
ಯುವ ರಾಜ್ಕುಮಾರ್ ಹಾಗೂ ಶ್ರೀದೇವಿ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಇಬ್ಬರೂ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಶ್ರೀದೇವಿ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಶ್ರೀದೇವಿ ಅವರಿಗೆ ಯುವ ಬಗ್ಗೆ ಪ್ರಶ್ನೆ ಬಂದಿದೆ. ಇದಕ್ಕೆ ಅವರು ರಾಜ್ಕುಮಾರ್ ಹಾಡಿನ ಮೂಲಕ ಉತ್ತರ ನೀಡಿದ್ದಾರೆ. ನಟಿಯ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರಿಸಿದ್ದಾರೆ.
ಯುವ ಹಾಗೂ ಶ್ರೀದೇವಿ ಪ್ರೀತಿಸಿ ಮದುವೆ ಆದವರು. ಕೆಲವೇ ವರ್ಷ ಸಂಸಾರ ನಡೆಸಿ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದರು. ಇಬ್ಬರ ಮಧ್ಯೆ ಸಾಕಷ್ಟು ವೈಮನಸ್ಸು ಮೂಡಿದ್ದರಿಂದ ಇವರು ಬೇರೆ ಆಗುತ್ತಿದ್ದಾರೆ. ಈ ಪ್ರಕರಣ ಕೋರ್ಟ್ನಲ್ಲಿದೆ. ಹೀಗಿರುವಾಗಲೇ ಯುವ ಅವರ ಬಗ್ಗೆ ಶ್ರೀದೇವಿ ಬಳಿ ಕೇಳಲಾಗಿದೆ. ಇದಕ್ಕೆ ಶ್ರೀದೇವಿ ಮುಚ್ಚುಮರೆ ಇಲ್ಲದೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಯುವ ರಾಜ್ಕುಮಾರ್ ವಿಚ್ಛೇದನ: ಕೋರ್ಟ್ ಮೆಟ್ಟಿಲೇರಿದ ರಾಜ್ಕುಮಾರ್ ಕುಟುಂಬದ ಕುಡಿ; ಕಾರಣವೇನು?
ಶ್ರೀದೇವಿ ಅವರು ಇನ್ಸ್ಟಾಗ್ರಾಮ್ನಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸಿದರು. ಈ ವೇಳೆ ‘ಯುವರಾಜ್ಕುಮಾರ್ ಬಗ್ಗೆ ಏನು ಹೇಳ್ತೀರಾ’ ಎಂದು ಕೇಳಲಾಯಿತು. ಈ ಪ್ರಶ್ನೆಯನ್ನು ಪೋಸ್ಟ್ ಮಾಡಿ, ‘ಬಾನಿಗೊಂದು ಎಲ್ಲೆ ಎಲ್ಲಿದೆ’ ಹಾಡನ್ನು ಹಾಕಿದ್ದಾರೆ ಶ್ರೀದೇವಿ. ಈ ಪೋಸ್ಟ್ ಗಮನ ಸೆಳೆದಿದೆ. ಯುವ ಹಾಗೂ ಆ ನಟಿಯ ಬಗ್ಗೆ ಏನು ಹೇಳ್ತೀರಾ ಎಂದು ಕೇಳಿದ್ದಕ್ಕೆ, ‘ಮೋಸ ಮಾಡೋದು ಆಯ್ಕೆ, ತಪ್ಪಾಗಿ ಪಡೆಯೋದಲ್ಲ’ ಎಂಬರ್ಥದಲ್ಲಿ ಉತ್ತರಿಸಿದ್ದಾರೆ. ಈ ಪೋಸ್ಟ್ನಲ್ಲಿ ನಟಿಯ ಹೆಸರನ್ನು ಬ್ಲರ್ ಮಾಡಿದ್ದಾರೆ.
#Yuvarajkumar ex wife sridevibyrappa insta story about him 😹😹😹😹😹😹 pic.twitter.com/M9iBLSJ1JM
— Raghav D (@Raghav_Dacchu) December 17, 2025
Hide Your problem Like how sridevi hides Saptami name in story #yuva pic.twitter.com/FE7HPYFusZ
— 𝐁𝐎𝐗 𝐎𝐅𝐅𝐈𝐂𝐄 𝐒𝐔𝐋𝐓𝐇𝐀𝐍 (@dbossdarshana) December 17, 2025
7 ವರ್ಷಗಳ ಕಾಲ ಯುವ ಹಾಗೂ ಶ್ರೀದೇವಿ ಪ್ರೀತಿಸಿದರು. 2019ರಲ್ಲಿ ಇವರು ವಿವಾಹ ಆದರು. ನಾಲ್ಕೇ ವರ್ಷ ಸಂಸಾರ ನಡೆಸಿದ ಇವರು ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಇವರು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅನೇಕ ಬಾರಿ ಯುವ ಹಾಗೂ ಅವರ ಕುಟುಂಬದವರ ಮೇಲೆ ಶ್ರೀದೇವಿ ಸಿಟ್ಟು ಹೊರಹಾಕಿದ್ದಾರೆ. ಈಗ ಯುವ ಬಗ್ಗೆ ಕೇಳಿದ್ದಕ್ಕೆ ರಾಜ್ಕುಮಾರ್ ಹಾಡು ಹಾಕಿ ಉತ್ತರಿಸಿದ್ದು ವಿಶೇಷವಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.