ತಮ್ಮನ್ನು ಬೆಂಬಲಿಸದವರನ್ನು ಅಮೆರಿಕದಲ್ಲೂ ನೆನಪಿಸಿಕೊಂಡ ಯಶ್

ರಾಕಿಂಗ್ ಸ್ಟಾರ್ ಯಶ್ ತಮ್ಮ ‘ಟಾಕ್ಸಿಕ್’ ಚಿತ್ರದೊಂದಿಗೆ ಅಮೆರಿಕದ ‘ಸಿನಿಮಾಕಾನ್ 2026’ರಲ್ಲಿ ಮಿಂಚಿದ್ದಾರೆ. ಜೂನ್ 4ಕ್ಕೆ ತೆರೆಗೆ ಬರುವ ‘ಟಾಕ್ಸಿಕ್’ ಮೂಲಕ ಭಾರತೀಯ ಚಿತ್ರರಂಗವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯನ್ನು ಯಶ್ ವ್ಯಕ್ತಪಡಿಸಿದ್ದಾರೆ. ಯಶಸ್ಸು ಕೇವಲ ಆಚರಣೆಗಲ್ಲ, ಉತ್ತಮವಾಗಿ ಕೆಲಸ ಮಾಡುವ ಜವಾಬ್ದಾರಿ ಎಂದು ಯಶ್ ವಿವರಿಸಿದ್ದಾರೆ.

ತಮ್ಮನ್ನು ಬೆಂಬಲಿಸದವರನ್ನು ಅಮೆರಿಕದಲ್ಲೂ ನೆನಪಿಸಿಕೊಂಡ ಯಶ್
ಯಶ್

Updated on: Apr 16, 2026 | 7:41 AM

ರಾಕಿಂಗ್ ಸ್ಟಾರ್ ಯಶ್ ಅವರ (Yash) ‘ಟಾಕ್ಸಿಕ್’ ಸಿನಿಮಾ ಕನ್ನಡದ ಜೊತೆಗೆ ಇಂಗ್ಲಿಷ್​​ನಲ್ಲೂ ಶೂಟ್​ ಆಗಿದೆ. ಈ ಸಿನಿಮಾ ಜೂನ್ 4ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಇದರ ಜೊತೆಗೆ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲೂ ಯಶ್ ನಟಿಸಿದ್ದಾರೆ. ಈಗ ಯಶ್ ಅವರು ಅಮೆರಿಕದ ಲಾಸ್ ಎಂಜಲೀಸ್​​ಗೆ ತೆರಳಿದ್ದಾರೆ. ಅಲ್ಲಿ ನಡೆದ ‘ಸಿನಿಮಾಕಾನ್ 2026’ರಲ್ಲಿ ಪಾಲ್ಗೊಂಡು ತಮ್ಮ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

ಇಂಗ್ಲಿಷ್ ರಿಪೋರ್ಟರ್ ಒಬ್ಬರು ಯಶ್ ಬಳಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ‘ಟಾಕ್ಸಿಕ್’ ಟೀಸರ್ ಹೊಗಳಿದ್ದಾರೆ. ವಿಶ್ಯುವಲ್ಸ್​ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ನಮಗೆ ಇಲ್ಲಿ ಟಾಕ್ಸಿಕ್ ಸಿನಿಮಾದ ರೀತಿಯ ವಿಶ್ಯುವಲ್ಸ್ ಏಕೆ ಕಾಣಲ್ಲ’ ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಂಡಿದ್ದಾಗಿ ರಿಪೋರ್ಟರ್ ಹೇಳಿದ್ದಾರೆ. ಜೊತೆಗೆ ಸಿನಿಮಾ ಮಾಡುವಾಗ, ಆ್ಯಕ್ಷನ್ ಮಾಡುವಾಗ ಸಾಕಷ್ಟು ಫನ್ ಮಾಡಿದ್ದೀರಿ ಎನಿಸುತ್ತದೆ ಅಲ್ಲವೇ ಎಂದು ಯಶ್​​ಗೆ ಕೇಳಲಾಗಿದೆ.

‘ಟಾಕ್ಸಿಕ್ ತುಂಬಾನೇ ಮಹತ್ವಾಕಾಂಕ್ಷೆಯ ಸಿನಿಮಾ. ಜನರು ನನಗೆ ಯಶಸ್ಸು ಕೊಟ್ಟಿದ್ದು ಸೆಲೆಬ್ರೇಟ್ ಮಾಡಲಾಗಲಿ ಅಥವಾ ಫನ್ ಮಾಡೋದಕ್ಕಾಗಲಿ ಅಲ್ಲ. ಪ್ರತಿ ಬಾರಿ ದೊಡ್ಡ ಯಶಸ್ಸು ಸಿಕ್ಕಾಗ ಇನ್ನೂ ಉತ್ತಮವಾಗಿ ಮಾಡುವ ಜವಾಬ್ದಾರಿ ನನ್ನ ಮೇಲೆ ಇದೆ ಎಂದು ನನಗೆ ಸದಾ ಅನಿಸುತ್ತದೆ’ ಎಂದಿದ್ದಾರೆ ಯಶ್.

ಅಮೆರಿಕದಲ್ಲೂ ಯಶ್ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ‘ಭಾರತದಲ್ಲಿ ನನ್ನನ್ನು ಜನರು ಸಾಕಷ್ಟು ಬೆಂಬಲಿಸಿದ್ದಾರೆ. ಭಾರತದ ಕಥೆ ಹಾಗೂ ಭಾರತ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದು ನನ್ನ ಉದ್ದೇಶ’ ಎಂದು ಯಶ್ ಹೇಳಿದ್ದಾರೆ. ಅವರ ಹೇಳಿಕೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ.

ಇದನ್ನೂ ಓದಿ: ನೀವಂದುಕೊಂಡಂತಿಲ್ಲ ‘ಟಾಕ್ಸಿಕ್’, ಕಾಣುವುದೇ ಒಂದು, ಇರುವುದೇ ಒಂದು ಎಂದ ಯಶ್

ಯಶ್ ಅವರು ಸಾಮಾನ್ಯ ಕುಟುಂಬದಿಂದ ಬಂದವರು. ಈಗ ಭಾರತ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕನಸು ಕಂಡು, ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us