ದೃಶ್ಯಂ ಸಿನಿಮಾ ನಿರ್ದೇಶಕರ ಸಾವಿನ ಸುದ್ದಿ ಕೇವಲ ವದಂತಿ ಎಂದ ಸ್ನೇಹಿತರು

ಕೆಲವು ಗಂಟೆಗಳ ಹಿಂದೆ ದೃಶ್ಯಂ ಸಿನಿಮಾದ ನಿರ್ದೇಶಕ ನಿಶಿಕಾಂತ್ ಕಾಮತ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಸದ್ಯ ನಿಶಿಕಾಂತ್ ಕಾಮತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಿಶಿಕಾಂತ್ ಕಾಮತ್ ಯಕೃತಿನ ಸಮಸ್ಯೆಯಿಂದ ಬಳಲುತ್ತಿದ್ದು, ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ ಇಂದು ನಿಶಿಕಾಂತ್ ಆಪ್ತ ನಿರ್ದೇಶಕ ಮಿಲಾಪ್​ ಝವೇರಿ ತಮ್ಮ ಟ್ವಿಟರ್​ ಖಾತೆಯಲ್ಲಿ ನಿಶಿಕಾಂತ್​ ಕಾಮತ್​ ನಿಧನರಾಗಿದ್ದಾರೆ ಎಂದು ಆಕಸ್ಮಿಕವಾಗಿ ಪೋಸ್ಟ್​ ಮಾಡಿಬಿಟ್ಟರು. ಇವರ ಟ್ವೀಟ್​ನಿಂದ ನಿಶಿಕಾಂತ್ ಸಾವಿನ್ನಪ್ಪಿದ್ದಾರೆ ಎಂದು ಎಲ್ಲರೂ […]

ದೃಶ್ಯಂ ಸಿನಿಮಾ ನಿರ್ದೇಶಕರ ಸಾವಿನ ಸುದ್ದಿ ಕೇವಲ ವದಂತಿ ಎಂದ ಸ್ನೇಹಿತರು
ಸಾಧು ಶ್ರೀನಾಥ್​ Edited By:

Updated on: Aug 17, 2020 | 4:01 PM

ಕೆಲವು ಗಂಟೆಗಳ ಹಿಂದೆ ದೃಶ್ಯಂ ಸಿನಿಮಾದ ನಿರ್ದೇಶಕ ನಿಶಿಕಾಂತ್ ಕಾಮತ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಸದ್ಯ ನಿಶಿಕಾಂತ್ ಕಾಮತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ನಿಶಿಕಾಂತ್ ಕಾಮತ್ ಯಕೃತಿನ ಸಮಸ್ಯೆಯಿಂದ ಬಳಲುತ್ತಿದ್ದು, ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ ಇಂದು ನಿಶಿಕಾಂತ್ ಆಪ್ತ ನಿರ್ದೇಶಕ ಮಿಲಾಪ್​ ಝವೇರಿ ತಮ್ಮ ಟ್ವಿಟರ್​ ಖಾತೆಯಲ್ಲಿ ನಿಶಿಕಾಂತ್​ ಕಾಮತ್​ ನಿಧನರಾಗಿದ್ದಾರೆ ಎಂದು ಆಕಸ್ಮಿಕವಾಗಿ ಪೋಸ್ಟ್​ ಮಾಡಿಬಿಟ್ಟರು.

ಇವರ ಟ್ವೀಟ್​ನಿಂದ ನಿಶಿಕಾಂತ್ ಸಾವಿನ್ನಪ್ಪಿದ್ದಾರೆ ಎಂದು ಎಲ್ಲರೂ ನಂಬಿದರು. ಆದರೆ, ಕೂಡಲೇ ಮಿಲಾಪ್ ಝವೇರಿ ಹಾಗೂ ನಿಶಿಕಾಂತ್​ ಕಾಮತ್  ಸ್ನೇಹಿತರಾದ ರಿತೇಶ್ ದೇಶಮುಖ್ ನಿಶಿಕಾಂತ್ ಕಾಮತ್ ಮೃತಪಟ್ಟಿಲ್ಲ. ಬದಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸ್ಪಷ್ಟನೆ ನೀಡಿದ್ದಾರೆ.

https://twitter.com/zmilap/status/1295250907127377920?s=20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us