Sitara Ghattamaneni: ಮಹೇಶ್ ಬಾಬು ಮಗಳು ಸಿತಾರಾ ಘಟ್ಟಮನೇನಿ ನಿಜವಾದ ವಯಸ್ಸೆಷ್ಟು?
ಸಿತಾರಾ ಘಟ್ಟಮನೇನಿ ಅವರು ಭವಿಷ್ಯದಲ್ಲಿ ಒಳ್ಳೆಯ ನಾಯಕಿ ಆಗುತ್ತಾಳೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ವಿಚಾರವನ್ನು ಮಹೇಶ್ ಬಾಬು ಅಭಿಮಾನಿಗಳು ಯಾವುದೇ ಅನುಮಾನ ಇಲ್ಲದೆ ಒಪ್ಪಿಕೊಳ್ಳುತ್ತಾರೆ.
Updated on: Jul 08, 2023 | 6:30 AM

ನಟ ಮಹೇಶ್ ಬಾಬು ಅವರ ಮಗಳು ಸಿತಾರಾ ಘಟ್ಟಮನೇನಿ ಇತ್ತೀಚೆಗೆ ಸಖತ್ ಸುದ್ದಿ ಆಗುತ್ತಿದ್ದಾಳೆ. ಅವಳು ಇತ್ತೀಚೆಗೆ ಜ್ಯುವೆಲರಿ ಜಾಹೀರಾತಿನಲ್ಲಿ ನಟಿಸಿದ್ದು ಸಖತ್ ಸುದ್ದಿ ಆಗಿತ್ತು.

ಸಿತಾರಾ ಘಟ್ಟಮನೇನಿ ಅವರು ಭವಿಷ್ಯದಲ್ಲಿ ಒಳ್ಳೆಯ ನಾಯಕಿ ಆಗುತ್ತಾಳೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ವಿಚಾರವನ್ನು ಮಹೇಶ್ ಬಾಬು ಅಭಿಮಾನಿಗಳು ಯಾವುದೇ ಅನುಮಾನ ಇಲ್ಲದೆ ಒಪ್ಪಿಕೊಳ್ಳುತ್ತಾರೆ.

ಸಿತಾರಾ ಇತ್ತೀಚೆಗೆ ಜ್ಯುವೆಲರಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಆಭರಣದ ಬ್ರ್ಯಾಂಡ್ನ ಪ್ರಚಾರಕ್ಕೆ ಅವರು 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಸಿತಾರಾಗೆ ಈಗ ವಯಸ್ಸು ಕೇವಲ 10! ಜುಲೈ 20ಕ್ಕೆ ಅವರಿಗೆ 11 ವರ್ಷ ತುಂಬಲಿದೆ. ಇಷ್ಟು ಸಣ್ಣ ವಯಸ್ಸಿನಲ್ಲೇ ಅವರು ಇಷ್ಟು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿರುವುದು ನಿಜಕ್ಕೂ ದೊಡ್ಡ ಸಾಧನೆಯೇ.

ಅನೇಕ ಸೆಲೆಬ್ರಿಟಿ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಸಿತಾರಾ ಕೂಡ ಸಣ್ಣ ವಯಸ್ಸಿಗೇ ಚಿತ್ರರಂಗಕ್ಕೆ ಬಂದರೂ ಅಚ್ಚರಿ ಏನಿಲ್ಲ.

‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ಬರುವ ಪ್ರಮೋಷನಲ್ ಹಾಡಿಗೆ ಸಿತಾರಾ ಹೆಜ್ಜೆ ಹಾಕಿದ್ದರು. ಈ ಮೂಲಕ ಗಮನ ಸೆಳೆದಿದ್ದರು.

ಅಭಿಮಾನಿಗಳಿಗಾಗಿ ಆಗಾಗ ಸಿತಾರಾ ಫೋಟೋ ಹಂಚಿಕೊಳ್ಳುತ್ತಾರೆ. ಈ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತದೆ.



















