ಶಿವರಾಮ್​ ಹೆಬ್ಬಾರ್​ ವಿರುದ್ಧ ಚೇತನ್​ ಬರೀ 1 ರೂ. ಮಾನನಷ್ಟ ಮೊಕದ್ದಮೆ ಹಾಕಿದ್ದಕ್ಕೆ ಇಲ್ಲಿದೆ ಮುಖ್ಯ ಕಾರಣ
ಚೇತನ್​, ಶಿವರಾಮ್ ಹೆಬ್ಬಾರ್​

ಶಿವರಾಮ್​ ಹೆಬ್ಬಾರ್​ ವಿರುದ್ಧ ಚೇತನ್​ ಬರೀ 1 ರೂ. ಮಾನನಷ್ಟ ಮೊಕದ್ದಮೆ ಹಾಕಿದ್ದಕ್ಕೆ ಇಲ್ಲಿದೆ ಮುಖ್ಯ ಕಾರಣ

| Updated By: ಮದನ್​ ಕುಮಾರ್​

Updated on: Jun 27, 2021 | 5:54 PM

Shivaram Hebbar: ಶಿವರಾಮ್​ ಹೆಬ್ಬಾರ್​ ವಿರುದ್ಧ ಚೇತನ್​ 1 ರೂ. ಮಾನನಷ್ಟ ಮೊಕದ್ದಮೆ ಹಾಕಿದ್ದು ಯಾಕೆ ಎಂಬ ಅನುಮಾನ ಎಲ್ಲರಲ್ಲೂ ಮೂಡಿತ್ತು. ಆ ಬಗ್ಗೆ ಅವರೀಗ ಪ್ರತಿಕ್ರಿಯೆ ನೀಡಿದ್ದಾರೆ.

‘ಒಂದು ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಿದ್ದು ಯಾಕೆಂದರೆ, ಇದು ದುಡ್ಡಿಗಾಗಿ ಹಾಕಿರುವುದಲ್ಲ. ಲಕ್ಷ, ಕೋಟಿ ಹಾಕುವ ಉದ್ದೇಶ ಇಲ್ಲ. ಒಂದು ಮೊತ್ತ ಹಾಕಬೇಕು. ಅದರಲ್ಲಿ ಅತೀ ಕಡಿಮೆ ಎಂದರೆ ಒಂದು ರೂಪಾಯಿ. ಅದನ್ನು ಸಾಂಕೇತಿಕವಾಗಿ ಹಾಕಿದ್ದೇನೆ. ಅವರು ಕ್ಷಮೆ ಕೇಳಬೇಕು. ಗಂಜಿ ಕಾಸು, ಕಂಟಕಕರ ಅಂತ ಮಾತನಾಡಿರುವುದು ತಪ್ಪು’ ಎಂದು ಚೇತನ್​ ಹೇಳಿದ್ದಾರೆ.

‘ನಾವು ಪ್ರಜಾಪ್ರಭುತ್ವವನ್ನು ನಂಬುವವರು. ಚರ್ಚೆಯನ್ನು ನಂಬುವವರು. ನೀವು ಚರ್ಚೆ ಮಾಡಿ. ನಿಮ್ಮಂತೆ ನಮಗೂ ಮಾತನಾಡುವ ಹಕ್ಕಿದೆ. ಜನಸೇವಕರಾದ​ ನಿಮ್ಮಂದ ನಾವು ಏನಾದರೂ ಕಲಿಯಲು ಸಿದ್ಧರಿದ್ದೇವೆ. ನಮ್ಮಿಂದ ಕಲಿಯುವುದು ಇದ್ದರೆ ನೀವು ಅದನ್ನು ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಅಧಿಕೃತ ಟ್ವಿಟರ್​ ಖಾತೆ ಮೂಲಕ ಈ ರೀತಿ ಮಾತನಾಡುವುದನ್ನು ನಾನು ಒಪ್ಪುವುದಿಲ್ಲ. ಅದಕ್ಕೆ ನಾನು ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ಕ್ರಿಮಿನಲ್​ ಹಾಕಿಲ್ಲ, ಸಿವಿಲ್​ ಹಾಕಿದ್ದೇನೆ. ಅವರು ಕ್ಷಮೆ ಕೇಳಲಿ’ ಎಂದು ಚೇತನ್​ ಹೇಳಿದ್ದಾರೆ.

ನಟ ಚೇತನ್​ ಅವರು ಬ್ರಾಹ್ಮಣ್ಯದ ಕುರಿತಂತೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದನ್ನು ಖಂಡಿಸಿ, ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​ ಟ್ವೀಟ್​ ಮಾಡಿದ್ದರು. ಆ ಟ್ವೀಟ್​ನಿಂದ ತಮ್ಮ ತೇಜೋವಧೆ ಆಗಿದೆ ಎಂದು ಆರೋಪಿಸಿ ಸಚಿವರ ವಿರುದ್ಧ ಚೇತನ್​ 1 ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇದನ್ನೂ ಓದಿ:

ಚೇತನ್​ ಗಡಿಪಾರಿಗೆ ಸೋಶಿಯಲ್​ ಮೀಡಿಯಾದಲ್ಲಿ ಒತ್ತಾಯ; ನಟನ ಪ್ರತಿಕ್ರಿಯೆ ಏನು?

ನಟ ಚೇತನ್​ ಈವರೆಗೆ ಒಮ್ಮೆಯೂ ವೋಟ್​ ಹಾಕಿಲ್ಲ; ಅದಕ್ಕೆ ಇದೆ ಒಂದು ವಿಶೇಷ ಕಾರಣ