ಸೆಲೆಬ್ರಿಟಿಗಳ ಮಕ್ಕಳಿಗೆ ಚಿತ್ರರಂಗಕ್ಕೆ ಎಂಟ್ರಿ ಸಿಗೋದು ತುಂಬಾನೇ ಸುಲಭ. ಆದರೆ, ನಂತರ ಎದುರಾಗುವ ಚಾಲೆಂಜ್ಗಳನ್ನು ಸ್ವತಃ ಅವರೇ ಎದುರಿಸಬೇಕು. ಇದಕ್ಕೆಲ್ಲ ಮಹೇಶ್ ಬಾಬು ತಮ್ಮ ಮಗಳು ಸಿತಾರಾ ಘಟ್ಟಮನೇನಿ (Sitara Ghattamaneni) ಅವರನ್ನು ಈಗಿಂದಲೇ ಸಿದ್ಧತೆ ಮಾಡುತ್ತಿರುವಂತಿದೆ. ಇಂದು ಸಿತಾರಾಗೆ 11ನೇ ವರ್ಷದ ಜನ್ಮದಿನ. ಅವರಿಗೆ ಮಹೇಶ್ ಬಾಬು (Mahesh Babu) ಹಾಗೂ ನಮ್ರತಾ ಅವರು ಸೋಶಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹೇಶ್ ಬಾಬು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮಗಳ ಫೋಟೋ ಪೋಸ್ಟ್ ಮಾಡಿರುವ ಅವರು, ‘ಹ್ಯಾಪಿ ಬರ್ತ್ಡೇ ಸ್ಟಾರ್. ನಿನ್ನ ಮನಸ್ಸಿನಲ್ಲಿ ಇರುವುದನ್ನೆಲ್ಲ ಸಾಧಿಸು’ ಎಂದು ಅವರು ಶುಭಕೋರಿದ್ದಾರೆ.
ಮಹೇಶ್ ಬಾಬು ಹಾಗೂ ನಮ್ರತಾ ಮಗಳು ಎನ್ನುವ ಕಾರಣಕ್ಕೆ ಸಿತಾರಾಗೆ ಸಖತ್ ಜನಪ್ರಿಯತೆ ಸಿಕ್ಕಿದೆ. ಇದನ್ನು ಅವರು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಿತಾರಾಗೆ ಈಗಿನ್ನೂ 11 ವರ್ಷ ವಯಸ್ಸು. ಈ ವಯಸ್ಸಿನಲ್ಲೇ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸ್ಟಾರ್ ಆಗಿದ್ದಾರೆ.
ಸಣ್ಣ ವಯಸ್ಸಿನಲ್ಲೇ ಸಿತಾರಾ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇದಕ್ಕೆ ಲಕ್ಷಾಂತರ ಮಂದಿ ಸಬ್ಸ್ಕ್ರೈಬರ್ಸ್ ಇದ್ದಾರೆ. ಮಹೇಶ್ ಬಾಬು, ರಶ್ಮಿಕಾ ಮಂದಣ್ಣ ಸೇರಿ ಅನೇಕ ಸೆಲೆಬ್ರಿಟಿಗಳು ಈ ಯೂಟ್ಯೂಬ್ ಚಾನೆಲ್ಗೆ ಅತಿಥಿಗಳಾಗಿ ಬಂದಿದ್ದರು. ಸಣ್ಣ ವಯಸ್ಸಿನಲ್ಲೇ ಸಿತಾರಾ ಪ್ರಮೋಷನಲ್ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ‘ಸರ್ಕಾರು ವಾರಿ ಪಾಟ’ದ ಪ್ರಮೋಷನಲ್ ಸಾಂಗ್ನಲ್ಲಿ ಅವರು ಹೆಜ್ಜೆ ಹಾಕಿ ಗಮನ ಸೆಳೆದಿದ್ದರು.
ಇದನ್ನೂ ಓದಿ: ಮಹೇಶ್ ಬಾಬು ಮಗಳು ಸಿತಾರಾ ಘಟ್ಟಮನೇನಿ ನಿಜವಾದ ವಯಸ್ಸೆಷ್ಟು?
ಸಿನಿಮಾ ರಂಗಕ್ಕೆ ಬರುವ ಆಸೆ ಸಿತಾರಾಗೆ ಇದೆ. ಆದರೆ, ಈ ವಿಚಾರದಲ್ಲಿ ಮಹೇಶ್ ಬಾಬು ಅವರಾಗಲೀ, ನಮ್ರತಾ ಆಗಲೀ ನಿರ್ಧಾರ ತೆಗೆದುಕೊಳ್ಳುವುದಿಲ್ಲವಂತೆ. ಈ ಬಗ್ಗೆ ಸಿತಾರಾ ಅವರೇ ಡಿಸೈಡ್ ಮಾಡಬೇಕಿದೆ. ಸಿತಾರಾ ಇತ್ತೀಚೆಗೆ ಜ್ಯುವೆಲರಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅವರ ಫೋಟೋ ನ್ಯೂಯಾರ್ಕ್ನ ಟೈಮ್ಸ್ಕ್ವೇರ್ನಲ್ಲಿ ರಾರಾಜಿಸಿತ್ತು. ಸಿತಾರಾ ಜ್ಯುವೆಲರಿ ಜಾಹೀರಾತಿಗಾಗಿ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಇದನ್ನು ಅವರು ಚ್ಯಾರಿಟಿ ಒಂದಕ್ಕೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ