ಕಲರ್ಸ್ ಕನ್ನಡ ಧಾರಾವಾಹಿಗೆ ಎಂಟ್ರಿಕೊಟ್ಟ ವಿನಯ್ ಗೌಡ; ಇಲ್ಲಿದೆ ವಿವರ

ಬಿಗ್ ಬಾಸ್​​ಗೆ ಬಂದ ಬಳಿಕ ವಿನಯ್ ಗೌಡ ಅವರು ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿದರು. ಅವರ ರೋಷ, ಸಿಟ್ಟು ಅನೇಕರಿಗೆ ಇಷ್ಟ ಆಯಿತು. ಈಗ ಅವರು ‘ಚುಕ್ಕಿತಾರೆ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಅವರ ಜೊತೆ ಪತ್ನಿ ಅಕ್ಷತಾ ಗೌಡ ಕೂಡ ಆಗಮಿಸಿದ್ದಾರೆ.  

ಕಲರ್ಸ್ ಕನ್ನಡ ಧಾರಾವಾಹಿಗೆ ಎಂಟ್ರಿಕೊಟ್ಟ ವಿನಯ್ ಗೌಡ; ಇಲ್ಲಿದೆ ವಿವರ
ಅಕ್ಷತಾ-ವಿನಯ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Apr 12, 2024 | 11:45 AM

ವಿನಯ್ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ (BBK 10) ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಅವರು ‘ಆನೆ’ ಎಂದೇ ಫೇಮಸ್ ಆದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಹಲವು ಆಫರ್​ಗಳು ಅವರಿಗೆ ಬರುತ್ತಿವೆ. ವಿಶೇಷ ಎಂದರೆ ಈಗ ಅವರು ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನಿಡಿದೆ. ಹಾಗಂತ ವಿನಯ್ ಅವರು ಹೀರೋ ಆಗಿ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಿಗೆ ಅವರದ್ದು ಅತಿಥಿ ಪಾತ್ರ.

ವಿನಯ್ ಗೌಡ ಅವರು ಈ ಮೊದಲು ಧಾರಾವಾಹಿಗಳಲ್ಲಿ ನಟಿಸಿದ್ದರು. ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಈಶ್ವರನ ಪಾತ್ರ ಮಾಡಿ ಅವರು ಗಮನ ಸೆಳೆದಿದ್ದಾರೆ. ಬಿಗ್ ಬಾಸ್​​ಗೆ ಬಂದ ಬಳಿಕ ಅವರು ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿದರು. ಅವರ ರೋಷ, ಸಿಟ್ಟು ಅನೇಕರಿಗೆ ಇಷ್ಟ ಆಯಿತು. ಈಗ ಅವರು ‘ಚುಕ್ಕಿತಾರೆ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಅವರ ಜೊತೆ ಪತ್ನಿ ಅಕ್ಷತಾ ಗೌಡ ಕೂಡ ಆಗಮಿಸಿದ್ದಾರೆ.

ಶ್ರೀಮಂತ ಹಾಗೂ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಎರಡು ಮಕ್ಕಳ ಕಥೆ ‘ಚುಕ್ಕಿ ತಾರೆ’ ಧಾರಾವಾಹಿ. ಬಡ ಕುಟುಂಬದ ಹುಡುಗಿ ಚುಕ್ಕಿಗೆ ಕಾಲಿಲ್ಲ. ಆದರೆ, ಸುಖ ಇದೆ. ತಂದೆ ಅವಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಶ್ರೀಮಂತ ಕುಟುಂಬದ ಇಬ್ಬನಿ ಮನೆಯಲ್ಲಿ ಸಾಕಷ್ಟು ಐಶ್ವರ್ಯ ಹಾಗೂ ಹಣ ಇದೆ. ಆದರೆ, ಸಂತೋಷ ಇಲ್ಲ. ಈ ಕಥೆಯನ್ನು ತೋರಿಸಲಾಗುತ್ತಿದೆ. ಕಥಾ ನಾಯಕನ ಗೆಳೆಯನ ಪಾತ್ರದಲ್ಲಿ ವಿನಯ್ ಹಾಗೂ ಅವರ ಪತ್ನಿ ಅಕ್ಷತಾ ಎಂಟ್ರಿ ಕೊಟ್ಟಿದ್ದಾರೆ.

ಯುಗಾದಿ ಸಂದರ್ಭದಲ್ಲಿ ಧಾರಾವಾಹಿಗಳಲ್ಲಿ ವಿಶೇಷ ಪಾತ್ರಗಳ ಎಂಟ್ರಿ ಆಗುತ್ತದೆ. ಅದೇ ರೀತಿ ‘ಚುಕ್ಕಿ ತಾರೆ’ ಧಾರಾವಾಹಿಯಲ್ಲಿ ವಿನಯ್ ಗೌಡ ಅವರು ಆಗಮಿಸಿದ್ದಾರೆ. ಅವರು ಬಂದು ಯುಗಾದಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಈ ಎಪಿಸೋಡ್​ಗಳು ಗಮನ ಸೆಳೆಯುತ್ತಿವೆ.

ಇದನ್ನೂ ಓದಿ: ವಿನಯ್ ಗೌಡ ಬರ್ತ್​ಡೇ ಸೆಲೆಬ್ರೇಷನ್​ನಲ್ಲಿ ಆನೆಯೇ ಹೈಲೈಟ್; ಸಂಗೀತಾ ಗೈರು ಹಾಜರಿ

ವಿನಯ್ ಗೌಡ ಅವರು ಬಿಗ್ ಬಾಸ್​ಗೆ ಬಂದಾಗ ಸಖತ್ ಅಗ್ರೆಸ್​ ಆಗಿ ಕಾಣಿಸಿಕೊಂಡಿದ್ದರು. ಅವರು ಮಾಡಿದ ಪದ ಬಳಕೆ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಅವರು ಫಿನಾಲೆಗೆ ಬಂದು ಕಪ್ ಗೆಲ್ಲುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಅವರು ಫಿನಾಲೆಗೆ ಏನೋ ಬಂದರು. ಆದರೆ, ಕಪ್ ಗೆಲ್ಲೋಕೆ ಅವರ ಬಳಿ ಸಾಧ್ಯವಾಗಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಸದ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಹಲವು ಸ್ಟೋರ್​ಗಳ ಪ್ರಚಾರ ಮಾಡವುದರಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:44 am, Fri, 12 April 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್