AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರವಿಂದ್ ಬಳಿಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ವಾಸುಕಿ ವೈಭವ್​; ಸ್ಪರ್ಧಿಗಳಿಗೆ ಸಿಕ್ಕಾಪಟ್ಟೆ ಸರ್​ಪ್ರೈಸ್​

Vasuki Vaibhav: ವಾಸುಕಿ ವೈಭವ್, ದೀಪಿಕಾ ದಾಸ್​ ಸೀಸನ್ 7ರಲ್ಲಿ ಸ್ಪರ್ಧಿಗಳಾಗಿದ್ದರು. ಹೀಗಾಗಿ, ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಕಾರಣಕ್ಕೆ ದೀಪಿಕಾ ದಾಸ್ ಅವರು ಬಿಗ್ ಬಾಸ್ ಬಳಿ ವಾಸುಕಿ ವೈಭವ್​, ಶೈನ್ ಶೆಟ್ಟಿ ಮೊದಲಾದವರನ್ನು ಮನೆ ಒಳಗೆ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದರು.

ಅರವಿಂದ್ ಬಳಿಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ವಾಸುಕಿ ವೈಭವ್​; ಸ್ಪರ್ಧಿಗಳಿಗೆ ಸಿಕ್ಕಾಪಟ್ಟೆ ಸರ್​ಪ್ರೈಸ್​
ವಾಸುಕಿ-ದೀಪಿಕಾ
TV9 Web
| Edited By: |

Updated on:Dec 29, 2022 | 10:44 AM

Share

‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ಫಿನಾಲೆ ಹಂತ ತಲುಪಿದೆ. ಶುಕ್ರವಾರ (ಡಿಸೆಂಬರ್ 30) ಹಾಗೂ ಶನಿವಾರ (ಡಿಸೆಂಬರ್ 31) ಫಿನಾಲೆ ನಡೆಯಲಿದೆ. ಮನೆಯಲ್ಲಿ ರೂಪೇಶ್ ರಾಜಣ್ಣ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಕೊನೆಯ ವಾರದಲ್ಲಿ ಮನೆ ಮಂದಿಗೆ ದೊಡ್ಡ ದೊಡ್ಡ ಸರ್​ಪ್ರೈಸ್ ಸಿಗುತ್ತಿದೆ. ದಿವ್ಯಾ ಉರುಡುಗ (Divya Uruduga) ಕೋರಿಕೆಯಂತೆ ಅರವಿಂದ್ ಕೆಪಿ ಅವರು ದೊಡ್ಮನೆಗೆ ಕಾಲಿಟ್ಟು ಸರ್​ಪ್ರೈಸ್ ನೀಡಿದ್ದರು. ಈಗ ವಾಸುಕಿ ವೈಭವ್ ಸರದಿ. ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ವಾಸುಕಿ ವೈಭವ್, ದೀಪಿಕಾ ದಾಸ್​ ಸೀಸನ್ 7ರಲ್ಲಿ ಸ್ಪರ್ಧಿಗಳಾಗಿದ್ದರು. ಹೀಗಾಗಿ, ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಕಾರಣಕ್ಕೆ ದೀಪಿಕಾ ದಾಸ್ ಅವರು ಬಿಗ್ ಬಾಸ್ ಬಳಿ ವಾಸುಕಿ ವೈಭವ್​, ಶೈನ್ ಶೆಟ್ಟಿ ಮೊದಲಾದವರನ್ನು ಮನೆ ಒಳಗೆ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆ ಈಡೇರಿದೆ. ದೀಪಿಕಾ ದಾಸ್ ಅವರು ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.

ಇದನ್ನೂ ಓದಿ
Image
Aryavardhan Guruji: ಫಿನಾಲೆಗೆ 3 ದಿನ ಇರುವಾಗ ಆರ್ಯವರ್ಧನ್​ ಗುರೂಜಿ ಔಟ್​; ಅಪ್ಪಾಜಿ ಅಂತ ಕಣ್ಣೀರು ಹಾಕಿದ ರೂಪೇಶ್​ ಶೆಟ್ಟಿ
Image
BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ
Image
Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
Image
Aryavardhan Guruji: ಕನ್ನಡ ಓದಲು ಕಷ್ಟಪಟ್ಟ ಗುರೂಜಿ; ಸಹಾಯ ಮಾಡಿದ ರಾಕೇಶ್​: ಇಲ್ಲಿದೆ ವಿಡಿಯೋ

ವಾಸುಕಿ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿ, ಗಾಯಕರಾಗಿ, ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಅವರು ಬಿಡುವು ಮಾಡಿಕೊಂಡು ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟಿದ್ದಾರೆ. ಅವರು ಸೈಲೆಂಟ್ ಆಗಿ ಬಿಗ್ ಬಾಸ್ ಮನೆ ಒಳಗೆ ಸೇರಿದ್ದರು. ಇದನ್ನು ಮನೆ ಮಂದಿ ಕಂಡು ಹಿಡಿದಿದ್ದಾರೆ. ವಾಸುಕಿಯನ್ನು ಕಾಣುತ್ತಿದ್ದಂತೆ ಅವರನ್ನು ಅಪ್ಪಿ ಸಂಭ್ರಮಿಸಿದ್ದಾರೆ ದೀಪಿಕಾ ದಾಸ್.

ಇದನ್ನೂ ಓದಿ: ದಿವ್ಯಾ ಉರುಡುಗಗೆ ಕಣ್ಣೀರು ಹಾಕಿಸಿದ್ದ ರೂಪೇಶ್ ರಾಜಣ್ಣ; ದೊಡ್ಮನೆಯಲ್ಲಿ ಟಾಂಗ್ ಕೊಟ್ಟ ಅರವಿಂದ್ ಕೆಪಿ

ದೊಡ್ಮನೆಯಲ್ಲಿ ಹಲವು ಸರ್​ಪ್ರೈಸ್

ರೂಪೇಶ್ ಶೆಟ್ಟಿ ಹುಲಿವೇಶದವರು ಬರಲಿ ಎಂದು ಕೋರಿಕೊಂಡಿದ್ದರು. ಅದು ಆಗಿದೆ. ದಿವ್ಯಾ ಕೋರಿಕೆ ಮೇಲೆ ಅರವಿಂದ್ ಕೆಪಿ ಆಗಮಿಸಿದ್ದರು. ರಾಕೇಶ್ ಅಡಿಗ ಅವರು ಕಾವ್ಯಶ್ರೀ ಗೌಡ, ಅನುಪಮಾ ಗೌಡ ಹಾಗೂ ಅಮೂಲ್ಯ ಗೌಡ ಬರಲಿ ಎಂದು ಕೋರಿಕೊಂಡಿದ್ದರು. ಅವರು ಬಂದು ಮನೆ ಮಂದಿಯ ಜತೆ ಡಿನ್ನರ್ ಮಾಡಿ ಹೋಗಿದ್ದಾರೆ. ಈಗ ದೀಪಿಕಾ ದಾಸ್ ಆಸೆ ಕೂಡ ಈಡೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:53 am, Thu, 29 December 22

3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್