ವಿನಯ್ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ (BBK 10) ಸ್ಪರ್ಧಿಸಿದ್ದರು. ಇದರಿಂದ ಅವರ ಖ್ಯಾತಿ ಹೆಚ್ಚಿದೆ. ಕಿಚ್ಚ ಸುದೀಪ್ ಜೊತೆಯೂ ಅವರು ಆಪ್ತತೆ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್. ವಿನಯ್ ಅವರನ್ನು ಸುದೀಪ್ ಅವರು ಮೆಚ್ಚಿದ್ದರು. ಈಗ ಸುದೀಪ್ ಕುಟುಂಬದ ಜೊತೆ ವಿನಯ್ ಅವರು ಊಟ ಸವಿದಿದ್ದಾರೆ. ಈ ಸಂದರ್ಭದ ಫೋಟೋನ ವಿನಯ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿನಯ್ ಗೌಡ ಅವರು ಬಿಗ್ ಬಾಸ್ ಮನೆಯುಲ್ಲಿ ಸಖತ್ ಅಗ್ರೆಸ್ ಆಗಿ ಕಾಣಿಸಿಕೊಂಡಿದ್ದರು. ಇದು ಅನೇಕರಿಗೆ ಇಷ್ಟ ಆಗಿತ್ತು. ವಿನಯ್ ಗೌಡ ಅವರ ಬಗ್ಗೆ ಸುದೀಪ್ ಮೆಚ್ಚುಗೆ ಸೂಚಿಸಿದ್ದರು. ಈಗ ಸುದೀಪ್ ಕುಟುಂಬದ ಜೊತೆ ಅವರು ಊಟ ಸವಿದಿದ್ದಾರೆ. ಸುದೀಪ್, ಅವರ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಜೊತೆ ಇರೋ ಫೋಟೋನ ವಿನಯ್ ಹಂಚಿಕೊಂಡಿದ್ದಾರೆ.
ಈ ಫೋಟೋಗೆ ‘ಹಂಬಲ್ ಫ್ಯಾಮಿಲಿ. ಅದ್ಭುತ ಊಟಕ್ಕೆ ಧನ್ಯವಾದ. ಡೆಸರ್ಟ್ ಅತ್ಯುತ್ತಮವಾಗಿತ್ತು’ ಎಂದು ಬರೆದಿದ್ದಾರೆ ವಿನಯ್. ಈ ಪೋಸ್ಟ್ಗೆ ಸಾನ್ವಿ ಅವರು ರಿಪ್ಲೈ ಮಾಡಿದ್ದು, ಹಾರ್ಟ್ ಎಮೋಜಿ ಹಾಕಿದ್ದಾರೆ. ಅನೇಕರು ಕಿಚ್ಚ ಅವರ ವಿನಮ್ರತೆ ನೋಡಿ ಖುಷಿ ಪಟ್ಟಿದ್ದಾರೆ. ‘ನೀವೇ ಲಕ್ಕಿ’ ಎಂದು ಅನೇಕರ ಫ್ಯಾನ್ಸ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಲರ್ಸ್ ಕನ್ನಡ ಧಾರಾವಾಹಿಗೆ ಎಂಟ್ರಿಕೊಟ್ಟ ವಿನಯ್ ಗೌಡ; ಇಲ್ಲಿದೆ ವಿವರ
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳನ್ನು ಮನೆಯವರಂತೆ ಟ್ರೀಟ್ ಮಾಡುತ್ತಾರೆ. ಅವರ ಬಗ್ಗೆ ಯಾರಾದರೂ ತಪ್ಪಾಗಿ ಮಾತನಾಡಿದರೆ ಅದನ್ನು ಖಂಡಿಸುತ್ತಾರೆ. ಬಿಗ್ ಬಾಸ್ ಸ್ಪರ್ಧಿಗಳು ಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡಿದ್ದೂ ಇದೆ. ಈಗ ವಿನಯ್ ಗೌಡ ಜೊತೆ ಅವರು ಊಟ ಮಾಡಿರೋದು ವಿಶೇಷ. ವಿನಯ್ ಗೌಡ ಅವರು ‘ಹರ ಹರ ಮಹದೇವ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ‘ಬಿಗ್ ಬಾಸ್’ ಬಂದ ಬಳಿಕ ಅವರ ಖ್ಯಾತಿ ಮತ್ತಷ್ಟು ಹೆಚ್ಚಿತು. ಒಂದು ವರ್ಗದ ಜನರು ಅವರನ್ನು ಬಹುವಾಗಿ ಇಷ್ಟಪಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ