಾಧು ಶ್ರೀನಾಥ್​
|

Updated on:Dec 15, 2019 | 1:26 PM

ತ್ರಿವಿಕ್ರಮ ಸದ್ಯ ಸ್ಯಾಂಡಲ್​ವುಡ್​ನಲ್ಲಿ ತೆರೆಗೆ ಬರೋ ಮುನ್ನವೆ ಸಾಕಷ್ಟು ವಿಶೇಷತೆಗಳೊಂದಿಗೆ ಸದ್ದು ಮಾಡ್ತಾ ಇರೋ ಸಿನಿಮಾ. ಹೇಳಿ ಕೇಳಿ ಇದು ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ರವಿಚಂದ್ರನ್​ ಅವರ ಎರಡನೇ ಪುತ್ರ ವಿಕ್ರಮ್​ ರವಿಚಂದ್ರನ್​ ಅವರ ಚೊಚ್ಚಲ ಚಿತ್ರ. ಈ ಕಾರಣಕ್ಕೆ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟಿಸಿದೆ. ಇದರ ಹೊರತಾಗಿಯೂ ಚಿತ್ರದ ಸ್ಟಾರ್​ ಕಾಸ್ಟ್, ಸಾಹಸ ದೃಶ್ಯಗಳ ಶೂಟಿಂಗ್​ ​ಸೇರಿದಂತೆ ಅನೇಕ ವಿಚಾರದಲ್ಲಿ ಚಿತ್ರೀಕರಣದ ಹಂತದಲ್ಲೇ ಸಿನಿರಸಿಕರಲ್ಲಿ ನಿರೀಕ್ಷೆಗಳ ಬೆಟ್ಟವನ್ನೆ ಕಟ್ಟುವಂತೆ ಮಾಡಿದೆ.

ರಾಜಸ್ಥಾನದ ಮರುಳುಗಾಡಿನಲ್ಲಿ ತ್ರಿವಿಕ್ರಮನ ಸಂಚಾರ ಸಹನಾ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬರ್ತಾ ಇರೋ ತ್ರಿವಿಕ್ರಮನ ಚಿತ್ರೀಕರಣ ಭರದಿಂದ ಸಾಗ್ತಾ ಇದೆ. ಬೆಂಗಳೂರು, ಉಡುಪಿ, ಕೊಡಚಾದ್ರಿ, ತೀರ್ಥಹಳ್ಳಿ, ಸಾಗರದ ಸುಂದರ ವಾತಾವರಣದಲ್ಲಿ ಮೂರನೇ ಹಂತದ ಶೂಟಿಂಗ್​ ಮುಗಿದಿದೆ. ನಾಲ್ಕನೇ ಹಂತದ ಚಿತ್ರೀಕರಣಕ್ಕಾಗಿ ರಾಜಸ್ಥಾನ ಹಾಗೂ ಜೋಧ್​ಪುರದಲ್ಲಿ 10 ದಿನಗಳಿಂದ ಚಿತ್ರತಂಡ ಬೀಡುಬಿಟ್ಟು ಭರ್ಜರಿ ಶೂಟಿಂಗ್ ನಡೆಸುತ್ತಿದೆ. ರಾಜಸ್ಥಾನದ ಮರಳುಗಾಡು ಸೇರಿದಂತೆ ಸುಂದರ ತಾಣಗಳಲ್ಲಿ ಸಾಂಗ್​ ಹಾಗೂ ಸಿನಿಮಾದ ಕೆಲ ಸನ್ನಿವೇಶಗಳ ಶೂಟಿಂಗ್​ ನಡೆಸುತ್ತಿದೆ. ನಾಯಕ ವಿಕ್ರಂ, ಬಾಲಿವುಡ್​ ನಟ ರೋಹಿತ್​ ರಾಯ್​, ನಟಿ ಆಕಾಂಕ್ಷಾ ಹಾಗೂ ಸಾಧು ಕೋಕಿಲಾ ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. ಇನ್ನೂ 10 ದಿನಗಳ ಕಾಲ ಇಲ್ಲಿಯೇ ಶೂಟಿಂಗ್​ ಮುಗಿಸಿ ನಂತರ ತ್ರಿವಿಕ್ರಮನ ಸಂಚಾರ ಕಾಶ್ಮೀರದತ್ತ ಸಾಗಲಿದೆ.

ಸಾಧು -ಚಿಕ್ಕಣ್ಣ ಜೋಡಿ ಕಾಮಿಡಿ ಮೋಡಿ! ತ್ರಿವಿಕ್ರಮ ಪಕ್ಕಾ ಲವ್​ ಸ್ಟೋರಿ ಸಿನಿಮಾ. ಇದರ ಜೊತೆಯಲ್ಲೇ ಸೆಂಟಿಮೆಂಟ್​, ಎಮೋಷನ್ಸ್​ ಹಾಗೂ ಗೆಳೆತನದ ಸುತ್ತಾ ಸಾಗುವ ಕಥೆಯಲ್ಲಿ, ನಿಮ್ಮನ್ನ ನಕ್ಕು ನಗಿಸಲು ಸ್ಯಾಂಡಲ್​ವುಡ್​ನ ದಿಗ್ಗಜ ಹಾಸ್ಯ ನಟರಾದ ಸಾಧು ಕೋಕಿಲಾ ಹಾಗೂ ಯಂಗ್​ ಅಂಡ್​ ಎನರ್ಜಿಟಿಕ್​ ಕಾಮಿಡಿ ಸ್ಟಾರ್ ಚಿಕ್ಕಣ್ಣ ಇರಲಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ ಹೀರೋ ಜೊತೆ ಚಿಕ್ಕಣ್ಣ ಕಾಮಿಡಿ ಕಮಾಲ್​ ಮಾಡಿದ್ರೆ ಎರಡನೇ ಭಾಗದಲ್ಲಿ ಸಾಧು ಕೋಕಿಲಾ ಕಾಮಿಡಿ ಮೋಡಿ ಮಾಡಲಿದ್ದಾರೆ. ಓಟ್ಟಾರೆ ತ್ರಿವಿಕ್ರಮ ಒಂದು ಕಂಪ್ಲೀಟ್​ ಪ್ಯಾಕೇಜ್​ ಮೂವಿಯಾಗಿದ್ದು ಮನೆ ಮಂದಿಯೆಲ್ಲ ಕೂತು ನೋಡಬಹುದಾದ ಸಿನಿಮಾ ಅನ್ನೋದು ಈಗಾಗಲೇ ಗೊತ್ತಾಗಿರೋ ವಿಚಾರ.

ಇನ್ನು ತಮ್ಮ ಮಗನ ಮೊದಲ ಚಿತ್ರವನ್ನ ತೆರೆ ಮೇಲೆ ನೋಡಲು ರವಿಚಂದ್ರನ್​ ಎಷ್ಟು ಕೂತೂಹಲದಲ್ಲಿ ಇದ್ದಾರೋ, ಪ್ರೇಕ್ಷಕರು ಕೂಡ ಅಷ್ಟೇ ಕುತೂಹಲದಲ್ಲಿದ್ದಾರೆ ಅಂದ್ರೂ ತಪ್ಪಿಲ್ಲ. ಯಾಕಂದ್ರೆ ಅಷ್ಟೇ ನಿರೀಕ್ಷೆಯನ್ನ ಹುಟ್ಟಿಸಿದೆ ಈ ಸಿನಿಮಾ.

Published On - 11:55 am, Sun, 15 December 19

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ