ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವತಃ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವರು ನೇತಾಜಿ ಸುಭಾಷ್ ಚಂದ್ರ ಬೋಸ್. ಇವರ ಬಗ್ಗೆ ಸಿನಿಮಾ ಹಾಗೂ ವೆಬ್ ಸೀರಿಸ್ಗಳು ಸಿದ್ಧಗೊಂಡಿವೆ. ಈಗ ಇವರ ಬಗ್ಗೆ ಕನ್ನಡದಲ್ಲಿ ಧಾರಾವಾಹಿ ಕೂಡ ಬರುತ್ತಿದೆ ಅನ್ನೋದು ವಿಶೇಷ.
ಹೌದು, ಜೀ ಕನ್ನಡ ವಾಹಿನಿಯಲ್ಲಿ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಧಾರಾವಾಹಿ ಜೂನ್ 7ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5ರಿಂದ 6 ಗಂಟೆವರೆಗೆ ಪ್ರಸಾರವಾಗಲಿದೆ. ಈ ಧಾರಾವಾಹಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಧೀರ ನಾಯಕನ ಐತಿಹಾಸಿಕ ಕಥೆಯನ್ನು ಬಿಂಬಿಸಲಿದೆ.
ಅಂಬೇಡ್ಕರ್ ಧಾರಾವಾಹಿಯನ್ನು ಜೀ ಕನ್ನಡ ಈ ಮೊದಲು ಪ್ರಸಾರ ಮಾಡಿತ್ತು. ಈ ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈಗ ಸುಭಾಷ್ ಚಂದ್ರ ಬೋಸ್ ಅವರ ಜೀವನಗಾಥೆಯನ್ನು ಮನರಂಜನೆ ರೀತಿಯಲ್ಲಿ ಕನ್ನಡ ಪ್ರೇಕ್ಷಕರ ಮುಂದಿಡುತ್ತಿದೆ.
ಒರಿಸ್ಸಾದ ಕಟಕ್ನಲ್ಲಿ ಜನಿಸಿದ ಸುಭಾಷ್ಚಂದ್ರ ಬೋಸ್ ಸ್ವಾತಂತ್ರ್ಯ ಹೋರಾಟದಲ್ಲಿ ತುಂಬಾನೇ ಮಹತ್ವ ವಹಿಸಿದ್ದಾರೆ. ಜರ್ಮನಿಯ ನೆರವಿನೊಂದಿಗೆ ಇಂಡಿಯನ್ ನ್ಯಾಷನಲ್ ಆರ್ಮಿ ಕಟ್ಟಿದರು. ಅಹಿಂಸಾ ಹೋರಾಟ ವಿರೋಧಿಸಿ ಸ್ವಂತ ಸೇನೆ ಕಟ್ಟಿದರು. ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತರಾದರು ಎಂದು ನಂಬಲಾಗಿದೆ. ಆದರೆ ಅದನ್ನು ಒಪ್ಪದೇ ಇರುವವರೂ ಬಹಳ ಮಂದಿ ಇದ್ದಾರೆ.
ಕನ್ನಡದಲ್ಲಿ ಸುಭಾಷ್ ಚಂದ್ರರರ ಬಗ್ಗೆ ಧಾರಾವಾಹಿ ಪ್ರಸಾರವಾಗುತ್ತಿರುವುದಕ್ಕೆ ಕರ್ನಾಟಕದ ಮೂಲೆ ಮೂಲೆಗೂ ಅವರ ಕಥೆ ತಲುಪಲಿದೆ. ಕನ್ನಡದಲ್ಲೇ ಈ ಧಾರಾವಾಹಿ ಬರುತ್ತಿರುವುದಕ್ಕೆ ಅನೇಕರಿಗೆ ಸುಲಭವಾಗಿ ಅರ್ಥ ಕೂಡ ಆಗಲಿದೆ.
ಇದನ್ನೂ ಓದಿ: ವೆಬ್ ಸಿರೀಸ್ ರೂಪದಲ್ಲಿ ಬರಲಿದೆ ಕನ್ನಡದ ಸೂಪರ್ ಹಿಟ್ ಧಾರಾವಾಹಿ ಮಾಯಾಮೃಗ; ಪ್ರೇಕ್ಷಕರಿಗೆ ಗುಡ್ ನ್ಯೂಸ್