
ಬಾಲಿವುಡ್ನಲ್ಲಿ ಹೀರೋ ಆಗಿ ಮಿಂಚಿದ ಸಂಜಯ್ ದತ್ (Sanjay Dutt) ಅವರು ಸೌತ್ ಸಿನಿಮಾಗಳಲ್ಲಿ ವಿಲನ್ ಆಗಿ ದೊಡ್ಡ ಹೆಸರು ಮಾಡುತ್ತಿದ್ದಾರೆ. ಈಗ ನಿರ್ದೇಶಕ ಮಾರುತಿ ಅವರು ಆ್ಯಕ್ಷನ್-ಕಟ್ ಹೇಳುತ್ತಿರುವ ಪ್ಯಾನ್-ಇಂಡಿಯಾ ಸಿನಿಮಾದಲ್ಲೂ ಸಂಜಯ್ ದತ್ ವಿಲನ್ ಆಗುತ್ತಿದ್ದು, ಅದಕ್ಕಾಗಿ ಮುಂಬೈನಲ್ಲಿ ಲುಕ್ ಟೆಸ್ಟ್ ನಡೆದಿದೆ ಎಂದು ಹೇಳಲಾಗುತ್ತಿದೆ.ನಟ ಸಂಜಯ್ ದತ್ ಅವರಿಗೆ ದಕ್ಷಿಣ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದೆ. ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ ಮತ್ತು ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಬಳಿಕ ಸಂಜಯ್ ದತ್ ಅವರಿಗೆ ಇದ್ದ ಡಿಮ್ಯಾಂಡ್ ಜಾಸ್ತಿ ಆಗಿದೆ. ಅದರಲ್ಲೂ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅವರನ್ನು ವಿಲನ್ ಪಾತ್ರಕ್ಕೆ ಹೆಚ್ಚಾಗಿ ಆಯ್ಕೆ ಮಾಡಲಾಗುತ್ತಿದೆ. ನಿರ್ಮಾಪಕರು ಸಂಜಯ್ ದತ್ ಅವರ ಕಾಲ್ಶೀಟ್ಗಾಗಿ ಕಾಯುವಂತಾಗಿದೆ. ಈಗ ಅವರು ಪ್ರಭಾಸ್ (Prabhas) ಅಭಿನಯದ ಹೊಸ ಸಿನಿಮಾದಲ್ಲೂ ವಿಲನ್ ಪಾತ್ರ ಮಾಡಲಿದ್ದಾರೆ ಎಂಬುದು ಗೊತ್ತಾಗಿದೆ.
ಬಾಲಿವುಡ್ನಲ್ಲಿ ಹೀರೋ ಆಗಿ ಮಿಂಚಿದ ಸಂಜಯ್ ದತ್ ಅವರು ಸೌತ್ ಸಿನಿಮಾಗಳಲ್ಲಿ ವಿಲನ್ ಆಗಿ ದೊಡ್ಡ ಹೆಸರು ಮಾಡುತ್ತಿದ್ದಾರೆ. ಈಗ ನಿರ್ದೇಶಕ ಮಾರುತಿ ಅವರು ಆ್ಯಕ್ಷನ್-ಕಟ್ ಹೇಳುತ್ತಿರುವ ಪ್ಯಾನ್-ಇಂಡಿಯಾ ಸಿನಿಮಾದಲ್ಲೂ ಸಂಜಯ್ ದತ್ ವಿಲನ್ ಆಗುತ್ತಿದ್ದು, ಪ್ರಭಾಸ್ ಎದುರು ಅವರು ಅಬ್ಬರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ತಾತ್ಕಾಲಿಕವಾಗಿ ಇದನ್ನು ‘ರಾಜಾ ಸಾಬ್’ ಎಂದು ಕರೆಯಲಾಗುತ್ತಿದೆ.
ಇದನ್ನೂ ಓದಿ: ಸಂಜಯ್ ದತ್ಗೆ ಇತ್ತು ಎನ್ಕೌಂಟರ್ ಭಯ; ಸಿನಿಮೀಯ ಶೈಲಿಯಲ್ಲೇ ಕೊಲ್ಲುತ್ತಾರೆ ಎಂದುಕೊಂಡಿದ್ರು..
ಈ ಚಿತ್ರದಲ್ಲಿ ನಾಯಕಿಯರಾಗಿ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ನಟಿಸುತ್ತಿದ್ದಾರೆ. ಸತ್ಯರಾಜ್ ಮತ್ತು ಜರೀನಾ ವಹಾಬ್ ಮುಂತಾದವರು ಗಮನಾರ್ಹ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈಗ ಸಂಜಯ್ ದತ್ ಕೂಡ ಸೇಪರ್ಡೆ ಆಗಿರುವ ಬಗ್ಗೆ ಸುದ್ದಿ ಹರಿದಾಡಿದೆ. ಇತ್ತೀಚೆಗೆ ಸಂಜಯ್ ದತ್ ಅವರ ಲುಕ್ ಟೆಸ್ಟ್ ಮಾಡುವ ಸಲುವಾಗಿ ನಿರ್ದೇಶಕ ಮಾರುತಿ ಮತ್ತು ಅವರ ಆಪ್ತ ಸ್ನೇಹಿತ ಎಸ್‌ಕೆಎನ್ ಅವರು ಮುಂಬೈಗೆ ತೆರಳಿದ್ದರು. ಮುಂಬೈನಲ್ಲಿ ಸಂಜಯ್ ದತ್ ಅವರ ಮೇಕ್‌ಓವರ್ ಮಾಡಲಾಗಿದೆ. ಅದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸುವ ರೀತಿಯಲ್ಲಿ ಇದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಪ್ರಭಾಸ್ ಅವರು ಹೈದರಾಬಾದ್‌ನಲ್ಲಿ ‘ಕಲ್ಕಿ 2898 AD’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೇ ‘ಸಲಾರ್’ ಸಿನಿಮಾದ ಪ್ರಮೋಷನ್ಗಾಗಿಯೂ ಅವರು ಸಮಯ ಮೀಸಲಿಟ್ಟಿದ್ದಾರೆ. ‘ಸಲಾರ್’ ಬಿಡುಗಡೆ ಆದ ಬಳಿಕ ಅವರು ನಿರ್ದೇಶಕ ಮಾರುತಿ ಜೊತೆಗಿನ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.