ಸೋನು ಸೂದ್​ ಒಂದು ಸಿನಿಮಾಗೆ ಪಡೆಯೋ ಸಂಭಾವನೆ ಎಷ್ಟು? ಈ ನಟನಿಗೆ ಎಲ್ಲಿಂದ ಬರುತ್ತೆ ಇಷ್ಟೊಂದು ಹಣ?

ಸೋನು ಸೂದ್​ ಒಂದು ಸಿನಿಮಾಗೆ ಪಡೆಯೋ ಸಂಭಾವನೆ ಎಷ್ಟು? ಈ ನಟನಿಗೆ ಎಲ್ಲಿಂದ ಬರುತ್ತೆ ಇಷ್ಟೊಂದು ಹಣ?
ಸೋನು ಸೂದ್​

ಸೋನು ಸೂದ್​ ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರತಿ ಸಿನಿಮಾದಲ್ಲಿ ಪ್ರಮುಖ ವಿಲನ್​ ಆಗಿ ನಟಿಸುತ್ತಿದ್ದ ಸೋನು ಪಡೆಯುತ್ತಿದ್ದ ಸಂಭಾವನೆ 2 ಕೋಟಿ ರೂಪಾಯಿ ಎನ್ನಲಾಗಿದೆ

Rajesh Duggumane

|

Jun 02, 2021 | 3:47 PM

ತೆರೆಮೇಲೆ ವಿಲನ್​ ಪಾತ್ರಗಳನ್ನು ಮಾಡುತ್ತಿದ್ದ ನಟ ಸೋನು ಸೂದ್​ ಅನೇಕರ ಪಾಲಿಗೆ ರಿಯಲ್​ ಹೀರೋ ಆಗಿದ್ದಾರೆ ಸೋನು ಸೂದ್​ ಮಾಡುತ್ತಿರವ ಸಹಾಯಕ್ಕೆ ಎಲ್ಲಾ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗಾದರೆ, ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ? ಅವರು ಒಂದು ಸಿನಿಮಾಗೆ ಪಡೆಯೋ ಸಂಭಾವನೆ ಎಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸೋನು ಸೂದ್​ ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರತಿ ಸಿನಿಮಾದಲ್ಲಿ ಪ್ರಮುಖ ವಿಲನ್​ ಆಗಿ ನಟಿಸುತ್ತಿದ್ದ ಸೋನು ಪಡೆಯುತ್ತಿದ್ದ ಸಂಭಾವನೆ 2 ಕೋಟಿ ರೂಪಾಯಿ ಎನ್ನಲಾಗಿದೆ. ಇದು ನಿರ್ಮಾಪಕರಿಗೆ ಅಷ್ಟಾಗಿ ಹೊರೆ ಆಗುತ್ತಿರಲಿಲ್ಲ. ಆದರೆ, ಈಗ ಸೋನು ಸೂದ್​ ಖ್ಯಾತಿ ಹೆಚ್ಚಿದೆ. ಅವರ ಸಿನಿ ಕೆರಿಯರ್​ಗೂ ಇದು ಸಾಕಷ್ಟು ಮೈಲೇಜ್​​ ನೀಡಿದೆ. ಈ ಕಾರಣಕ್ಕೆ ಸೋನು ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ.

ಸೋನು ಸೂದ್​ ತಾವು ಇನ್ಮುಂದೆ ವಿಲನ್​ ಪಾತ್ರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಅವರು ಸಂಭಾವನೆಯನ್ನು ಎರಡರಿಂದ ಏಳು ಕೋಟಿ ರೂಪಾಯಿಗೆ ಏರಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಇದು ನಿರ್ಮಾಪಕರಿಗೆ ಸ್ವಲ್ಪ ಭಾರ ಎನಿಸುತ್ತಿದೆ. ಹೀಗಾಗಿ, ಕೆಲ ನಿರ್ಮಾಪಕರು ಸೋನು ಸೂದ್​ ಆಯ್ಕೆ ಮಾಡಿಕೊಳ್ಳಬೇಕು ಎಂಬ ನಿರ್ಧಾರದಿಂದ ಹಿಂದೆ ಸರಿದಿದ್ದಾರಂತೆ.

ಸೋನು ಸೂದ್​ ತಮ್ಮ ‘ಸೂದ್​ ಚ್ಯಾರಿಟಿ ಫೌಂಡೇಷನ್’​ ಮೂಲಕ ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ. ಫೌಂಡೇಷನ್​ಗೆ ಒಂದಷ್ಟು ಹಣ ಇವರ ದುಡಿಮೆಯಿಂದಲೇ ಬಂದರೆ, ಇನ್ನೂ ಕೆಲ ಭಾಗ ಸಂಸ್ಥೆಗಳು ಹಾಗೂ ದಾನಿಗಳು ನೀಡುತ್ತಿದ್ದಾರೆ. ಈ ಹಣವನ್ನು ಸೋನು ಸೂದ್​ ಸಂಕಷ್ಟದಲ್ಲಿರುವವರ ಸಹಾಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಸೋನು ಸೂದ್ ಅವರಿಗೆ ಕೇವಲ ನಟನೆಯಿಂದ ಮಾತ್ರ ಹಣ ಬರುತ್ತಿಲ್ಲ. ಅವರು ತಮ್ಮದೇ ಆದ ಟ್ರಾವೆಲ್​ ಏಜೆನ್ಸಿ ಹೊಂದಿದ್ದಾರೆ. ಇನ್ನು, ಹೋಟೆಲ್​ ಉದ್ಯಮದಲ್ಲೂ ಅವರು ತೊಡಗಿಕೊಂಡಿದ್ದಾರೆ. ಇದರಿಂದ ಸೋನು ಸೂದ್​ಗೆ ಹಣ ಬರುತ್ತಿದೆ. ಇದರಲ್ಲಿ ಒಂದಷ್ಟು ಹಣವನ್ನು ಅವರು ಸಮಾಜ ಸೇವೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಸೋನು ಸೂದ್​ ಅವರು ಮಾಡುತ್ತಿರುವ ಸಹಾಯದಿಂದ ಅನೇಕರ ಪ್ರಾಣ ಉಳಿದಿದೆ. ಹೀಗಾಗಿ, ಸಾಕಷ್ಟು ಮಂದಿ ಸೋನು ಸೂದ್​ ಅವರನ್ನು ದೇವರ ರೀತಿಯಲ್ಲಿ ಕಾಣುತ್ತಿದ್ದಾರೆ. ಕೆಲವರು ಸೋನು ಸೂದ್​ ಫೋಟೋಗೆ ಹಾಲಿನ ಅಭಿಷೇಕ ಮಾಡಿದರೆ, ಇನ್ನೂ ಕೆಲವರು ಅವರ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುತ್ತಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಸೋನು ಸೂದ್​ ಧನ್ಯವಾದ ಹೇಳಿದ್ದರು.

ಇದನ್ನೂ ಓದಿ: ಸೋನು ಸೂದ್​ ದುಡ್ಡಿಗಾಗಿ ಹಪಾಹಪಿಸುವ ವ್ಯಕ್ತಿ ಆಗಿದ್ದರು; ಇನ್ನೊಂದು ಮುಖ ತೆರೆದಿಟ್ಟ ನಿರ್ಮಾಪಕ

Follow us on

Related Stories

Most Read Stories

Click on your DTH Provider to Add TV9 Kannada