ವಿನಯ್ ಗೌಡ ಬರ್ತ್ಡೇ ಸೆಲೆಬ್ರೇಷನ್ನಲ್ಲಿ ಆನೆಯೇ ಹೈಲೈಟ್; ಸಂಗೀತಾ ಗೈರು ಹಾಜರಿ
ವಿನಯ್ ಗೌಡ ಅವರು ಪತ್ನಿ, ಮಗ ಜೊತೆಗೆ ಬಿಗ್ ಬಾಸ್ ಫ್ಯಾಮಿಲಿಯ ಕೆಲವರು ಆಗಮಿಸಿದ್ದರು. ‘ಬಿಗ್ ಬಾಸ್’ನಲ್ಲಿ ಆಪ್ತವಾಗಿದ್ದ ಕಾರ್ತಿಕ್ ಮಹೇಶ್, ಪವಿ ಪೂವಪ್ಪ, ಮೈಕಲ್ ಅಜಯ್, ನೀತು ವನಜಾಕ್ಷಿ, ಸ್ನೇಹಿತ್ ಗೌಡ, ನಮ್ರತಾ ಗೌಡ, ದಿವ್ಯಾ ಉರುಡುಗ ಮೊದಲಾದವರು ಭಾಗಿ ಆಗಿದ್ದರು.
ವಿನಯ್ ಗೌಡ (Vinay Gowda) ಅವರು ‘ಬಿಗ್ ಬಾಸ್’ ಮನೆಯಲ್ಲಿ ಇದ್ದಾಗ ಆನೆ ಎಂದೇ ಫೇಮಸ್ ಆಗಿದ್ದರು. ಮೊದಲ ಕೆಲವು ವಾರಗಳಲ್ಲಿ ಅವರು ಆಟ ಆಡುತ್ತಿದ್ದ ರೀತಿ ನೋಡಿ ವೀಕ್ಷಕರು ಅವರಿಗೆ ‘ಆನೆ’ ಪಟ್ಟ ಕೊಟ್ಟರು. ನಂತರ ಅವರು ಆನೆ ಎಂದೇ ಫೇಮಸ್ ಆದರು. ಬಿಗ್ ಬಾಸ್ನಿಂದ ಹೊರ ಬಂದ ಬಳಿಕವೂ ಅವರಿಗೆ ಆನೆ ಪಟ್ಟ ಮುಂದುವರಿದಿದೆ. ಇತ್ತೀಚೆಗೆ ವಿನಯ್ ಗೌಡ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಕೇಕ್ ಮೇಲೆ ಆನೆ ಮೂರ್ತಿ ಇತ್ತು. ಪೋಸ್ಟರ್ನಲ್ಲೂ ಆನೆ ಚಿತ್ರ ಹೈಲೈಟ್ ಆಗಿದೆ ಅನ್ನೋದು ವಿಶೇಷ.
ವಿನಯ್ ಗೌಡ ಅವರು ಇತ್ತೀಚೆಗೆ ಖಾಸಗಿ ರೆಸ್ಟೋರೆಂಟ್ ಒಂದರಲ್ಲಿ ಬರ್ತ್ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ಹಾಗೂ ಮಗ ಇದ್ದರು. ಇದರ ಜೊತೆಗೆ ಬಿಗ್ ಬಾಸ್ ಫ್ಯಾಮಿಲಿಯ ಕೆಲವರು ಆಗಮಿಸಿದ್ದರು. ‘ಬಿಗ್ ಬಾಸ್’ನಲ್ಲಿ ಆಪ್ತವಾಗಿದ್ದ ಕಾರ್ತಿಕ್ ಮಹೇಶ್, ಪವಿ ಪೂವಪ್ಪ, ಮೈಕಲ್ ಅಜಯ್, ನೀತು ವನಜಾಕ್ಷಿ, ಸ್ನೇಹಿತ್ ಗೌಡ, ನಮ್ರತಾ ಗೌಡ, ದಿವ್ಯಾ ಉರುಡುಗ ಮೊದಲಾದವರು ಭಾಗಿ ಆಗಿದ್ದರು.
View this post on Instagram
‘ಬಿಗ್ ಬಾಸ್’ನಲ್ಲಿ ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ಮಧ್ಯೆ ಕಿರಿಕ್ ಆಗಿತ್ತು. ಈ ಕಾರಣಕ್ಕೆ ಆರಂಭದಿಂದ ಕೊನೆಯವರೆಗೂ ವಿನಯ್ನ ವಿರೋಧಿಸುತ್ತಲೇ ಬಂದರು ಸಂಗೀತಾ. ಬಿಗ್ ಬಾಸ್ನಿಂದ ಹೊರ ಹೋದ ಬಳಿಕವೂ ನಾನು ವಿನಯ್ನ ಭೇಟಿ ಮಾಡಲ್ಲ ಎಂದು ಹೇಳಿದ್ದರು. ಅದೇ ರೀತಿ ಅವರು ಬರ್ತ್ಡೇ ಆಗಮಿಸಿಲ್ಲ.
ಇದನ್ನೂ ಓದಿ: ಮುಗಿಯುತ್ತಿಲ್ಲ ಬಿಗ್ ಬಾಸ್ ವಿನ್ನರ್ ರಂಪಾಟ; ಯೂಟ್ಯೂಬರ್ ಮೇಲೆ ಹಲ್ಲೆ, ವಿಡಿಯೋ ವೈರಲ್
ಬರ್ತ್ಡೇ ಸೆಲೆಬ್ರೇಷನ್ ಹೇಗಿತ್ತು ಎಂಬುದನ್ನು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ ವಿನಯ್ ಗೌಡ, ಕಾರ್ತಿಕ್, ನೀತು ಮೊದಲಾದವರು ಹೂಗುಚ್ಛ ನೀಡಿ ವಿನಯ್ನ ಸ್ವಾಗತಿಸಿದ್ದಾರೆ. ‘ಆನೆ ಸರ್’ ಎಂದು ಕೆಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಬಿಗ್ ಬಾಸ್ ಆನೆ’ ಎಂದು ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ