ಬಿಗ್ ಬಾಸ್​ನಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ ನೋಡಿ ಮನೆ ಮಂದಿ ಹೇಳಿದ್ದು ಒಂದೇ ಮಾತು

ಬಿಗ್ ಬಾಸ್ ಫಿನಾಲೆ ವೀಕ್​​ನಲ್ಲಿ ಒಂದು ಕೋರಿಕೆಯನ್ನು ಈಡೇರಿಸುವುದಾಗಿ ಮನೆ ಮಂದಿಗೆ ಹೇಳಿದ್ದರು. ಈ ವೇಳೆ ದಿವ್ಯಾ ಅವರು ಅರವಿಂದ್ ಕೆಪಿ ಮನೆ ಒಳಗೆ ಬರಲಿ ಎಂದು ಕೋರಿದ್ದರು. ದಿವ್ಯಾ ಕೋರಿಕೆಯಂತೆ ಅರವಿಂದ್ ಮನೆ ಒಳಗೆ ಬಂದರು.

ಬಿಗ್ ಬಾಸ್​ನಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ ನೋಡಿ ಮನೆ ಮಂದಿ ಹೇಳಿದ್ದು ಒಂದೇ ಮಾತು
ದಿವ್ಯಾ-ಅರವಿಂದ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 29, 2022 | 2:39 PM

‘ಬಿಗ್ ಬಾಸ್​ ಕನ್ನಡ ಸೀಸನ್​ 9’ರ (BBK 9) ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಕಪ್ ಗೆಲ್ಲೋದು ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಎಂದಿನಂತೆ ಕಿಚ್ಚ ಸುದೀಪ್ (Kichcha Sudeep) ಅವರು ಬಿಗ್ ಬಾಸ್ ಫಿನಾಲೆ ಎಪಿಸೋಡ್​ ನಡೆಸಿಕೊಡಲಿದ್ದಾರೆ. ಬಿಗ್ ಬಾಸ್ ಫಿನಾಲೆ ವಾರದಲ್ಲಿ ಸ್ಪರ್ಧಿಗಳಿಗೆ ಒಂದಷ್ಟು ಸರ್​ಪ್ರೈಸ್ ನೀಡಲಾಗುತ್ತಿದೆ. ದಿವ್ಯಾ ಉರುಡುಗ ಅವರ ಕೋರಿಕೆಯಂತೆ ಈ ಬಾರಿ ಅರವಿಂದ್ ಕೆಪಿ ಅವರನ್ನು ದೊಡ್ಮನೆ ಒಳಗೆ ಕಳುಹಿಸಲಾಯಿತು. ಈ ಜೋಡಿಯನ್ನು ನೋಡಿ ಮನೆ ಮಂದಿ ಸಖತ್ ಖುಷಿಪಟ್ಟರು.

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ‘ಕನ್ನಡ ಬಿಗ್ ಬಾಸ್​ ಸೀಸನ್​ 8’ರಲ್ಲಿ ಮೊದಲ ಬಾರಿಗೆ ಭೇಟಿ ಆದರು. ಇವರ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಫ್ರೆಂಡ್​ಶಿಪ್ ಬಳಿಕ ಪ್ರೀತಿಗೆ ತಿರುಗಿದೆ. ಇದನ್ನು ಈ ಜೋಡಿ ಒಪ್ಪಿಕೊಂಡಿಲ್ಲ. ಆದರೆ, ಪರೋಕ್ಷವಾಗಿ ಪ್ರೀತಿ ವಿಚಾರವನ್ನು ಇವರು ಹೇಳುತ್ತಲೇ ಇರುತ್ತಾರೆ. ಈ ಬಾರಿ ದಿವ್ಯಾ ಅವರು ಅರವಿಂದ್ ಇಲ್ಲದೆ ಬಿಗ್ ಬಾಸ್​ಗೆ ಬಂದಿದ್ದರು. ಆರಂಭದಲ್ಲಿ ಡಲ್ ಇದ್ದ ಅವರು ನಂತರ ತಮ್ಮ ನಿಜವಾದ ಆಟ ತೋರಿಸಿದರು.

ಬಿಗ್ ಬಾಸ್ ಫಿನಾಲೆ ವೀಕ್​​ನಲ್ಲಿ ಒಂದು ಕೋರಿಕೆಯನ್ನು ಈಡೇರಿಸುವುದಾಗಿ ಮನೆ ಮಂದಿಗೆ ಹೇಳಿದ್ದರು. ಈ ವೇಳೆ ದಿವ್ಯಾ ಅವರು ಅರವಿಂದ್ ಕೆಪಿ ಮನೆ ಒಳಗೆ ಬರಲಿ ಎಂದು ಕೋರಿದ್ದರು. ದಿವ್ಯಾ ಕೋರಿಕೆಯಂತೆ ಅರವಿಂದ್ ಮನೆ ಒಳಗೆ ಬಂದರು. ಎಲ್ಲರ ಜತೆ ಸಂತೋಷದ ಕ್ಷಣವನ್ನು ಕಳೆದು ಹೋದರು.

ಇದನ್ನೂ ಓದಿ
Image
ಅರವಿಂದ್ ಬಳಿಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ವಾಸುಕಿ ವೈಭವ್​; ಸ್ಪರ್ಧಿಗಳಿಗೆ ಸಿಕ್ಕಾಪಟ್ಟೆ ಸರ್​ಪ್ರೈಸ್​
Image
ದಿವ್ಯಾ ಉರುಡುಗಗೆ ಕಣ್ಣೀರು ಹಾಕಿಸಿದ್ದ ರೂಪೇಶ್ ರಾಜಣ್ಣ; ದೊಡ್ಮನೆಯಲ್ಲಿ ಟಾಂಗ್ ಕೊಟ್ಟ ಅರವಿಂದ್ ಕೆಪಿ
Image
Divya Uruduga: ದಿವ್ಯಾ ಉರುಡುಗ ಸಲುವಾಗಿ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಅರವಿಂದ್ ಕೆಪಿ

ಇದನ್ನೂ ಓದಿ: Divya Uruduga: ದಿವ್ಯಾ ಉರುಡುಗ ಸಲುವಾಗಿ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಅರವಿಂದ್ ಕೆಪಿ

ಅರವಿಂದ್ ಕೆಪಿ ಬಂದು ಹೋದ ನಂತರದಲ್ಲಿ ದಿವ್ಯಾ ಅವರಲ್ಲಿ ಉತ್ಸಾಹ ಕಂಡುಬಂತು. ‘ನೀವು ಬೆಸ್ಟ್ ಕಪಲ್’ ಎಂದು ಒಂದೇ ಮಾತಲ್ಲಿ ಈ ಜೋಡಿ ಬಗ್ಗೆ ದೀಪಿಕಾ ದಾಸ್ ಮೆಚ್ಚುಗೆ ಸೂಚಿಸಿದರು. ರೂಪೇಶ್ ಶೆಟ್ಟಿ ಕೂಡ ಅರವಿಂದ್​ನ ಭೇಟಿ ಮಾಡಿ ಖುಷಿ ಆದರು. ‘ಅರವಿಂದ್ ತುಂಬಾ ಗಂಭೀರವಾಗಿ ಇರುತ್ತಾರೆ ಎಂದುಕೊಂಡಿದ್ದೆ. ಆದರೆ, ಅವರು ಇಷ್ಟು ಫನ್ನಿಯಾಗಿ ಇರುತ್ತಾರೆ ಎಂದು ಗೊತ್ತಿರಲಿಲ್ಲ. ನನ್ನನ್ನೇ ನೋಡಿದಂತೆ ಆಯ್ತು’ ಎಂದು ರೂಪೇಶ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ