
ಯಶ್ (Yash) ನಟನೆಯ ‘ಕೆಜಿಎಫ್ 2’ (KGF Chapter 2) ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ತೊಡಗೊಸಿಕೊಂಡಿದೆ. ಪ್ರಸ್ತುತ ಮುಂಬೈನಲ್ಲಿರುವ ಚಿತ್ರತಂಡ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದೆ. ಈ ನಡುವೆ ಚಿತ್ರದ ರಿಲೀಸ್ ಬಗ್ಗೆ ಪ್ರತಿದಿನವೂ ಹೊಸ ಅಪ್ಡೇಟ್ಗಳನ್ನು ಘೋಷಿಸಲಾಗುತ್ತಿದೆ. ಇದುವರೆಗೆ ವಿದೇಶಗಳಲ್ಲಿ ಚಿತ್ರ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳುತ್ತಿತ್ತು. ಬ್ರಿಟನ್ನಲ್ಲಿ ದಾಖಲೆಯ ಮಟ್ಟದಲ್ಲಿ ಟಿಕೆಟ್ ಕೂಡ ಮಾರಾಟವಾಗಿತ್ತು. ಇದೀಗ ಭಾರತದ ಹಲವು ಭಾಗಗಳಲ್ಲಿ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ‘ಕೆಜಿಎಫ್ 2’ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ (Hombale Films) ಟ್ವಿಟರ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದಲ್ಲಿ ನಾಳೆಯಿಂದ ಅಂದರೆ ಏಪ್ರಿಲ್ 7ರಿಂದ ಅಡ್ವಾನ್ಸ್ ಬುಕ್ಕಿಂಗ್ ಆರಂಭಿಸಲಾಗುವುದು ಎಂದು ಘೋಷಿಸಿದೆ.
ಬುಕ್ಮೈಶೋ ಹಾಗೂ ಪೇಟಿಎಂ ಮೂಲಕ ನಾಳೆಯಿಂದ (ಏ.7) ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದಲ್ಲಿ ಟಿಕೆಟ್ಗಳು ಅಡ್ವಾನ್ಸ್ ಬುಕ್ಕಿಂಗ್ಗೆ ಲಭ್ಯವಿರುತ್ತವೆ’ ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಟ್ವೀಟ್ನಲ್ಲಿ ತಿಳಿಸಿದೆ.
ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಇಲ್ಲಿದೆ:
ಕರ್ನಾಟಕದಲ್ಲಿ ರಿಲೀಸ್ ಯಾವಾಗ? ಫ್ಯಾನ್ಸ್ ಪ್ರಶ್ನೆ:
‘ಕೆಜಿಎಫ್ 2’ ಚಿತ್ರತಂಡ ಇದುವರೆಗೆ ಬಹುತೇಕ ಎಲ್ಲೆಡೆ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವನ್ನು ಘೋಷಿಸಿದೆ. ಆದರೆ ಇನ್ನೂ ಕರ್ನಾಟಕದ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ. ಅಭಿಮಾನಿಗಳು ಈ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದ್ದಾರೆ. ‘‘ದೀರ್ಘಕಾಲದಿಂದ ಕಾಯುತ್ತಿದ್ದೇವೆ, ಆದಷ್ಟು ಬೇಗ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಮಾಡಿ’’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೋರಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಕರ್ನಾಟಕದಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭದ ಬಗ್ಗೆ ಚಿತ್ರತಂಡ ಸದ್ಯದಲ್ಲೇ ಮಾಹಿತಿ ನೀಡುವ ನಿರೀಕ್ಷೆಗಳಿವೆ.
‘ಕೆಜಿಎಫ್ 2’ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಅಧೀರನಾಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ರವೀನಾ ಟಂಡನ್ ಹಲವು ವರ್ಷಗಳ ಬಳಿಕ ಸ್ಯಾಂಡಲ್ವುಡ್ಗೆ ಮರಳುತ್ತಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್ ಚಿತ್ರದಲ್ಲಿ ನಟಿಸಿದ್ದಾರೆ. ಯಶ್ಗೆ ಜತೆಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದು, ಭುವನ್ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಏಪ್ರಿಲ್ 14ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ.
ಇದನ್ನೂ ಓದಿ: ಗ್ರೀಸ್ನಲ್ಲಿ ತೆರೆಕಾಣಲಿರುವ ಮೊದಲ ದಕ್ಷಿಣ ಭಾರತೀಯ ಚಿತ್ರ ಕೆಜಿಎಫ್ 2; ರಿಲೀಸ್ಗೂ ಮುನ್ನ ಹಲವು ದಾಖಲೆ ಬರೆದ ಯಶ್ ಚಿತ್ರ
Gagana Nee: ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಹೊಸ ಹಾಡು ‘ಗಗನ ನೀ..’ ರಿಲೀಸ್
Published On - 4:27 pm, Wed, 6 April 22