ನಟ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಮತ್ತು ‘ಕೋಟಿಗೊಬ್ಬ 3’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಅವರ ಮುಂದಿನ ಸಿನಿಮಾದ ಬಗ್ಗೆಯೂ ಕೌತುಕ ಮನೆ ಮಾಡಿದೆ. ಅದರ ನಡುವೆ ಒಂದು ಹೊಸ ಫೋಟೋ ಹಂಚಿಕೊಳ್ಳುವ ಮೂಲಕ ಸುದೀಪ್ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇಷ್ಟು ದಿನಗಳ ಕಾಲ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದ ಅವರು ಈಗ ಮತ್ತೆ ಜಿಮ್ ಬಗ್ಗೆ ಗಮನ ಹರಿಸಿದ್ದಾರೆ. ಹಲವು ದಿನಗಳ ಬಳಿಕ ಅವರು ಜಿಮ್ಗೆ ತೆರಳಿ ವರ್ಕೌಟ್ ಆರಂಭಿಸಿದ್ದಾರೆ. ಜಿಮ್ನಲ್ಲಿ ಕ್ಲಿಕ್ಕಿಸಿದ ಒಂದು ಫೋಟೋವನ್ನು ಕಿಚ್ಚ ಹಂಚಿಕೊಂಡಿದ್ದು, ಅದನ್ನು ಕಂಡ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ.
ಸ್ಟಾರ್ ನಟರು ಜಿಮ್ಗೆ ಹೋಗಿ ವರ್ಕೌಟ್ ಮಾಡುವುದು ವಿಶೇಷವೇನಲ್ಲ. ಆದರೆ ಈ ಫೋಟೋದ ಹಿಂದೆ ಒಂದು ಕಹಾನಿ ಇದೆ. ಇಷ್ಟು ದಿನ ಸುದೀಪ್ ಅವರನ್ನು ಜಿಮ್ಗೆ ತೆರಳದಂತೆ ಕಟ್ಟಿ ಹಾಕಿದ್ದು ಕೊರೊನಾ! ಹೌದು, ಅವರಿಗೆ ಕೊವಿಡ್ ಪಾಸಿಟಿವ್ ಆಗಿತ್ತು ಎಂಬುದು ತಿಳಿದಿರುವ ವಿಚಾರವೇ. ತಿಂಗಳುಗಟ್ಟಲೆ ವಿಶ್ರಾಂತಿ ಪಡೆದ ಅವರು ಕೊನೆಗೂ ಕೊರೊನಾ ವೈರಸ್ಅನ್ನು ಮಣಿಸಿದ್ದರು. ಆದರೆ ಗುಣಮುಖರಾದ ಮೇಲೂ ಕೂಡ ವರ್ಕೌಟ್ ಮಾಡುವುದು ಸುಲಭ ಆಗಿರಲಿಲ್ಲ. ಕೊರೊನಾದಿಂದ ಚೇತರಿಸಿಕೊಂಡ ನಂತರವೂ ಆರೋಗ್ಯದಲ್ಲಿ ಏರುಪೇರು ಆಗುತ್ತಲೇ ಇರುತ್ತದೆ. ಆ ಕಾರಣಕ್ಕೆ ಜಿಮ್ಗೆ ತೆರಳಲು ಸುದೀಪ್ಗೆ ಸಾಧ್ಯವಾಗಿರಲಿಲ್ಲ. ಈಗ ಅದಕ್ಕೆ ಸೆಡ್ಡು ಹೊಡೆದು ಅವರು ಜಿಮ್ ಮೆಟ್ಟಿಲು ಹತ್ತಿದ್ದಾರೆ.
‘ಕೊರೊನಾದಿಂದ ಗುಣಮುಖರಾದ ನಂತರವೂ ತಿಂಗಳುಗಟ್ಟಲೆ ಅದರ ಪ್ರಭಾವ ಇದ್ದೇ ಇರುತ್ತದೆ. ವರ್ಕೌಟ್ ಮಾಡುವುದನ್ನು ನಾನು ತುಂಬ ಎಂಜಾಯ್ ಮಾಡುತ್ತೇನೆ. ಹಾಗಾಗಿ ಮರಳಿ ಜಿಮ್ಗೆ ಬರಬೇಕು ಎಂದು ಪ್ರಯತ್ನಿಸುತ್ತಲೇ ಇದ್ದೆ. ಜಿಮ್ಗೆ ಬಂದು ನನ್ನ ಹಳೇ ದಿನಚರಿಗೆ ಒಗ್ಗಿಕೊಳ್ಳಲು ಖುಷಿ ಎನಿಸುತ್ತಿದೆ. ಅತಿ ಅವಶ್ಯಕತೆ ಇದ್ದಾಗ ನನಗೆ ಬೆಂಬಲ ನೀಡಿದ ವೈದ್ಯರು, ಕುಟುಂಬದವರು, ಸ್ನೇಹಿತರು ಮತ್ತು ಟ್ರೇನರ್ಗಳಿಗೆ ಧನ್ಯವಾದಗಳು’ ಎಂದು ಸುದೀಪ್ ಈ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.
ವೃತ್ತಿಜೀವದನಲ್ಲಿ ‘ಪೈಲ್ವಾನ್’ ಚಿತ್ರಕ್ಕಾಗಿ ಮೊದಲ ಬಾರಿಗೆ ಸುದೀಪ್ ಅವರು ಜಿಮ್ಗೆ ತೆರಳಿದ್ದರು. ಆ ಬಳಿಕ ಅವರಿಗೆ ಅದರಲ್ಲಿ ಆಸಕ್ತಿ ಹೆಚ್ಚಿತು. ಈಗ ಅವರನ್ನು ಮತ್ತೆ ಜಿಮ್ನಲ್ಲಿ ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ. ರಮ್ಯಾ, ಅರವಿಂದ್ ಕೆಪಿ ಸೇರಿದಂತೆ ಅನೇಕರು ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
Vikrant Rona: ವಿಕ್ರಾಂತ್ ರೋಣ ಗೆಟಪ್ನಲ್ಲಿ ಕಂಗೊಳಿಸುತ್ತಿರುವ ಗಣೇಶ; ಹೇಗಿದೆ ನೋಡಿ ಸುದೀಪ್ ಸಿನಿಮಾ ಕ್ರೇಜ್
ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದ ಸುದೀಪ್; ಕಿಚ್ಚನ ದರ್ಶನಕ್ಕೆ ಮುಗಿಬಿದ್ದ ಫ್ಯಾನ್ಸ್