ಹೆಸರಿನ ಜತೆಗೆ ಮಗುವಿನ ಫೋಟೋವನ್ನೂ ಅನಾವರಣ ಮಾಡಿದ ಗಾಯಕಿ ಶ್ರೇಯಾ ಘೋಶಾಲ್

ಮಗುವಿನ ಫೋಟೋ ಹಾಗೂ ಹೆಸರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಮಗುವಿನ ಹೆಸರು ಚೆನ್ನಾಗಿದೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಮಗುವಿನ ಮುಖವನ್ನು ತೋರಿಸಿ ಎಂದು ಮನವಿ ಮಾಡಿದ್ದಾರೆ.

ಹೆಸರಿನ ಜತೆಗೆ ಮಗುವಿನ ಫೋಟೋವನ್ನೂ ಅನಾವರಣ ಮಾಡಿದ ಗಾಯಕಿ ಶ್ರೇಯಾ ಘೋಶಾಲ್
ಶ್ರೇಯಾ ಘೋಷಾಲ್​
Follow us
ರಾಜೇಶ್ ದುಗ್ಗುಮನೆ
|

Updated on: Jun 02, 2021 | 4:59 PM

ಮಧುರ ಕಂಠದ ಮೂಲಕ ಗಮನ ಸೆಳೆದಿರುವ ಗಾಯಕಿ ಶ್ರೇಯಾ ಘೋಶಾಲ್ ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಶ್ರೇಯಾ ಮಗುವಿನ ಫೋಟೋ ಹಾಗೂ ಹೆಸರು ಎರಡನ್ನೂ ಬಹಿರಂಗ ಮಾಡಿದ್ದಾರೆ.

ಶ್ರೇಯಾ ಘೋಷಾಲ್​ ತಮ್ಮ ಮಗುವಿಗೆ ದೇವಯಾನ್​ ಮುಖ್ಯೋಪಾಧ್ಯಾಯ ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶ್ರೇಯಾ, ‘ದೇವಯಾನ್​ ಮುಖ್ಯೋಪಾಧ್ಯಾಯನನ್ನು ಪರಿಚಯಿಸುತ್ತಿದ್ದೇವೆ. ಮೇ 22ರಂದು ನಮ್ಮ ಬಾಳಲ್ಲಿ ಬಂದ ಇವನು ಸಂಪೂರ್ಣ ಬದುಕನ್ನೇ ಬದಲಾಯಿಸಿದ್ದಾನೆ’ ಎಂದು ಶ್ರೇಯಾ ಬರೆದುಕೊಂಡಿದ್ದಾರೆ.

ಮಗುವಿನ ಫೋಟೋ ಹಾಗೂ ಹೆಸರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಮಗುವಿನ ಹೆಸರು ಚೆನ್ನಾಗಿದೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಮಗುವಿನ ಮುಖವನ್ನು ತೋರಿಸಿ ಎಂದು ಮನವಿ ಮಾಡಿದ್ದಾರೆ.

ಮೇ 22ರಂದು ಶ್ರೇಯಾ ಘೋಶಾಲ್​ ಮಗು ಜನಿಸಿದ ಬಗ್ಗೆ ಘೋಷಣೆ ಮಾಡಿದ್ದರು. ಇಂದು ಮಧ್ಯಾಹ್ನ ನನಗೆ ಗಂಡು ಮಗುವಾಗಿದೆ. ಈ ಭಾವನೆಯನ್ನು ಹಿಂದೆಂದೂ ಹೊಂದಿರಲಿಲ್ಲ. ಶೀಲಾದಿತ್ಯ, ನಾನು ಹಾಗೂ ನನ್ನ ಕುಟುಂಬಕ್ಕೆ ಖುಷಿ ಆಗಿದೆ. ನಿಮ್ಮ ಅಪರಿಮಿತ ಹಾರೈಕೆಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದರು. ಈಗ ಅವರು ಮಗುವಿಗೆ ಮುದ್ದಾದ ಹೆಸರಿಟ್ಟಿದ್ದಾರೆ.

ಹಿನ್ನೆಲೆ ಗಾಯಕಿ ಶ್ರೇಯಾ , ಶಿಲಾದಿತ್ಯ ಅವರನ್ನು 2015 ಫೆಬ್ರವರಿ 5ರಂದು ಮದುವೆ ಆಗಿದ್ದರು. ಈ ಮೂಲಕ ಹಲವು ವರ್ಷಗಳ ಪ್ರೀತಿಗೆ ಹೊಸ ಅರ್ಥ ನೀಡಿದ್ದರು. ಶ್ರೇಯಾ ಹಿಂದಿ ಮಾತ್ರವಲ್ಲದೆ, ಕನ್ನಡದಲ್ಲೂ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ‘ಮೊಗ್ಗಿನ ಮನಸಲಿ…’, ‘ಉಲ್ಲಾಸದ ಹೂಮಳೆ…’, ‘ಮಳೆ ಬರುವ ಹಾಗಿದೆ…’ ‘ಪೋಲಿ ಇವನು..’ ಸೇರಿ ಸಾಕಷ್ಟು ಹಾಡುಗಳು ಶ್ರೇಯಾ ಕಂಠದಿಂದ ಮೂಡಿ ಬಂದಿವೆ.

ಇದನ್ನೂ ಓದಿ: Shreya Ghoshal: ಗಂಡು ಮಗುವಿಗೆ ತಾಯಿ ಆದ ಗಾಯಕಿ ಶ್ರೇಯಾ ಘೋಶಾಲ್​