Shah Rukh Khan: ಈ ಶಾರುಖ್​ ಖಾನ್​ ಅಸಲಿಯೋ ನಕಲಿಯೋ? ಫ್ಯಾನ್ಸ್​ಗೆ ದಂಗು ಬಡಿಸಿದ ಫೋಟೋ, ವಿಡಿಯೋಗಳು ವೈರಲ್​

ಯಥಾವತ್ತು ಶಾರುಖ್​ ರೀತಿಯೇ ಕಾಣುವ ವ್ಯಕ್ತಿಯ ಅನೇಕ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಅದನ್ನು ಕಂಡವರು ಒಂದು ಕ್ಷಣ ಅಚ್ಚರಿ ಪಡುವುದು ಗ್ಯಾರಂಟಿ.

Shah Rukh Khan: ಈ ಶಾರುಖ್​ ಖಾನ್​ ಅಸಲಿಯೋ ನಕಲಿಯೋ? ಫ್ಯಾನ್ಸ್​ಗೆ ದಂಗು ಬಡಿಸಿದ ಫೋಟೋ, ವಿಡಿಯೋಗಳು ವೈರಲ್​
ಶಾರುಖ್​ ಖಾನ್​

Updated on: Jun 05, 2021 | 11:42 AM

ಕಳೆದ ಕೆಲವು ವರ್ಷಗಳಿಂದ ನಟ ಶಾರುಖ್​ ಖಾನ್​ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗುತ್ತಿಲ್ಲ. ಮಾಡಿದ ಸಿನಿಮಾಗಳೆಲ್ಲವೂ ಸೋಲುತ್ತಿವೆ. ಅದರ ನಡುವೆಯೂ ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಮತ್ತೆ ಶಾರುಖ್​ ಹೆಸರು ಹೆಡ್​ಲೈನ್​ ಆಗುತ್ತಿದೆ. ಆದರೆ ಅದಕ್ಕೆ ಕಾರಣ ಮಾತ್ರ ಅವರಲ್ಲ! ಈ ಬಾರಿ ಸದ್ದು ಮಾಡುತ್ತಿರುವುದು ನಕಲಿ ಶಾರುಖ್​ ಖಾನ್​. ಸೇಮ್​ ಟು ಸೇಮ್​ ಶಾರುಖ್​ ರೀತಿಯೇ ಕಾಣುವ ಇನ್ನೊಬ್ಬ ವ್ಯಕ್ತಿಯ ಫೋಟೋ ಮತ್ತು ವಿಡಿಯೋಗಳು ಈಗ ಇಂಟರ್​ನೆಟ್​ನಲ್ಲಿ ವೈರಲ್​ ಆಗುತ್ತಿವೆ.

ಈ ವ್ಯಕ್ತಿಯ ಹೆಸರು ಇಬ್ರಾಹಿಂ​ ಖಾದ್ರಿ. ಸೋಶಿಯಲ್​ ಮೀಡಿಯಾದಲ್ಲಿ ಇವರನ್ನು ಸಾಕಷ್ಟು ಮಂದಿ ಫಾಲೋ ಮಾಡುತ್ತಿದ್ದಾರೆ. ಯಥಾವತ್ತು ಶಾರುಖ್​ ರೀತಿಯೇ ಕಾಣುವ ಅವರು, ಅನೇಕ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಕಂಡವರು ಒಂದು ಕ್ಷಣ ಅಚ್ಚರಿ ಪಡುವುದು ಗ್ಯಾರಂಟಿ. ಈ ಶಾರುಖ್​ ಖಾನ್​ ಅಸಲಿಯೋ ನಕಲಿಯೋ ಎಂಬುದೇ ಗೊತ್ತಾಗದ ರೀತಿಯಲ್ಲಿ ಇಬ್ರಾಹಿಂ ಖಾದ್ರಿ ಕಾಣಿಸಿಕೊಂಡಿದ್ದಾರೆ. ನೆಟ್ಟಿಗರು ಈ ಫೋಟೋ ಮತ್ತು ವಿಡಿಯೋಗಳಿಗೆ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಶಾರುಖ್​ ರೀತಿಯೇ ಹೋಲುವ ಅಭಿಮಾನಿಯೊಬ್ಬನ ಕಾಲ್ಪನಿಕ ಕಥೆ ಆಧರಿಸಿ ‘ಫ್ಯಾನ್​’ ಸಿನಿಮಾ ಮಾಡಲಾಗಿತ್ತು. ಆ ಚಿತ್ರಕ್ಕೆ ಇಬ್ರಾಹಿಂ ಖಾದ್ರಿ ಅವರನ್ನೇ ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ‘ನೀವು ನೇರವಾಗಿ ಭೇಟಿಯಾದರೆ ಸ್ವತಃ ಶಾರುಖ್​ ಕೂಡ ಶಾಕ್​ ಆಗುತ್ತಾರೆ’ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಇಬ್ರಾಹಿಂ ಖಾದಿ ಫ್ಯಾನ್​ ಫಾಲೋಯಿಂಗ್​ ಹೆಚ್ಚುತ್ತಿದೆ.

2018ರಲ್ಲಿ ಬಂದ ‘ಜೀರೋ’ ಸಿನಿಮಾ ಬಳಿಕ ಶಾರುಖ್​ ನಟನೆಯ ಬೇರೆ ಯಾವುದೇ ಚಿತ್ರವೂ ತೆರೆಕಂಡಿಲ್ಲ. ‘ಜೀರೋ’ ಸೋತ ಬಳಿಕ ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. ಹೊಸ ಸಿನಿಮಾ ಒಪ್ಪಿಕೊಳ್ಳಲು ತುಂಬ ಸಮಯ ತೆಗೆದುಕೊಂಡರು. ಕಡೆಗೂ ಅವರ ‘ಪಠಾಣ್​’ ಚಿತ್ರ ಸೆಟ್ಟೇರಿತು. ಲಾಕ್​ಡೌನ್​ನಿಂದಾಗಿ ಸಿನಿಮಾ ಕೆಲಸಗಳು ನಿಂತಿಲ್ಲ. ನಿಧಾನವಾಗಿ ಕೊವಿಡ್​ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಹಾಗಾಗಿ ಶೀಘ್ರದಲ್ಲೇ ಶೂಟಿಂಗ್​ ಅನುಮತಿ ಸಿಗುವ ಸಾಧ್ಯತೆ. ಅಷ್ಟರೊಳಗೆ ಮುಂಜಾಗ್ರತ ಕ್ರಮವಾಗಿ ‘ಪಠಾಣ್​’ ಚಿತ್ರತಂಡದ ಬಹುತೇಕ ಕಾರ್ಮಿಕರಿಗೆ ಕೊವಿಡ್​ ಲಸಿಕೆ ಹಾಕಿಸಲಾಗುತ್ತಿದೆ. ‘ಬ್ರಹ್ಮಾಸ್ತ್ರ’, ‘ಲಾಲ್​ ಸಿಂಗ್​ ಚೆಡ್ಡಾ’ ಚಿತ್ರಗಳಲ್ಲಿ ಶಾರುಖ್​ ಅತಿಥಿ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ:

ಶಾರುಖ್​ ಖಾನ್​ ಮಗಳು ಸುಹಾನಾಗೆ ಬಂತು ಮ್ಯಾರೇಜ್​ ಪ್ರಪೋಸಲ್​; ಹುಡುಗನ ಸ್ಯಾಲರಿ ಎಷ್ಟು ಗೊತ್ತಾ?

‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​

Published On - 11:36 am, Sat, 5 June 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us