ಪಲ್ಲವಿ ಟಾಕೀಸ್​ನಲ್ಲಿ ಮೋಡಿ ಮಾಡಲು ಬಂದ ತಿಲಕ್​-ಯಜ್ಞಾ ಶೆಟ್ಟಿಗೆ ಅಜನೀಶ್​ ಲೋಕನಾಥ್​ ಸಾಥ್​

Ajaneesh Loknath: ಶೀಘ್ರದಲ್ಲೇ ಟ್ರೇಲರ್​ ಬಿಡುಗಡೆ ಮಾಡಲು ‘H/34 ಪಲ್ಲವಿ ಟಾಕೀಸ್​’ ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ಜೂನ್​ ಎರಡನೇ ವಾರದ ವೇಳೆ ಓಟಿಟಿ ಪ್ಲಾಟ್​ಫಾರ್ಮ್​ ಮೂಲಕ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.

ಪಲ್ಲವಿ ಟಾಕೀಸ್​ನಲ್ಲಿ ಮೋಡಿ ಮಾಡಲು ಬಂದ ತಿಲಕ್​-ಯಜ್ಞಾ ಶೆಟ್ಟಿಗೆ ಅಜನೀಶ್​ ಲೋಕನಾಥ್​ ಸಾಥ್​
‘H/34 ಪಲ್ಲವಿ ಟಾಕೀಸ್​’ ಸಿನಿಮಾದಲ್ಲಿ ತಿಲಕ್​ ಮತ್ತು ಯಜ್ಞಾ ಶೆಟ್ಟಿ
Edited By:

Updated on: May 28, 2021 | 2:55 PM

ಕೊರೊನಾ ವೈರಸ್​ ಹಾವಳಿಯಿಂದಾಗಿ ಸಿನಿಮಾ ಶೂಟಿಂಗ್​ ಮತ್ತು ಪ್ರದರ್ಶನಕ್ಕೆ ಬ್ರೇಕ್​ ಬಿದ್ದಿದೆ. ಈ ನಡುವೆ ಚಿತ್ರೋದ್ಯಮಿಗಳು ಭರವಸೆ ಕಳೆದುಕೊಂಡಿಲ್ಲ. ಮುಂಬರುವ ದಿನಗಳಲ್ಲಿ ಪ್ರೇಕ್ಷಕರನ್ನು ರಂಜಿಸುವ ವಿಶ್ವಾಸದೊಂದಿಗೆ ನಿರಂತರವಾಗಿ ಪ್ರಯತ್ನ ಮುಂದುವರಿಸಿದ್ದಾರೆ. ಓಟಿಟಿ ಪ್ಲಾಟ್​ಫಾರ್ಮ್​ಗಳ ಮೂಲಕವಾದರೂ ಸರಿ, ಜನರಿಗೆ ಮನರಂಜನೆ ನೀಡಲು ಹಲವು ಚಿತ್ರತಂಡಗಳು ಸಜ್ಜಾಗುತ್ತಿವೆ. ಕನ್ನಡದ ಖ್ಯಾತ ನಟರಾದ ತಿಲಕ್​ ಮತ್ತು ಯಜ್ಞಾ ಶೆಟ್ಟಿ ಜೊತೆಯಾಗಿ ನಟಿಸಿರುವ ಹೊಸದೊಂದು ಸಿನಿಮಾ ಕೂಡ ಸದ್ಯದಲ್ಲೇ ಬಿಡುಗಡೆ ಆಗಲಿದೆ. ‘H/34 ಪಲ್ಲವಿ ಟಾಕೀಸ್​’ ಎಂಬುದು ಈ ಸಿನಿಮಾದ ಹೆಸರು.

ಇತ್ತೀಚೆಗೆ ಈ ಸಿನಿಮಾದ ಒಂದು ಲಿರಿಕಲ್​ ವಿಡಿಯೋ ರಿಲೀಸ್​ ಆಗಿದೆ. ‘ಬರೆವೆ ಬರೆವೆ ಒಲವ ಕವನ..’ ಎಂಬ ಹಾಡನ್ನು ಆನಂದ್​ ಆಡಿಯೋ ಮೂಲಕ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ. ಪ್ರಸ್ತುತ ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅವರು ಪ್ರತಿ ಸಿನಿಮಾದಲ್ಲೂ ಮೆಲೋಡಿ ಗೀತೆಗಳ ಮೂಲಕ ಕೇಳುಗರ ಮನ ಗೆಲ್ಲುತ್ತಿದ್ದಾರೆ. ‘H/34 ಪಲ್ಲವಿ ಟಾಕೀಸ್​’ ಚಿತ್ರದ ‘ಬರೆವೆ ಬರೆವೆ ಒಲವ ಕವನ..’ ಸಾಂಗ್​ ಕೂಡ ಜನರಿಗೆ ಇಷ್ಟ ಆಗುತ್ತಿದೆ.

ಈ ಹಾಡಿಗೆ ಅಂತಿತ್​ ತಿವಾರಿ ಧ್ವನಿ ನೀಡಿದ್ದಾರೆ. ಸುಂದರ ಲೊಕೇಷನ್​ಗಳಲ್ಲಿ ಹಾಡನ್ನು ಚಿತ್ರಿಸಲಾಗಿದೆ. ಈ ಹಿಂದೆ ‘6ನೇ ಮೈಲಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಶ್ರೀನಿವಾಸ್​ ಚಿಕ್ಕಣ್ಣ (ಸೀನಿ) ಅವರು ‘H/34 ಪಲ್ಲವಿ ಟಾಕೀಸ್​’ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ‘ಬರೆವೆ ಬರೆವೆ ಒಲವ ಕವನ..’ ಹಾಡಿಗೆ ಶ್ರೀನಿವಾಸ್​ ಚಿಕ್ಕಣ್ಣ ಅವರೇ ಸಾಹಿತ್ಯ ಬರೆದಿದ್ದಾರೆ.

ಸಚೇಂದ್ರ ಪ್ರಸಾದ್, ಅವಿನಾಶ್, ಸುಧಾ ಬೆಳವಾಡಿ, ಅಚ್ಯುತ್​ ಕುಮಾರ್, ಪದ್ಮಜಾ ರಾವ್, ಕುರಿ ಪ್ರತಾಪ್, ವಿಶ್ವ, ಅಮೃತಾ ಮಯೂರಿ, ರಾಜೇಶ್ವರಿ, ರಾಕ್ ಲೈನ್ ಸುಧಾಕರ್, ಅಜಯ್ ರಾಜ್ ಮುಂತಾದವರು ‘H/34 ಪಲ್ಲವಿ ಟಾಕೀಸ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಲಭೈರವ ಆರ್ಟ್ಸ್ ಲಾಂಛನದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಮಂಜುನಾಥ್ ಕೆ. ಮತ್ತು ರವಿಕಿರಣ್ ಎಂ. ಗೌಡ ಬಂಡವಾಳ ಹೂಡಿದ್ದಾರೆ.

ಹಾರರ್​, ಸಸ್ಪೆನ್ಸ್​-ಥ್ರಿಲ್ಲರ್​ ಮಾದರಿಯಲ್ಲಿ ಈ ಚಿತ್ರ ಮೂಡಿಬಂದಿದೆ. ನಿರ್ದೇಶನದ ಜೊತೆ ಕಥೆ, ಚಿತ್ರಕತೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಶ್ರೀನಿವಾಸ್​ ಚಿಕ್ಕಣ್ಣ ಅವರೇ ನಿಭಾಯಿಸಿದ್ದಾರೆ. ಮನೋಹರ್​ ಜೋಶಿ ಛಾಯಾಗ್ರಹಣ ಹಾಗೂ ಅಕ್ಷಯ್​ ಪಿ. ರಾವ್​ ಸಂಕಲನ ಮಾಡಿದ್ದಾರೆ.

YouTube video player

(ಲಿರಿಕಲ್​ ವಿಡಿಯೋ)

ಸದ್ಯ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಶೀಘ್ರದಲ್ಲೇ ಟ್ರೇಲರ್​ ಬಿಡುಗಡೆ ಮಾಡಲು ‘H/34 ಪಲ್ಲವಿ ಟಾಕೀಸ್​’ ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ಜೂನ್​ ಎರಡನೇ ವಾರದ ವೇಳೆ ಓಟಿಟಿ ಪ್ಲಾಟ್​ಫಾರ್ಮ್​ ಮೂಲಕ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.

ಇದನ್ನೂ ಓದಿ:

ಬಾಲಿವುಡ್​ಗೆ ರಿಮೇಕ್​ ಆಗುತ್ತಿರುವ ಕನ್ನಡದ Act 1978 ಚಿತ್ರ! ಹಿಂದಿಯಲ್ಲಿ ನಾಯಕಿ ಯಾರು?

ಟ್ವಿಟರ್​ನಲ್ಲಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಸ್ಯಾಂಡಲ್​ವುಡ್ ಹೀರೋ ಯಾರು? ಇಲ್ಲಿದೆ ಡಿಟೇಲ್ಸ್​

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us