
‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ತೆರೆಗೆ ಬರುವುದಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಚಿತ್ರ ಸೃಷ್ಟಿಸಿರುವ ಹೈಪ್ ತುಂಬಾನೇ ದೊಡ್ಡ ಮಟ್ಟದಲ್ಲಿದೆ. ಈಗಾಗಲೇ ಹಲವು ಶೋಗಳು ಸೋಲ್ಡ್ಔಟ್ ಆಗಿದೆ. 3ಡಿ ಅವತರಣಿಕೆಗೆ ಹೆಚ್ಚು ಬೇಡಿಕೆ ಸೃಷ್ಟಿ ಆಗಿದೆ. ಅನೇಕ ಸೆಲೆಬ್ರಿಟಿಗಳು ಕಿಚ್ಚ ಸುದೀಪ್ಗೆ ವಿಶ್ ಮಾಡಿದ್ದಾರೆ. ‘ಬಾಹುಬಲಿ’, ‘ಆರ್ಆರ್ಆರ್’ ನಂತಹ ಹಿಟ್ ಚಿತ್ರಗಳನ್ನು ನೀಡಿದ ತೆಲುಗು ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಕೂಡ ಕಿಚ್ಚ ಸುದೀಪ್ಗೆ ವಿಶ್ ಮಾಡಿದ್ದಾರೆ.
ಸುದೀಪ್ ಹಾಗೂ ರಾಜಮೌಳಿ ನಡುವೆ ಒಳ್ಳೆಯ ಬಾಂಧವ್ಯ ಇದೆ. ರಾಜಮೌಳಿ ನಿರ್ದೇಶನದ ‘ಈಗ’ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಮಾಡಿದ್ದ ನೆಗೆಟಿವ್ ಶೇಡ್ನ ಪಾತ್ರ ಸಾಕಷ್ಟು ಹೈಲೈಟ್ ಆಗಿತ್ತು. ಆ ಬಳಿಕ ‘ಬಾಹುಬಲಿ’ ಚಿತ್ರದಲ್ಲಿ ಸುದೀಪ್ ಒಂದು ಅತಿಥಿ ಪಾತ್ರ ಮಾಡಿದ್ದರು. ಇವರ ಬಾಂಧವ್ಯ ಈಗಲೂ ಮುಂದುವರಿದಿದೆ. ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ಗೂ ಒಂದು ದಿನ ಮೊದಲು (ಜುಲೈ 27) ರಾಜಮೌಳಿ ಅವರು ಸುದೀಪ್ಗೆ ವಿಶ್ ಮಾಡಿದ್ದಾರೆ.
‘ಪ್ರಯೋಗಗಳನ್ನು ಮಾಡುವಲ್ಲಿ ಮತ್ತು ಸವಾಲುಗಳನ್ನು ಸ್ವೀಕರಿಸುವಲ್ಲಿ ಸುದೀಪ್ ಯಾವಾಗಲೂ ಮೊದಲಿಗರು. ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಅವರು ಏನು ಮಾಡಿದ್ದಾರೆ ಎಂಬುದನ್ನು ನೋಡಲು ಕಾತುರನಾಗಿದ್ದೇನೆ. ವಿಶ್ಯುವಲ್ಸ್ ಅದ್ಭುತವಾಗಿದೆ. ಸುದೀಪ್ ಹಾಗೂ ಅವರ ತಂಡಕ್ಕೆ ನನ್ನ ಶುಭಾಶಯ’ ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಪ್ರೀ-ರಿಲೀಸ್ನಲ್ಲಿ ಮಗಳಿಗಾಗಿ ಸುಮಧುರವಾಗಿ ಹಾಡು ಹಾಡಿದ ಸುದೀಪ್; ಇಲ್ಲಿದೆ ವಿಡಿಯೋ
‘ವಿಕ್ರಾಂತ್ ರೋಣ’ ಸಿನಿಮಾ ವಿಶ್ವಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ ಮಾತ್ರವಲ್ಲದೆ, ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ರಾಜಮೌಳಿ ಅವರು ವಿಶ್ವಾದ್ಯಂತ ಖ್ಯಾತಿ ಹೊಂದಿದ್ದಾರೆ. ಅವರು ಒಂದು ಟ್ವೀಟ್ನಿಂದ ‘ವಿಕ್ರಾಂತ್ ರೋಣ’ ತಂಡಕ್ಕೆ ಹೊಸ ಬಲ ಸಿಕ್ಕಂತೆ ಆಗಿದೆ.
‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜಾಕ್ ಮಂಜು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮುಂಜಾನೆ 6 ಗಂಟೆಯಿಂದಲೇ ಶೋಗಳು ಪ್ರದರ್ಶನ ಕಾಣುತ್ತಿದೆ.
Published On - 10:00 pm, Wed, 27 July 22