ಜಾಗತಿಕ ಫ್ಯಾಷನ್ ವೇದಿಕೆಯಲ್ಲಿ ಮಿಂಚಿದ ಶ್ರೀಲೀಲಾ: ವಿದೇಶಿ ಬ್ರ್ಯಾಂಡಿಗೆ ರಾಯಭಾರಿ

Sreeleela fashion: ನಟಿ ಶ್ರೀಲೀಲಾ, ಸ್ಯಾಂಡಲ್​​ವುಡ್, ಟಾಲಿವುಡ್ ಬಳಿಕ ಈಗ ಬಾಲಿವುಡ್ ಮತ್ತು ಕಾಲಿವುಡ್​​ಗಳಲ್ಲಿ ಸಖತ್ ಹೆಸರು ಮಾಡುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತುಗಲ್ಲಿಯೂ ಬ್ಯುಸಿ ಆಗಿದ್ದ ಈ ಚೆಲುವೆ ಇದೀಗ ಫ್ಯಾಷನ್ ಲೋಕಕ್ಕೂ ಕಾಲಿರಿಸಿದ್ದಾರೆ. ಹಿಂದೆಲ್ಲ ಕೆಲ ಸಣ್ಣ-ಪುಟ್ಟ ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡಿದ್ದ ಶ್ರೀಲೀಲಾ ಇದೀಗ ವಿಶ್ವ ಪ್ರಸಿದ್ಧ ಫ್ಯಾಷನ್ ಶೋ ಆಗಿರುವ ಮಿಲಾನ್ ಫ್ಯಾಷನ್ ವೀಕ್​​​ನ ವೇದಿಕೆಯ ಮೇಲೆ ಬೆಕ್ಕಿನ ನಡಿಗೆ ನಡೆದಿದ್ದಾರೆ.

ಜಾಗತಿಕ ಫ್ಯಾಷನ್ ವೇದಿಕೆಯಲ್ಲಿ ಮಿಂಚಿದ ಶ್ರೀಲೀಲಾ: ವಿದೇಶಿ ಬ್ರ್ಯಾಂಡಿಗೆ ರಾಯಭಾರಿ
Sreeleela In Milan

Updated on: Mar 01, 2026 | 4:26 PM

ಬೆಂಗಳೂರಿನ ಚೆಲುವೆ ನಟಿ ಶ್ರೀಲೀಲಾ (Sreeleela), ಸ್ಯಾಂಡಲ್​​ವುಡ್, ಟಾಲಿವುಡ್ ಬಳಿಕ ಈಗ ಬಾಲಿವುಡ್ ಮತ್ತು ಕಾಲಿವುಡ್​​ಗಳಲ್ಲಿ ಸಖತ್ ಹೆಸರು ಮಾಡುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತುಗಲ್ಲಿಯೂ ಬ್ಯುಸಿ ಆಗಿದ್ದ ಈ ಚೆಲುವೆ ಇದೀಗ ಫ್ಯಾಷನ್ ಲೋಕಕ್ಕೂ ಕಾಲಿರಿಸಿದ್ದಾರೆ. ಹಿಂದೆಲ್ಲ ಕೆಲ ಸಣ್ಣ-ಪುಟ್ಟ ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡಿದ್ದ ಶ್ರೀಲೀಲಾ ಇದೀಗ ವಿಶ್ವ ಪ್ರಸಿದ್ಧ ಫ್ಯಾಷನ್ ಶೋ ಆಗಿರುವ ಮಿಲಾನ್ ಫ್ಯಾಷನ್ ವೀಕ್​​​ನ ವೇದಿಕೆಯ ಮೇಲೆ ಬೆಕ್ಕಿನ ನಡಿಗೆ ನಡೆದಿದ್ದಾರೆ.

ಇತ್ತೀಚೆಗೆ ಇಟಲಿಯ ಮಿಲಾನ್‌ನಲ್ಲಿ ನಡೆದ ಪ್ರತಿಷ್ಠಿತ ‘ಮಿಲಾನ್ ಫ್ಯಾಶನ್ ವೀಕ್’ನಲ್ಲಿ ಪಾಲ್ಗೊಂಡು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಜಪಾನ್‌ನ ಪ್ರಸಿದ್ಧ ಬ್ರ್ಯಾಂಡ್ ‘ಒನಿಟ್ಸುಕಾ ಟೈಗರ್’ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೀಲೀಲಾ ವಿಭಿನ್ನ ಹಾಗೂ ಸ್ಟೈಲಿಶ್ ಉಡುಪಿನಲ್ಲಿ ಮಿಂಚಿದರು. ಕಪ್ಪು ಬಣ್ಣದ ಶಾರ್ಟ್ ಡ್ರೆಸ್ ಹಾಗೂ ಕಿತ್ತಳೆ ಬಣ್ಣದ ಓವರ್‌ಕೋಟ್ ಧರಿಸಿ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದ ಶ್ರೀಲೀಲಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಮಿಲಾನ್‌ನ ಐತಿಹಾಸಿಕ ಬೀದಿಗಳನ್ನು ತಮ್ಮ ಫ್ಯಾಶನ್ ರನ್‌ವೇ ಆಗಿ ಬಳಸಿಕೊಂಡ ನಟಿ, ಸೌತ್ ಸಿನಿಮಾರಂಗದ ಗ್ಲಾಮರ್ ಅನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಈ ಹಿಂದೆ ‘ಒನಿಟ್ಸುಕಾ ಟೈಗರ್’ ಬ್ರ್ಯಾಂಡ್‌ನ ಭಾರತೀಯ ರಾಯಭಾರಿಯಾಗಿ ಕನ್ನಡದವರೇ ಆಗಿರುವ ರಶ್ಮಿಕಾ ಮಂದಣ್ಣ ಗುರುತಿಸಿಕೊಂಡಿದ್ದರು. ಆದರೆ ಈ ಬಾರಿ ಮಿಲಾನ್‌ನಲ್ಲಿ ಶ್ರೀಲೀಲಾ ಕಾಣಿಸಿಕೊಂಡಿರುವುದು, ರಶ್ಮಿಕಾ ಅವರ ಸ್ಥಾನವನ್ನು ಶ್ರೀಲೀಲಾ ಪಡೆದಿದ್ದಾರೆಯೇ ಎಂಬ ಅನುಮಾನ ಮೂಡಿಸಿದೆ. ಹಲವು ವರದಿಗಳ ಪ್ರಕಾರ, ಬ್ರ್ಯಾಂಡ್ ತನ್ನ ಪ್ರಚಾರಕ್ಕಾಗಿ ಹೊಸ ಮುಖವನ್ನು ಪರಿಚಯಿಸಲು ಶ್ರೀಲೀಲಾ ಅವರನ್ನು ಆರಿಸಿಕೊಂಡಿದೆ ಎನ್ನಲಾಗುತ್ತಿದೆ. ಇದರಿಂದಾಗಿ ರಶ್ಮಿಕಾ ಮತ್ತು ಶ್ರೀಲೀಲಾ ನಡುವೆ ವೃತ್ತಿಪರ ಪೈಪೋಟಿ ಜೋರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ:ವೈದ್ಯೆಯಾಗಿ ಪ್ರತಿಜ್ಞೆ ಸ್ವೀಕರಿಸಿದ ನಟಿ ಶ್ರೀಲೀಲಾ: ವಿಡಿಯೋ

ಕೇವಲ ಫ್ಯಾಶನ್ ಲೋಕದಲ್ಲಷ್ಟೇ ಅಲ್ಲದೆ, ಸಿನಿಮಾರಂಗದಲ್ಲೂ ಶ್ರೀಲೀಲಾ ಭರ್ಜರಿ ಯಶಸ್ಸು ಕಾಣುತ್ತಿದ್ದಾರೆ. ಸದ್ಯ ಅವರು ಪವನ್ ಕಲ್ಯಾಣ್ ಅಭಿನಯದ ಹೈ-ವೋಲ್ಟೇಜ್ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡುಗಳು ಈಗಾಗಲೇ ದೊಡ್ಡ ಹಿಟ್ ಆಗಿದ್ದು, ಶ್ರೀಲೀಲಾ ಅವರ ನೃತ್ಯ ಮತ್ತು ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾನಲ್ಲಿಯೂ ಅವರು ರಶ್ಮಿಕಾಗೆ ಸಖತ್ ಪೈಪೋಟಿಯನ್ನೇ ನೀಡುತ್ತಿದ್ದಾರೆ. ರಶ್ಮಿಕಾ ಬೇಡಿಕೆಯಲ್ಲಿದ್ದ ಟಾಲಿವುಡ್​​ ಮತ್ತು ಬಾಲಿವುಡ್ ಎರಡರಲ್ಲೂ ಶ್ರೀಲೀಲಾ ಮುನ್ನುಗ್ಗುತ್ತಿದ್ದು, ರಶ್ಮಿಕಾರ ಅವಕಾಶಗಳನ್ನೂ ಕಸಿದುಕೊಳ್ಳುತ್ತಿದ್ದಾರೆ. ಇದೀಗ ಫ್ಯಾಷನ್ ಬ್ರ್ಯಾಂಡ್​ ಅನ್ನೂ ಕಸಿದುಕೊಂಡಿದ್ದಾರೆ.

ಶ್ರೀಲೀಲಾ ಪ್ರಸ್ತುತ ‘ಉಸ್ತಾದ್ ಭಗತ್ ಸಿಂಗ್’, ಬಾಲಿವುಡ್​​ನ ‘ಆಶಿಖಿ 3’, ಸೈಫ್ ಅಲಿ ಖಾನ್ ಪುತ್ರನ ಜೊತೆಗೆ ಹೊಸ ಸಿನಿಮಾ, ರಣ್ವೀರ್ ಸಿಂಗ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ತಮಿಳಿನಲ್ಲಿ ಸಾಯಿ ಪಲ್ಲವಿ ಜೊತೆಗೆ ಒಂದು ಸಿನಿಮಾ ಮತ್ತು ಡ್ರ್ಯಾಗನ್ ನಾಯಕ ಪ್ರದೀಪ್ ಅವರ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us