
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ಗೆ 49ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅನೂಪ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರವಾದ ‘ವಿಕ್ರಾಂತ್ ರೋಣ’ ಚಿತ್ರತಂಡವು ‘ಡೆಡ್ ಮ್ಯಾನ್ ಆಂಥೆಮ್’ ಬಿಡುಗಡೆ ಮಾಡಿದೆ. ಇದರಲ್ಲಿನ ಕಿಚ್ಚನ ನೂತನ ಸ್ಟೈಲಿಶ್ ಖದರ್ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅನೂಪ್ ಭಂಡಾರಿ ಹಂಚಿಕೊಂಡ ಪೋಸ್ಟ್:
‘ಡೆಡ್ ಮ್ಯಾನ್ ಆಂಥೆಮ್’ ಇಲ್ಲಿದೆ:
ಈಗಾಗಲೇ ಚಿನ್ನದ ಹುಡುಗ ನೀರಜ್ ಚೋಪ್ರಾ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚನಿಗೆ ಶುಭ ಹಾರೈಸಿದ್ದಾರೆ.
ಕಿಚ್ಚ ಸುದೀಪ್ ಹಂಚಿಕೊಂಡಿರುವ ಟ್ವೀಟ್:
ವಿಕ್ರಾಂತ್ ರೋಣ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ ಕೂಡ ಕಾಣಿಸಿಕೊಂಡಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಚಿತ್ರತಂಡವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.
ಇದನ್ನೂ ಓದಿ:
Sudeep Birthday: ಕಿಚ್ಚ ಸುದೀಪ್ಗೆ ಮುದ್ದು ಮಗಳ ವಿಶ್; ಅಪ್ಪನ 10 ಗುಣಗಳನ್ನು ಕೊಂಡಾಡಿದ ಸಾನ್ವಿ
Sunny Leone: ನೆಚ್ಚಿನ ಅಭಿಮಾನಿಗಳಿಗೆ ಕುಳಿತಲ್ಲೇ ಮಾಲ್ಡೀವ್ಸ್ ದರ್ಶನ ಮಾಡಿಸಿದ ಸನ್ನಿ ಲಿಯೋನ್
(Vikrant Rona movie‘s dead man anthem is released on Kichcha Sudeep birthday)
Published On - 11:15 am, Thu, 2 September 21