AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಟಿ ಲೈಟ್ಸ್’ ಬಿಡುಗಡೆಗೆ ಸೇಫ್ ದಿನ ನಿಗದಿ ಮಾಡಿದ ದುನಿಯಾ ವಿಜಿ

Vinay Rajkumar-Duniya Vijay: ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಮತ್ತೊಬ್ಬ ನಾಯಕನಿಗಾಗಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅದುವೇ ‘ಸಿಟಿ ಲೈಟ್ಸ್’. ಚಾರ್ಲಿ ಚಾಪ್ಲಿನ್ ಅವರ ಜನಪ್ರಿಯ ಸಿನಿಮಾದ ಹೆಸರನ್ನೇ ಇರಿಸಿ ಸಿನಿಮಾ ನಿರ್ದೇಶನ ಮಾಡಿದ್ದಾರೆ ದುನಿಯಾ ವಿಜಿ, ಸಿನಿಮಾನಲ್ಲಿ ವಿನಯ್ ರಾಜ್​​ಕುಮಾರ್ ನಾಯಕ ಮತ್ತು ದುನಿಯಾ ವಿಜಯ್ ಪುತ್ರಿಯೇ ನಾಯಕಿ. ಸಿನಿಮಾದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದ್ದು, ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.

‘ಸಿಟಿ ಲೈಟ್ಸ್’ ಬಿಡುಗಡೆಗೆ ಸೇಫ್ ದಿನ ನಿಗದಿ ಮಾಡಿದ ದುನಿಯಾ ವಿಜಿ
City Lights
ಮಂಜುನಾಥ ಸಿ.
|

Updated on:Aug 04, 2026 | 11:21 AM

Share

ಮುಖ್ಯಾಂಶಗಳು

  • ದುನಿಯಾ ವಿಜಯ್ ನಿರ್ದೇಶನದ ಮೂರನೇ ಸಿನಿಮಾ ‘ಸಿಟಿ ಲೈಟ್ಸ್’
  • ವಿನಯ್ ರಾಜ್​ಕುಮಾರ್ ಮತ್ತು ದುನಿಯಾ ವಿಜಿ ಪುತ್ರಿ ನಟಿಸಿರುವ ಸಿನಿಮಾ.
  • ‘ಸಿಟಿ ಲೈಟ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ದುನಿಯಾ ವಿಜಯ್ (Duniya Vijay), ಯಶಸ್ವಿ ನಾಯಕನ ಜೊತೆಗೆ ಯಶಸ್ವಿ ನಿರ್ದೇಶಕ ಸಹ. ಈ ವರೆಗೆ ಅವರು ನಿರ್ದೇಶನ ಮಾಡಿರುವ ಎರಡೂ ಸಿನಿಮಾಗಳು ಹಿಟ್ ಎನಿಸಿಕೊಂಡಿವೆ. ದುನಿಯಾ ವಿಜಿ ನಿರ್ದೇಶಿಸಿದ ಎರಡೂ ಸಿನಿಮಾಗಳಲ್ಲಿ ಅವರೇ ನಾಯಕರಾಗಿದ್ದರು. ಆದರೆ ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಮತ್ತೊಬ್ಬ ನಾಯಕನಿಗಾಗಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅದುವೇ ‘ಸಿಟಿ ಲೈಟ್ಸ್’. ಚಾರ್ಲಿ ಚಾಪ್ಲಿನ್ ಅವರ ಜನಪ್ರಿಯ ಸಿನಿಮಾದ ಹೆಸರನ್ನೇ ಇರಿಸಿ ಸಿನಿಮಾ ನಿರ್ದೇಶನ ಮಾಡಿದ್ದಾರೆ ದುನಿಯಾ ವಿಜಿ, ಸಿನಿಮಾನಲ್ಲಿ ವಿನಯ್ ರಾಜ್​​ಕುಮಾರ್ ನಾಯಕ ಮತ್ತು ದುನಿಯಾ ವಿಜಯ್ ಪುತ್ರಿಯೇ ನಾಯಕಿ. ಸಿನಿಮಾದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದ್ದು, ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.

‘ಸಿಟಿ ಲೈಟ್ಸ್’ ಸಿನಿಮಾ ಸೆಪ್ಟೆಂಬರ್ 18ಕ್ಕೆ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಇದು ದುನಿಯಾ ವಿಜಯ್ ಅವರ ಮೂರನೇ ನಿರ್ದೇಶನದ ಸಿನಿಮಾ ಆಗಿದ್ದು, ವಿನಯ್ ರಾಜ್​ಕುಮಾರ್ ಮತ್ತು ದುನಿಯಾ ವಿಜಯ್ ಪುತ್ರಿ ಮೊನಿಷಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಮೊನಿಷಾ ಅವರಿಗೆ ಇದು ಮೊಟ್ಟ ಮೊದಲ ಸಿನಿಮಾ ಆಗಿದೆ. ವಿಜಿ ಅವರ ಮತ್ತೊಬ್ಬ ಪುತ್ರಿ ರಿತನ್ಯಾ ಈಗಾಗಲೇ ಲ್ಯಾಂಡ್ ಲಾರ್ಡ್ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಇದೀಗ ‘ಸಿಟಿ ಲೈಟ್ಸ್’ ಮೂಲಕ ಮತ್ತೊಬ್ಬ ಪುತ್ರಿಯನ್ನೂ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ನಗರ ಬದುಕಿನ ಹಲವು ಮುಖಗಳನ್ನು ತೋರಿಸುವ ಕತೆಯನ್ನು ‘ಸಿಟಿ ಲೈಟ್ಸ್’ ಸಿನಿಮಾ ಒಳಗೊಂಡಿದೆ. ಬೆಂಗಳೂರಿನ ಸ್ಲಂಗಳು ಇನ್ನಿತರೆ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ‘ಸಿಟಿ ಲೈಟ್ಸ್’ ನೈಜತೆಯನ್ನು ಒಳಗೊಂಡಿರುವ ಪ್ರೇಮಕತೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಸಿನಿಮಾನಲ್ಲಿ ದುನಿಯಾ ವಿಜಿ ಸಹ ನಟಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಮಾಸ್ತಿ ಅವರ ಸಂಭಾಷಣೆ ಇದೆ. ಸಿನಿಮಾನಲ್ಲಿ ಕಾಕ್ರೂಚ್ ಸುಧಿ ಸಹ ನಟಿಸಿದ್ದಾರೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ. ಆನಂದ್ ಆಡಿಯೋ ಸಂಗೀತದ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:11 am, Tue, 4 August 26

Follow Us
ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಸಂಭ್ರಮ!
ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಸಂಭ್ರಮ!
ಪೀಣ್ಯದಲ್ಲಿ ಪುಡಿ ರೌಡಿಗಳ ಪುಂಡಾಟ, ಕಲ್ಲು ತೂರಿ ಕಾರು ಧ್ವಂಸ!
ಪೀಣ್ಯದಲ್ಲಿ ಪುಡಿ ರೌಡಿಗಳ ಪುಂಡಾಟ, ಕಲ್ಲು ತೂರಿ ಕಾರು ಧ್ವಂಸ!
ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಸಂಪುಟ ವಿಸ್ತರಣೆ ಗೊಂದಲದ ನಡುವೆ ಡಿಕೆ ಶಿವಕುಮಾರ್ ಸ್ಪಷ್ಟನೆ
ಸಂಪುಟ ವಿಸ್ತರಣೆ ಗೊಂದಲದ ನಡುವೆ ಡಿಕೆ ಶಿವಕುಮಾರ್ ಸ್ಪಷ್ಟನೆ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಕೋಲಾರಕ್ಕೆ ಮೋಸ ಮಾಡಿದ್ದಾರೆ: ನಾರಾಯಣಸ್ವಾಮಿ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಕೋಲಾರಕ್ಕೆ ಮೋಸ ಮಾಡಿದ್ದಾರೆ: ನಾರಾಯಣಸ್ವಾಮಿ
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ
ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು