
ಕೇವಲ ಸ್ಯಾಂಡಲ್ವುಡ್ (Sandalwood) ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ರಾಕಿಂಗ್ ಸ್ಟಾರ್ ಯಶ್ (Yash) ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲದಲ್ಲಿದೆ. ಯಶ್ 19ನೇ ಸಿನಿಮಾದ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಲೇ ಇವೆ. ಯಶ್ 19ನೇ ಚಿತ್ರದ ನಿರ್ದೇಶನ ಯಾರು ಮಾಡುತ್ತಾರೆ, ಸಿನಿಮಾ ಯಾವಾಗ ಶುರುವಾಗಲಿದೆ ಎನ್ನುವ ಬಗ್ಗೆ ಹಲವು ಸುದ್ದಿಗಳು ಹಬ್ಬಿವೆ. ಆದರೆ, ಕೆವಿಎನ್ (KVN) ಪ್ರೊಡಕ್ಷನ್ ಹೌಸ್ ಯಶ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಲಿದೆ ಎಂಬ ಸುದ್ದಿ ಬಹುದಿನಗಳಿಂದ ಹರಿದಾಡುತ್ತಿದೆ. ಇದರ ಜೊತೆಗೆ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಕೂಡ ಇದೆ. ಇದಕ್ಕೀಗ ಮತ್ತಷ್ಟು ಪುಷ್ಠಿ ಸಿಕ್ಕಿದೆ.
ಇಂದು ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ನರ್ತನ್ ಅವರ ಹುಟ್ಟುಹಬ್ಬ. ಇವರ ಜನ್ಮದಿನಕ್ಕೆ ಕೆವಿಎನ್ ಪ್ರೊಡಕ್ಷನ್ ಹೌಸ್ ತಮ್ಮ ಸೋಸಿಯಲ್ ಮೀಡಿಯಾ ಪೇಜ್ನಲ್ಲಿ ನರ್ತನ್ಗೆ ಕೆವಿನ್ ವಿಶ್ ಮಾಡಿದೆ. ಇದರಲ್ಲಿ ನಮ್ಮ ಡೈರೆಕ್ಟರ್ ಎಂದು ಬರೆದಿರುವುದು ಕುತೂಹಲ ಕೆರಳಿಸಿದೆ. ಈ ಮೂಲಕ ಯಶ್ 19 ಬಗ್ಗೆ ಚಿಕ್ಕ ಸುಳಿವು ನೀಡಿರುವ ಕೆವಿಎನ್ ಜನವರಿ 8 ಕ್ಕೆ ಯಶ್ ಹುಟ್ಟುಹಬ್ಬದ ದಿನ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬಿಗ್ ಬಾಸ್ನಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ ನೋಡಿ ಮನೆ ಮಂದಿ ಹೇಳಿದ್ದು ಒಂದೇ ಮಾತು
ಶಿವರಾಜ್ ಕುಮಾರ್ ಹಾಗೂ ಶ್ರೀಮುರಳಿ ನಟನೆಯ ‘ಮಫ್ತಿ’ ಸಿನಿಮಾ ನಿರ್ದೇಶನ ಮಾಡುವ ಮೂಲಕ ನರ್ತನ್ ಅವರು ಸಾಕಷ್ಟು ಗಮನ ಸೆಳೆದರು. ಅವರಿಗೆ ಈ ಚಿತ್ರ ಸಾಕಷ್ಟು ಖ್ಯಾತಿ ನೀಡಿತು. ಈಗ ಅವರು ನಿರ್ದೇಶನ ಮಾಡಲಿರುವ ಮುಂದಿನ ಚಿತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲೂ ಕಾಡುತ್ತಿದೆ. ಯಶ್ 19ನೇ ಚಿತ್ರಕ್ಕೆ ನರ್ತನ್ ಅವರೇ ಡೈರೆಕ್ಷನ್ ಮಾಡುತ್ತಾರಾ ಅಥವಾ ಬೇರೆ ಚಿತ್ರವನ್ನು ಅವರು ಘೋಷಣೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.
ಇತ್ತೀಚೆಗಷ್ಟೆ ಫಿಲ್ಮ್ ಕಂಪಾನಿಯನ್ ತಮ್ಮ 2ನೇ ಆನಿವರ್ಸರಿ ವಿಶೇಷವಾಗಿ ಯಶ್ ಸಂದರ್ಶನ ಮಾಡಿತ್ತು. ರಾಕಿಂಗ್ ಸ್ಟಾರ್: ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾ ಹೆಸರಿನಲ್ಲಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ಯಶ್ ಕೆಲ ವಿಚಾರ ಹಂಚಿಕೊಂಡಿದ್ದಾರೆ. ಕಥೆಯ ಬಗ್ಗೆ ಯಾವುದೇ ವಿಚಾರವನ್ನು ಯಶ್ ಹೇಳಿಲ್ಲ. ಆದರೆ ಸೈನ್ಫಿಕ್ಷನ್ ಅಥವಾ ಆಕ್ಷನ್ ಸಿನಿಮಾ ಮಾಡುವ ಒಲವು ವ್ಯಕ್ತಪಡಿಸಿದ್ದಾರೆ. ಯಶ್ ತಮ್ಮ ಮುಂದಿನ ಚಿತ್ರವನ್ನು ಹಾಲಿವುಡ್ ಸಿನಿಮಾಗಳ ರೇಂಜ್ನಲ್ಲಿ ತೆರೆಗೆ ತರುವ ಮನಸ್ಸು ಮಾಡಿರುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದಾರಂತೆ. ಕನ್ನಡದಲ್ಲೇ ಈ ಸಿನಿಮಾ ಮೂಡಿ ಬರುತ್ತದೆ ಎನ್ನುವ ಸುಳಿವು ಕೊಟ್ಟಿದ್ದಾರೆ. ಯಶ್ ಕೆಲ ದಿನಗಳ ಹಿಂದೆ ಹಾಲಿವುಡ್ ನಟ, ನಿರ್ದೇಶಕ ಜೆಜೆ ಪೆರ್ರಿ ಅವರನ್ನು ಭೇಟಿ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:55 am, Fri, 30 December 22