ನಾರ್ವೆಯಲ್ಲಿರುವ ಪ್ರೀತಿ ಹುಡುಕಿ ಹೊರಡಲಿದ್ದಾರೆ ಶಾರುಖ್​ ಖಾನ್​; ಈ ಅಚ್ಚರಿಯ ಕಥೆ ಹಿಂದಿರೋದೇನು?

ರೊಮ್ಯಾಂಟಿಕ್​ ಕಥೆ ಮೂಲಕ ಮತ್ತೆ ಬರೋಕೆ ಭನ್ಸಾಲಿ ರೆಡಿ ಆಗಿದ್ದು, ಇಜ್ಹಾರ್​ ಎಂದು ಕಥೆಗೆ ಹೆಸರಿಟ್ಟಿದ್ದಾರೆ. ನಾಲ್ಕು ವರ್ಷದ ಹಿಂದೆಯೇ ಈ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಈಗ ಬನ್ಸಾಲಿ ಇದನ್ನು ಸಿನಿಮಾ ಮಾಡಲು ಉತ್ಸಾಹ ತೋರಿದ್ದಾರೆ.

ನಾರ್ವೆಯಲ್ಲಿರುವ ಪ್ರೀತಿ ಹುಡುಕಿ ಹೊರಡಲಿದ್ದಾರೆ ಶಾರುಖ್​ ಖಾನ್​; ಈ ಅಚ್ಚರಿಯ ಕಥೆ ಹಿಂದಿರೋದೇನು?
ಶಾರುಖ್​ ಖಾನ್​
Edited By:

Updated on: May 08, 2021 | 5:34 PM

ಎರಡು ದಶಕಗಳ ಹಿಂದೆ ದೇವದಾಸ್​ ಸಿನಿಮಾ ಮೂಲಕ ಶಾರುಖ್​ ಖಾನ್​ ಹಾಗೂ ಸಂಜಯ್​ ಲೀಲಾ ಭನ್ಸಾಲಿ ಕಮಾಲ್​ ಮಾಡಿದ್ದರು. ಆ ಸಿನಿಮಾವನ್ನು ಪ್ರೇಕ್ಷಕರು ಹುಚ್ಚೆದ್ದು ನೋಡಿದ್ದರು. ನಂತರ ಈ ಜೋಡಿ ಒಂದಾಗೋಕೆ ಅವಕಾಶ ಸಿಕ್ಕಿಲ್ಲ. ಈಗ ಇಬ್ಬರೂ ಮತ್ತೆ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್​ ಅಂಗಳದಲ್ಲಿ ಹರಿದಾಡಿದೆ. ಕಥೆಯ ಒಂದೆಳೆ ಕೇಳಿ ಪ್ರೆಕ್ಷಕರು ಸಾಕಷ್ಟು ಥ್ರಿಲ್​ ಆಗಿದ್ದಾರೆ.

ಬಾಜಿರಾವ್​ ಮಸ್ತಾನಿ ಹಾಗೂ ಪದ್ಮಾವತ್​ ಸಿನಿಮಾದಲ್ಲಿ ನಟಿಸೋಕೆ ಶಾರುಖ್​ಗೆ ಭನ್ಸಾಲಿ ಆಫರ್​ ನೀಡಿದ್ದರು ಎನ್ನುವ ಮಾತಿತ್ತು. ಆದರೆ, ಎರಡೂ ಚಿತ್ರಗಳಲ್ಲಿ ಶಾರುಖ್​ ನಟಿಸಿಲ್ಲ. ಹಮ್​ ದಿಲ್​ ದೆ ಚೂಕೆ ಸನಮ್​ 2 ಸಿನಿಮಾದಲ್ಲಿ ಶಾರುಖ್​ ಹಾಗೂ ಸಲ್ಮಾನ್​ ಖಾನ್​ ಅವರನ್ನು ಒಟ್ಟಿಗೆ ಕರೆತರುವ ಆಲೋಚನೆ ಭನ್ಸಾಲಿ ಅವರದ್ದಾಗಿತ್ತು. ಆದರೆ, ಅದು ಕೂಡ ನೆರವೇರಿಲ್ಲ. ಈಗ ಶಾರುಖ್​-ಭನ್ಸಾಲಿ ಒಟ್ಟಾಗಿ ಕೆಲಸ ಮಾಡೋ ಸಮಯ ಹತ್ತಿರ ಬಂದಿದೆ ಎನ್ನಲಾಗುತ್ತಿದೆ.

ರೊಮ್ಯಾಂಟಿಕ್​ ಕಥೆ ಮೂಲಕ ಮತ್ತೆ ಬರೋಕೆ ಭನ್ಸಾಲಿ ರೆಡಿ ಆಗಿದ್ದು, ಇಜ್ಹಾರ್​ ಎಂದು ಕಥೆಗೆ ಹೆಸರಿಟ್ಟಿದ್ದಾರೆ. ನಾಲ್ಕು ವರ್ಷದ ಹಿಂದೆಯೇ ಈ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಈಗ ಬನ್ಸಾಲಿ ಇದನ್ನು ಸಿನಿಮಾ ಮಾಡಲು ಉತ್ಸಾಹ ತೋರಿದ್ದಾರೆ.

ಭಾರತದ ಹುಡುಗ ಹಾಗೂ ನಾರ್ವೆ ಹುಡುಗಿ ನಡುವೆ ನಡೆಯುವ ಪ್ರೇಮ ಕಥೆಯನ್ನು ಸಿನಿಮಾ ಹೇಳಲಿದೆ. ವಿಶೇಷ ಎಂದರೆ ಕಥಾನಾಯಕ ನಾರ್ವೆವರೆಗೆ ಸೈಕಲ್​ ಹೊಡೆದುಕೊಂಡೇ ಹೋಗುತ್ತಾನಂತೆ. ಇದು ನೈಜ ಕಥೆ ಆಧರಿಸಿ ಸಿದ್ಧಗೊಳ್ಳುತ್ತಿರುವ ಚಿತ್ರ ಎನ್ನಲಾಗಿದೆ. ಸದ್ಯ, ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಸದ್ಯ ಸಿದ್ಧಾರ್ಥ್​ ಆನಂದ್​ ನಿರ್ದೇಶನದ ಪಠಾಣ್​ ಸಿನಿಮಾದಲ್ಲಿ ಶಾರುಖ್​ ಬ್ಯುಸಿಯಾಗಿದ್ದಾರೆ. ಕೊರೊನಾ ಕಾರಣದಿಂದ ಸಿನಿಮಾ ಕೆಲಸಗಳು ಸ್ಥಗಿತಗೊಂಡಿವೆ. ಈ ಚಿತ್ರದ ಮೂಲಕ ಶಾರುಖ್​ ಕಂಬ್ಯಾಕ್​ ಮಾಡುತ್ತಿದ್ದಾರೆ. ಇನ್ನು, ಭನ್ಸಾಲಿ ಹೀರಾ ಮಂಡಿ ಹೆಸರಿನ ವೆಬ್​ ಸೀರಿಸ್​ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸೋನಾಕ್ಷಿ ಸಿನ್ಹಾ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್​​​​​​ಗಿಂತ ನಾನು ಗ್ರೇಟ್​ ಎಂದ ಕಂಗನಾ ರಣಾವತ್​; ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us