‘ನವೆಂಬರ್ 5ಕ್ಕಾಗಿ ಕಾಯುತ್ತಿರುವೆ’: ‘ರಾಮಾಯಣ’ದ ಬಗ್ಗೆ ರಾಜಮೌಳಿ ಟ್ವೀಟ್

Ramayana movie:ನವೆಂಬರ್ 5ಕ್ಕೆ ‘ರಾಮಾಯಣ’ ಸಿನಿಮಾ ರಿಲೀಸ್ ಆಗುತ್ತಿದ್ದು, ಈ ಸಿನಿಮಾನ್ನು ಹಾಲಿವುಡ್​​ ಲೆವೆಲ್​​ನಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಜೋರಾಗಿ ಮಾಡುತ್ತಿದ್ದು, ದೇಶದ ಹಲವು ನಗರಗಳಿಗೆ ಹೋಗಿ ಸಿನಿಮಾದ ಪರವಾಗಿ ಪ್ರಚಾರ ಮಾಡಲಾಗುತ್ತಿದೆ. ಹಲವು ದಿಗ್ಗಜ ನಟ-ನಟಿಯರು ಸಹ ಸಿನಿಮಾದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ಎಸ್​​ಎಸ್ ರಾಜಮೌಳಿ ಸಹ ಸಿನಿಮಾ ಬಗ್ಗೆ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.

‘ನವೆಂಬರ್ 5ಕ್ಕಾಗಿ ಕಾಯುತ್ತಿರುವೆ’: ‘ರಾಮಾಯಣ’ದ ಬಗ್ಗೆ ರಾಜಮೌಳಿ ಟ್ವೀಟ್
Rajamouli Sriram

Updated on: Oct 17, 2026 | 7:00 PM

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾ ಬಗ್ಗೆ ರಾಜಮೌಳಿ ಟ್ವೀಟ್
  • ರಿಲೀಸ್​​ಗಾಗಿ ಕಾಯುತ್ತಿದ್ದೇನೆಂದ ರಾಜಮೌಳಿ
  • ಸಿನಿಮಾ ಬಗ್ಗೆ ರಾಜಮೌಳಿ ಹೇಳಿದ್ದೇನು?

ಯಶ್, ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟನೆ ಮಾಡಿರುವ ‘ರಾಮಾಯಣ’ ಪ್ರಸ್ತುತ ಭಾರತೀಯ ಚಿತ್ರರಂಗದ ದೊಡ್ಡ ಸಿನಿಮಾ. ನವೆಂಬರ್ 5ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಈ ಸಿನಿಮಾನ್ನು ಹಾಲಿವುಡ್​​ ಲೆವೆಲ್​​ನಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಜೋರಾಗಿ ಮಾಡುತ್ತಿದ್ದು, ದೇಶದ ಹಲವು ನಗರಗಳಿಗೆ ಹೋಗಿ ಸಿನಿಮಾದ ಪರವಾಗಿ ಪ್ರಚಾರ ಮಾಡಲಾಗುತ್ತಿದೆ. ಹಲವು ದಿಗ್ಗಜ ನಟ-ನಟಿಯರು ಸಹ ಸಿನಿಮಾದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ಎಸ್​​ಎಸ್ ರಾಜಮೌಳಿ ಸಹ ಸಿನಿಮಾ ಬಗ್ಗೆ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.

‘ರಾಮಾಯಣ’ ಸಿನಿಮಾದ ಬಗ್ಗೆ ಟ್ವೀಟ್ ಮಾಡಿರುವ ರಾಜಮೌಳಿ, ‘ಪ್ರತಿ ಭಾರತೀಯ ನಿರ್ದೇಶಕನು ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಹೇಳಬೇಕು ಎಂದು ಕನಸು ಕಾಣುವ ಕಥೆ ರಾಮಾಯಣ. ನಿತೇಶ್ ತಿವಾರಿ ಮತ್ತು ನಮಿತ್ ಮಲ್ಹೋತ್ರಾ ಅವರು ಈ ಮಹಾಕಾವ್ಯವನ್ನು ಇಷ್ಟು ಬೃಹತ್ ಪ್ರಮಾಣದಲ್ಲಿ ತೆರೆಗೆ ತರುತ್ತಿರುವುದನ್ನು ನೋಡುವುದೇ ಒಂದು ದೊಡ್ಡ ಆನಂದ. ಚಿತ್ರದ ಪ್ರತಿಯೊಬ್ಬ ನಟರೂ ಈ ಕಲಾತೀತ ಪಾತ್ರಗಳಿಗೆ ಅದ್ಭುತವಾಗಿ ಜೀವ ತುಂಬಿದ್ದಾರೆ. ನವೆಂಬರ್ 5 ರ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದೇನೆ. ಇಡೀ ತಂಡಕ್ಕೆ ನನ್ನ ಶುಭ ಹಾರೈಕೆಗಳು’ ಎಂದು ರಾಜಮೌಳಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ರಾಜಮೌಳಿ ಅವರು ಖುದ್ದು ಪೌರಾಣಿಕ ಕತೆಗಳನ್ನು ತೆರೆಗೆ ತರುವುದರಲ್ಲಿ ನಿಸ್ಸೀಮರು. ಪೌರಾಣಿಕ ಕತೆಗಳನ್ನು ತೆರೆಗೆ ತಂದು ವಿಶ್ವಮಟ್ಟದಲ್ಲಿ ಸಿನಿಮಾ ಅನ್ನು ಹಿಟ್ ಮಾಡಬಹುದು ಎಂದು ತೋರಿಸಿಕೊಟ್ಟಿದ್ದೇ ರಾಜಮೌಳಿ, ‘ಬಾಹುಬಲಿ’ ಮೂಲಕ. ಖುದ್ದು ರಾಜಮೌಳಿ ಅವರು ತಮಗೆ ‘ಮಹಾಭಾರತ’ ಸಿನಿಮಾ ಅನ್ನು ತೆರೆಗೆ ತರುವ ಆಸೆ ಇದೆ ಎಂದು ಹಿಂದೆ ಹೇಳಿದ್ದರು. ಮಾತ್ರವಲ್ಲದೆ, ಪುರಾಣದ ಹಲವು ಪಾತ್ರಗಳ ಬಗ್ಗೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ್ದರು. ಈಗ ರಾಜಮೌಳಿ ನಿರ್ದೇಶನ ಮಾಡುತ್ತಿರುವ ‘ವಾರಣಾಸಿ’ ಸಿನಿಮಾನಲ್ಲೂ ಸಹ ರಾಮಾಯಣದ ಕತೆಯ ಎಳೆ ಇದೆ. ‘ರಾಮಾಯಣ’ ಪೋರ್ಷನ್ ಅನ್ನು ಭಾರಿ ಅದ್ಧೂರಿಯಾಗಿ ರಾಜಮೌಳಿ ತೆರೆಗೆ ತಂದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಪ್ರೇಮದ ಊರಲಿ’ ಚಿತ್ರತಂಡವ ಭೇಟಿಯಾಗಿ ಅಭಿನಂದಿಸಿದ ಯಶ್-ರಾಧಿಕಾ: ಚಿತ್ರಗಳು

ಇನ್ನು ‘ರಾಮಾಯಣ’ ಸಿನಿಮಾನಲ್ಲಿ ಯಶ್ ರಾವಣನಾಗಿ, ರಣ್​​ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ, ಹನುಮಂತನಾಗಿ ಸನ್ನಿ ಡಿಯೋಲ್ ನಟನೆ ಮಾಡಿದ್ದಾರೆ. ಇವರು ಮಾತ್ರವೇ ಅಲ್ಲದೆ, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಇನ್ನೂ ಹಲವಾರು ಅದ್ಭುತ ಕಲಾವಿದರು ಈ ಸಿನಿಮಾನಲ್ಲಿ ಕೆಲಸ ಮಾಡಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಮೊದಲ ಭಾಗ ನವೆಂಬರ್ 5ಕ್ಕೆ ತೆರೆಗೆ ಬರಲಿದೆ. ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us