Sanjay Dutt: ಕಾಶ್ಮೀರದಲ್ಲಿ ವಿಜಯ್ ಜೊತೆ ಸೇರಿದ ಸಂಜಯ್ ದತ್

ಕೆಜಿಎಫ್ 2 ಸಿನಿಮಾದ ಬಳಿಕ ಬಾಲಿವುಡ್ ಸ್ಟಾರ್ ಸಂಜಯ್ ದತ್​ಗೆ ದಕ್ಷಿಣ ಭಾರತದಲ್ಲಿ ಹಲವು ಅವಕಾಶಗಳು ಅರಸಿ ಬರುತ್ತಿವೆ. ಇದೀಗ ವಿಜಯ್ ಜೊತೆ ತಮಿಳು ಸಿನಿಮಾದಲ್ಲಿ ಸಂಜು ನಟಿಸುತ್ತಿದ್ದು, ಕಾಶ್ಮೀರದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

Sanjay Dutt: ಕಾಶ್ಮೀರದಲ್ಲಿ ವಿಜಯ್ ಜೊತೆ ಸೇರಿದ ಸಂಜಯ್ ದತ್
ವಿಜಯ್-ಸಂಜಯ್

Updated on: Mar 11, 2023 | 8:47 PM

ಕೆಜಿಎಫ್ 2 (KGF 2) ಸಿನಿಮಾದಲ್ಲಿ ನಟಿಸಿದ ಬಳಿಕ ಬಾಲಿವುಡ್ ಸ್ಟಾರ್ ಸಂಜಯ್ ದತ್​ಗೆ (Sanjay Dutt) ದಕ್ಷಿಣ ಭಾರತದಲ್ಲಿ ಒಂದರ ಹಿಂದೊಂದು ಅವಕಾಶಗಳು ಅರಸಿ ಬರುತ್ತಿವೆ. ಸಂಜಯ್ ದತ್ ಸಹ ಬಾಲಿವುಡ್​ ಸಿನಿಮಾಗಳಿಗಿಂತಲೂ ದಕ್ಷಿಣದ ಸಿನಿಮಾಗಳಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿರುವಂತೆಯೂ ಕಾಣುತ್ತಿದೆ. ಇದೀಗ ಹೊಸ ತಮಿಳು ಸಿನಿಮಾದಲ್ಲಿ ಸಂಜಯ್ ನಟಿಸಲಿದ್ದು, ಚಿತ್ರತಂಡವನ್ನು ಕಾಶ್ಮೀರದಲ್ಲಿ (Kashmir) ಸೇರಿಕೊಂಡಿದ್ದಾರೆ.

ತಮಿಳಿನ ಸ್ಟಾರ್ ನಟ ವಿಜಯ್ ನಟಿಸುತ್ತಿರುವ ಲಿಯೋ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪ್ರಸ್ತುತ ಕಾಶ್ಮೀರದಲ್ಲಿ ನಡೆಯುತ್ತಿದ್ದು, ಸಂಜಯ್ ದತ್ ನೇರವಾಗಿ ಕಾಶ್ಮೀರದಲ್ಲಿ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಲಿಯೋ ಚಿತ್ರತಂಡ ಅದ್ಧೂರಿಯಾಗಿ ಸಂಜಯ್ ದತ್ ಅವರನ್ನು ಸ್ವಾಗತಿಸಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಲಿಯೋ ತಂಡಕ್ಕೆ ಸಂಜಯ್​ಗೆ ಸ್ವಾಗತ ಕೋರಿದೆ.

ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂಜಯ್ ಅನ್ನು ಹೂಗುಚ್ಛ ನೀಡಿ ಸ್ವಾಗತಿಸಿರುವ ಲಿಯೋ ತಂಡ ಅವರನ್ನು ಐಶಾರಾಮಿ ಕಾರಿನಲ್ಲಿ ಸೆಟ್​ಗೆ ಕರೆದುಕೊಂಡು ಹೋಗಿದ್ದು, ಸಂಜಯ್ ಕಾರಿನಲ್ಲಿ ಪ್ರಯಾಣಿಸುತ್ತಿರುವ ದೃಶ್ಯವನ್ನು ವಿಡಿಯೋ ಮಾಡಲಾಗಿದೆ. ಸೆಟ್​ಗೆ ತಲುಪಿದ ಸಂಜಯ್ ದತ್ ಅವರನ್ನು ಖುದ್ದು ನಟ ವಿಜಯ್ ರಿಸೀವ್ ಮಾಡಿಕೊಂಡಿದ್ದಾರೆ. ಸಂಜಯ್ ಹಾಗೂ ವಿಜಯ್ ನಡುವೆ ಆತ್ಮೀಯತೆಯ ಅಪ್ಪುಗೆ ಏರ್ಪಟ್ಟ ಬಳಿಕ ನಿರ್ದೇಶಕ ಲೋಕೇಶ್ ಕನಗರಾಜ್ ಸಹ ಸಂಜಯ್ ಅವರನ್ನು ಸೆಟ್​ಗೆ ಸ್ವಾಗತಿಸಿದ್ದಾರೆ. ಸಂಜಯ್, ವಿಜಯ್ ಹಾಗೂ ಲೋಕೇಶ್ ಕನಗರಾಜ್ ಅವರುಗಳು ತುಸು ಕಾಲ ಚರ್ಚೆ ನಡೆಸಿ ಬಳಿಕ ಸಂಜಯ್ ಬೀಳ್ಕೊಟ್ಟಿದ್ದಾರೆ.

ಲಿಯೋ ಸಿನಿಮಾದ ಚಿತ್ರೀಕರಣವು ಕಾಶ್ಮೀರದಲ್ಲಿ ಸತತವಾಗಿ ನಡೆಯಲಿದ್ದು, ಸಿನಿಮಾದಲ್ಲಿ ನಾಯಕ ಹಾಗೂ ವಿಲನ್ ಮೊದಲ ಬಾರಿಗೆ ಎದುರಾಗುವ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆಯಂತೆ. ಕೆಜಿಎಫ್ 2 ಮಾದರಿಯಲ್ಲಿಯೇ ಲಿಯೋ ಸಿನಿಮಾದಲ್ಲಿ ಸಂಜಯ್​ಗೆ ಭಾರಿ ಫವರ್​ಫುಲ್ ವಿಲನ್ ಪಾತ್ರ ನೀಡಿದ್ದಾರೆ ನಿರ್ದೇಶಕ ಲೋಕೇಶ್ ಕನಗರಾಜ್.

ಲೋಕೇಶ್ ಕನಗರಾಜ್ ಜೊತೆಗೆ ವಿಜಯ್​ಗೆ ಇದು ಎರಡನೇ ಸಿನಿಮಾ ಆಗಿದೆ. ಈ ಮೊದಲು ಮಾಸ್ಟರ್ ಹೆಸರಿನ ಸಿನಿಮಾದಲ್ಲಿ ವಿಜಯ್ ನಟಿಸಿದ್ದರು. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಬಳಿಕ ಲೋಕೇಶ್, ಕಮಲ್ ಹಾಸನ್ ನಾಯಕರಾಗಿದ್ದ ವಿಕ್ರಂ ಸಿನಿಮಾ ನಿರ್ದೇಶಿಸಿ ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಯಿತು. ವಿಕ್ರಂ ಸಿನಿಮಾದ ಮುಂದಿನ ಭಾಗವನ್ನು ಈಗಾಗಲೇ ಘೋಷಿಸಲಾಗಿದ್ದು, ಆ ಸಿನಿಮಾದಲ್ಲಿ ಕಮಲ್ ಎದುರು ನಟ ಸೂರ್ಯ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ವಿಕ್ರಂ ಸಿನಿಮಾ ನಿರ್ದೇಶಿಸುವ ಸಂದರ್ಭದಲ್ಲಿಯೇ ಲಿಯೋ ಕತೆಯನ್ನು ವಿಜಯ್​ಗೆ ಹೇಳಿ ವಿಜಯ್ ಒಪ್ಪಿಗೆ ಸೂಚಿಸಿದ್ದರು. ಲಿಯೋ ಮುಗಿದ ಬಳಿಕ ವಿಕ್ರಂ ಸಿನಿಮಾದ ಮುಂದಿನ ಭಾಗದ ಚಿತ್ರೀಕರಣ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us