Tunisha Sharma: ತುನಿಶಾ ಶರ್ಮಾ ಸಾಯುವುದಕ್ಕೂ ಕೆಲವೇ ನಿಮಿಷಗಳ ಮುನ್ನ ಶೀಜಾನ್​ ಖಾನ್​ ಜತೆ ನಡೆದಿತ್ತು ಮಾತುಕತೆ

Sheezan Khan | Tunisha Sharma Case: ತುನಿಶಾ ಶರ್ಮಾ ಅವರ ಪ್ರಕರಣದ ತನಿಖೆ ಚುರುಕುಗೊಂಡಿದೆ. ಆದರೆ ವಿಚಾರಣೆಗೆ ಶೀಜಾನ್​ ಖಾನ್​ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವರದಿ ಆಗಿದೆ.

Tunisha Sharma: ತುನಿಶಾ ಶರ್ಮಾ ಸಾಯುವುದಕ್ಕೂ ಕೆಲವೇ ನಿಮಿಷಗಳ ಮುನ್ನ ಶೀಜಾನ್​ ಖಾನ್​ ಜತೆ ನಡೆದಿತ್ತು ಮಾತುಕತೆ
ತುನಿಶಾ ಶರ್ಮಾ, ಶೀಜಾನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on:Dec 29, 2022 | 1:56 PM

ಸೀರಿಯಲ್​ ನಟಿ ತುನಿಶಾ ಶರ್ಮಾ ಅವರ ನಿಧನದ (Tunisha Sharma Death) ಬಳಿಕ ಅವರ ಮಾಜಿ ಪ್ರಿಯಕರ ಶೀಜಾನ್​ ಖಾನ್​ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ತುನಿಶಾ ಶರ್ಮಾ ಅವರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಸೆಂಬರ್​ 30ರ ತನಕ ಪೊಲೀಸ್​ ಕಸ್ಟಡಿಗೆ ಅವರನ್ನು ಒಪ್ಪಿಸಲಾಗಿದೆ. ಹೈ ಪ್ರೊಫೈಲ್​ ಕೇಸ್​ ಆದ್ದರಿಂದ ತನಿಖೆ ಚುರುಕಾಗಿದ್ದು, ಹಲವು ವಿವರಗಳು ಹೊರಬರುತ್ತಿವೆ. ಅಚ್ಚರಿ ಏನೆಂದರೆ ತುನಿಶಾ ಶರ್ಮಾ (Tunisha Sharma) ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕೆಲವೇ ನಿಮಿಷಗಳ ಮುಂಚೆ ಶೀಜಾನ್​ ಖಾನ್​ (Sheezan Khan) ಜೊತೆ ಮಾತನಾಡಿದ್ದರು ಎಂಬುದು ಈಗ ತಿಳಿದುಬಂದಿದೆ.

ಡಿ.24ರಂದು ‘ಅಲಿಬಾಬಾ’ ಧಾರಾವಾಹಿಯ ಚಿತ್ರೀಕರಣದ ಸ್ಟುಡಿಯೋದಲ್ಲಿ ತುನಿಶಾ ಶರ್ಮಾ ನೇಣಿಗೆ ಶರಣಾದರು. ಅದಕ್ಕೂ ಕೇವಲ 15 ದಿನ ಮುಂಚೆ ಅವರ ಜೊತೆ ಶೀಜಾನ್​ ಖಾನ್​ ಬ್ರೇಕಪ್​ ಮಾಡಿಕೊಂಡಿದ್ದರು. ಆದರೂ ನೇಣು ಬಿಗಿದುಕೊಳ್ಳುವ ಕೆಲವೇ ನಿಮಿಷಗಳ ಮುನ್ನ ಶೀಜಾನ್​ ಖಾನ್​ ಜೊತೆ ತುನಿಶಾ ಶರ್ಮಾ ಮಾತುಕತೆ ನಡೆಸಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಅವರಿಬ್ಬರ ನಡುವೆ ಯಾವ ವಿಚಾರ ಚರ್ಚೆ ಆಯಿತು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಶೀಜಾನ್​ ಖಾನ್​ ಅವರು ಪದೇಪದೇ ತಮ್ಮ ಹೇಳಿಕೆ ಬದಲಿಸುತ್ತಿದ್ದರು ಎಂಬ ಮಾಹಿತಿ ಕೇಳಿಬಂದಿದೆ. ಅವರಿಗೆ ಮತ್ತೋರ್ವ ಹುಡುಗಿ ಜೊತೆ ಆಪ್ತತೆ ಬೆಳೆದಿತ್ತು. ಆ ಯುವತಿಗೆ ಕಳಿಸಿದ್ದ ವಾಟ್ಸಪ್​ ಮೆಸೇಜ್​ಗಳನ್ನು ಡಿಲೀಟ್​ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ವಿಚಾರಣೆಗೆ ಶೀಜಾನ್​ ಖಾನ್​ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೂಡ ವರದಿ ಆಗಿದೆ.

ಇದನ್ನೂ ಓದಿ
Image
Tunisha Sharma Funeral: ತುನಿಶಾ ಶರ್ಮಾ ಅಂತ್ಯಕ್ರಿಯೆ: ಅಗಲಿದ ನಟಿಗೆ ಅಂತಿಮ ನಮನ ಸಲ್ಲಿಸಿದ ಕಿರುತೆರೆ ಸೆಲೆಬ್ರಿಟಿಗಳು
Image
Tunisha Sharma: ಶ್ರದ್ಧಾ ವಾಕರ್​ ಕೊಲೆ ಕೇಸ್​ ಪ್ರಭಾವದಿಂದ ತುನಿಶಾ ಶರ್ಮಾ, ಶೀಜಾನ್​ ಖಾನ್​ ನಡುವೆ ನಡೆದಿತ್ತು ಬ್ರೇಕಪ್​
Image
Tunisha Sharma: ಬ್ರೇಕಪ್​ ಆಗಿ 15 ದಿನಕ್ಕೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ; ಪ್ರಿಯಕರ ಶೀಜಾನ್​ ಖಾನ್​ ಬಂಧನ
Image
Tunisha Sharma’s Death: ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಲವ್​​ ಜಿಹಾದ್​​ ಕಾರಣವೇ ಎಂಬುದು ತನಿಖೆಯಾಗಬೇಕು: ಬಿಜೆಪಿ ಶಾಸಕ

ಇದನ್ನೂ ಓದಿ: Tunisha Sharma: ಶ್ರದ್ಧಾ ವಾಕರ್​ ಕೊಲೆ ಕೇಸ್​ ಪ್ರಭಾವದಿಂದ ತುನಿಶಾ ಶರ್ಮಾ, ಶೀಜಾನ್​ ಖಾನ್​ ನಡುವೆ ನಡೆದಿತ್ತು ಬ್ರೇಕಪ್​

‘ಅಲಿಬಾಬಾ’ ಧಾರಾವಾಹಿಯಲ್ಲಿ ತುನಿಶಾ ಶರ್ಮಾ ಮತ್ತು ಶೀಜಾನ್​ ಖಾನ್​ ಅವರು ಒಟ್ಟಾಗಿ ನಟಿಸುತ್ತಿದ್ದರು. ಆ ಕಾರಣದಿಂದ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ನಂತರ ಅದು ಪ್ರೀತಿಗೆ ತಿರುಗಿತ್ತು. ಬೇರೆ ಬೇರೆ ಧರ್ಮಕ್ಕೆ ಸೇರಿದ ಇವರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ‘ಶೀಜಾನ್​ ಖಾನ್​ ಜೊತೆ ಪ್ರೀತಿ ಚಿಗುರಿದ ಬಳಿಕ ತುನಿಶಾ ಶರ್ಮಾ ಅವರು ಹಿಜಾಬ್​ ಧರಿಸಲು ಆರಂಭಿಸಿದ್ದರು’ ಎಂದು ನಟಿಯ ಸಂಬಂಧಿಯೊಬ್ಬರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Tunisha Sharma: ಪಂಚಭೂತಗಳಲ್ಲಿ ಲೀನವಾದ ತುನಿಶಾ ಶರ್ಮಾ; ಇಲ್ಲಿದೆ ಅಂತ್ಯಕ್ರಿಯೆಯ ಫೋಟೋ ಗ್ಯಾಲರಿ..

ತುನಿಶಾ ಶರ್ಮಾ ಸಾವಿಗೆ ನ್ಯಾಯ ಸಿಗಬೇಕು ಎಂದು ಕುಟುಂಬದವರು ಮತ್ತು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ನಡುವೆ ಕೆಲವರು ಶೀಜಾನ್​ ಖಾನ್​ ಪರವಾಗಿಯೂ ವಾದ ಮಂಡಿಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ತುನಿಶಾ ಶರ್ಮಾ ಅವರ ಆತ್ಮಹತ್ಯೆಗೆ ನಿಜವಾದ ಕಾರಣ ಏನೆಂಬುದು ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:56 pm, Thu, 29 December 22

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ