ಸೈಮಾನಲ್ಲಿ ಮಿಂಚಿದ ‘ಆಡುಜೀವಿತಂ’, ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾಗಳ ಪಟ್ಟಿ ಇಲ್ಲಿದೆ

SIIMA 2025 Malayalam: ದುಬೈನಲ್ಲಿ ನಡೆಯುತ್ತಿರುವ ಸೈಮಾ 2025ರಲ್ಲಿ ನಿನ್ನೆ ತಡರಾತ್ರಿ ಅತ್ಯುತ್ತಮ ತಮಿಳು ಮತ್ತು ಮಲಯಾಳಂ ಸಿನಿಮಾಗಳು, ನಟ-ನಟಿಯರು ಮತ್ತು ತಂತ್ರಜ್ಞರುಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ. ಹಲವು ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿಗಳು ದೊರಕಿವೆ. ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾಗಳ ಪಟ್ಟಿ ಇಲ್ಲಿದೆ...

ಸೈಮಾನಲ್ಲಿ ಮಿಂಚಿದ ‘ಆಡುಜೀವಿತಂ’, ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾಗಳ ಪಟ್ಟಿ ಇಲ್ಲಿದೆ
Adujeevitham

Updated on: Sep 07, 2025 | 3:08 PM

ದುಬೈನಲ್ಲಿ ಸೈಮಾ 2025 ನಡೆಯುತ್ತಿದೆ. ಸೆಪ್ಟೆಂಬರ್ 5 ರಂದು ರಾತ್ರಿ ಅತ್ಯುತ್ತಮ ಕನ್ನಡ ಮತ್ತು ತೆಲುಗು ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಕನ್ನಡದಲ್ಲಿ ದುನಿಯಾ ವಿಜಯ್, ಉಪೇಂದ್ರ, ಅತ್ಯುತ್ತಮ ನಟರಾಗಿ ಸುದೀಪ್ ಇನ್ನೂ ಹಲವರಿಗೆ ಪ್ರಶಸ್ತಿ ಘೋಷಣೆ ಆಗಿದೆ. ತೆಲುಗಿನಲ್ಲಿ ‘ಪುಷ್ಪ 2’ ಸಿನಿಮಾ ಹೆಚ್ಚಿನ ಹಾಗೂ ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ನಟ ದುನಿಯಾ ವಿಜಯ್ ಸೇರಿದಂತೆ ಇನ್ನೂ ಕೆಲವರು ಕಾರ್ಯಕ್ರಮ ಆಯೋಜನೆ ಬಗ್ಗೆ, ಪ್ರಶಸ್ತಿಗಳನ್ನು ಬೇಕಾಬಿಟ್ಟಿ ವಿತರಣೆ ಬಗ್ಗೆ ಆರೋಪ ಸಹ ಮಾಡಿದ್ದಾರೆ.

ಅದರ ಹೊರತಾಗಿಯೂ ನಿನ್ನೆ ರಾತ್ರಿ (ಸೆಪ್ಟೆಂಬರ್ 06) ತಮಿಳು ಮತ್ತು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಸಿನಿಮಾ ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ‘ಆಡುಜೀವಿತಂ’ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಹಾಗೂ ಇತ್ತೀಚೆಗೆ ರಾಷ್ಟ್ರಪ್ರಶಸ್ತಿ ಪ್ರಕಟವಾದಾಗಿಯೂ ಬಹಳ ಸುದ್ದಿಯಾಗಿತ್ತು. ‘ಆಡುಜೀವಿತಂ’ ಅಂಥಹಾ ಅತ್ಯುತ್ತಮ ಸಿನಿಮಾಕ್ಕೆ ಒಂದೂ ಪ್ರಶಸ್ತಿ ನೀಡದೇ ಇರುವುದು ಬೇಸರ ತರಿಸಿತ್ತು. ಆದರೆ ಇದೀಗ ಸೈಮಾನಲ್ಲಿ ‘ಆಡುಜೀವಿತಂ’ ಸಿನಿಮಾಕ್ಕೆ ಕೆಲ ಪ್ರಮುಖ ಪ್ರಶಸ್ತಿಗಳು ಲಭಿಸಿರುವುದು ವಿಶೇಷ. ಸೈಮಾ 2025 ರಲ್ಲಿ ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾ, ನಟ-ನಟಿಯರು ಮತ್ತು ತಂತ್ರಜ್ಞರ ಪಟ್ಟಿ ಇಲ್ಲಿದೆ ನೋಡಿ..

ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾಗಳ ಪಟ್ಟಿ

ಅತ್ಯುತ್ತಮ ಸಿನಿಮಾ: ಮಂಜ್ಞುಮೆಲ್ ಬಾಯ್ಸ್

ಅತ್ಯುತ್ತಮ ನಿರ್ದೇಶಕ: ಬ್ಲೆಸ್ಸಿ (ಆಡುಜೀವಿತಂ)

ಅತ್ಯುತ್ತಮ ನಟ: ಪೃಥ್ವಿರಾಜ್ ಸುಕುಮಾರನ್ (ಆಡುಜೀವಿತಂ)

ಅತ್ಯುತ್ತಮ ನಟಿ: ಊರ್ವಶಿ (ಉಳೊಲ್ಲುಕ್ಕು)

ಅತ್ಯುತ್ತಮ ಹಾಸ್ಯ ನಟ: ಶ್ಯಾಮ್ ಮೋಹನ್ (ಪ್ರೇಮಲು)

ಅತ್ಯುತ್ತಮ ವಿಲನ್: ಜಗದೀಶ್ (ಮಾರ್ಕೊ)

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಉನ್ನಿ ಮುಕುಂದನ್

ಇದನ್ನೂ ಓದಿ:ಸೈಮಾ 2025: ಸುದೀಪ್ ಅತ್ಯುತ್ತಮ ನಟ, ಉಪೇಂದ್ರ ಅತ್ಯುತ್ತಮ ನಿರ್ದೇಶನ; ಸಂಪೂರ್ಣ ವಿನ್ನರ್ ಪಟ್ಟಿ

ಅತ್ಯುತ್ತಮ ಹೊಸ ನಿರ್ದೇಶಕ: ಜೋಜು ಜಾರ್ಜ್ (ಪನಿ)

ಅತ್ಯುತ್ತಮ ಹೊಸ ನಟ: ಕೆಆರ್ ಗೋಕುಲ್ (ಆಡುಜೀವಿತಂ)

ಅತ್ಯುತ್ತಮ ಹೊಸ ನಟಿ: ನೇಹಾ ನಳನೀನ್ (ಕ್ವಾಲಬ್)

ಅತ್ಯುತ್ತಮ ಪೋಷಕ ನಟ: ವಿಜಯರಾಘವನ್ (ಕಿಷ್ಕಿಂದ ಕಾಂಡಂ)

ಅತ್ಯುತ್ತಮ ಪೋಷಕ ನಟಿ: ಅಖಿಲಾ ಭಾರ್ಗವನ್ (ಪ್ರೇಮಲು)

ಅತ್ಯುತ್ತಮ ಸಿನಿಮಾಟೊಗ್ರಾಫರ್: ಶೆಹ್ನಾದ್ ಜಲಾಲ್ (ಉಳೋಲ್ಲುಕ್ಕು, ಬ್ರಹ್ಮಯುಗಂ)

ಅತ್ಯುತ್ತಮ ಗೀತ ಸಾಹಿತ್ಯ: ಸುಹೈಲ್ ಕೋಯು (ಪ್ರೇಮಲು)

ಅತ್ಯುತ್ತಮ ಸಂಗೀತ ನಿರ್ದೇಶಕ: ದಿಬು ನಿನಾನ್ ಥಾಮಸ್ (ಎಆರ್​​ಎಂ)

ಅತ್ಯುತ್ತಮ ಗಾಯಕಿ: ವೈಕಾಮ್ ವಿಜಯಲಕ್ಷ್ಮಿ (ಅಂಗು ವಾನ ಕೊನಿಲು-ಎಆರ್​​ಎಂ)

ಅತ್ಯುತ್ತಮ ಗಾಯಕ: ಕೆಎಸ್ ಹರಿಶಂಕರ್ (ಕಿಲಿಯೇ-ಎಆರ್​​ಎಂ)

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Sun, 7 September 25