ಫ್ರೆಂಡ್ಶಿಪ್ ಡೇ ಬಂದೇ ಬಿಟ್ಟಿದೆ. ಈ ಬಾರಿ ಆಗಸ್ಟ್ 4 ಗೆಳೆಯರ ದಿನಾಚರಣೆ. ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಗೆಳೆಯರ ದಿನಾಚರಣೆ ಆಗಿ ಆಚರಿಸುತ್ತಾರೆ. ಅನೇಕರು ಗೆಳೆಯರಿಗೆ ವಿಶ್ ಮಾಡಲು ರೆಡಿ ಆಗಿದ್ದಾರೆ. ಈ ಮಧ್ಯೆ ಕೆಲವರು ಮುರಿದು ಬಿದ್ದ ಗೆಳೆಯನ ನೆನಪಿಸಿಕೊಂಡು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಸ್ಯಾಂಡಲ್ವುಡ್ನ ಸುದೀಪ್ ಹಾಗೂ ದರ್ಶನ್ ಗೆಳೆತನ ಕೂಡ ಒಂದು. ಇವರು ಈ ಮೊದಲು ಒಳ್ಳೆಯ ಗೆಳೆಯರಾಗಿದ್ದರು. ಆದರೆ, ಇವರ ಫ್ರೆಂಡ್ಶಿಪ್ ಕೊನೆ ಆಯಿತು. ಇದಕ್ಕೆ ಕಾರಣ ಸುದೀಪ್ ಅವರು ನೀಡಿದ್ದ ಹೇಳಿಕೆ. ಇವರ ಫ್ರೆಂಡ್ಶಿಪ್ ಮುರಿದು ಬೀಳುವುದಕ್ಕೂ ಮೊದಲು ದರ್ಶನ್ ಅವರು ಸುದೀಪ್ ಬಗ್ಗೆ ಅನೇಕ ಬಾರಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.
ದರ್ಶನ್ ಹಾಗೂ ಸುದೀಪ್ ಚಿತ್ರರಂಗಕ್ಕೆ ಬಂದಾಗಿನಿಂದಲೂ ಗೆಳೆಯರು. ‘ಮೆಜೆಸ್ಟಿಕ್ ಚಿತ್ರದ ಆಫರ್ ಮೊದಲು ಬಂದಿದ್ದು ನನಗೆ. ನಾನು ಅದನ್ನು ದರ್ಶನ್ಗೆ ಬಿಟ್ಟುಕೊಟ್ಟೆ’ ಎಂದು ಹೇಳಿದ್ದರು ಸುದೀಪ್. ಇದು ದರ್ಶನ್ ಕೋಪಕ್ಕೆ ಕಾರಣ ಆಗಿತ್ತು. ಅಂದೇ ದರ್ಶನ್ ಅವರು ಟ್ವೀಟ್ ಮಾಡಿದರು. ‘ನಾನು-ಸುದೀಪ್ ಗೆಳೆಯರಲ್ಲ. ಚಿತ್ರರಂಗದಲ್ಲಿರೋ ಇಬ್ಬರು ಕಲಾವಿದರಷ್ಟೇ’ ಎಂದಿದ್ದರು.
ಇದನ್ನೂ ಓದಿ:Darshna-Sudeep: ‘ಹೆಬ್ಬುಲಿ’ ರೀ ರಿಲೀಸ್ ದರ್ಶನ್ಗೆ ಟಾಂಗ್ ಕೊಟ್ಟ ಕಿಚ್ಚನ ಅಭಿಮಾನಿಗಳು
ಆದರೆ, ಮೊದಲು ಇಬ್ಬರ ಮಧ್ಯೆ ಈ ರೀತಿ ಇರಲಿಲ್ಲ. ‘ಬೆಸ್ಟ್ ಫ್ರೆಂಡ್ ಯಾರು’ ಎಂದು ‘ಅಂಬರೀಷ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ದರ್ಶನ್ಗೆ ಕೇಳಲಾಗಿತ್ತು. ಇದಕ್ಕೆ ದರ್ಶನ್ ಯೋಚಿಸದೆ ನೇರವಾಗಿ ಉತ್ತರಿಸಿದ್ದರು. ‘ಸುದೀಪ್ ನನ್ನ ಬೆಸ್ಟ್ ಫ್ರೆಂಡ್. ಸಿಕ್ಕಾಗ ನಾವು ಎಂದಿಗೂ ಯಾವಾಗಲೂ ಸಿನಿಮಾ ಬಗ್ಗೆ ಮಾತನಾಡಲ್ಲ. ಅವನ ಸಿನಿಮಾ ಬಗ್ಗೆ ನಾನು ಮಾತನಾಡಲ್ಲ, ನನ್ನ ಸಿನಿಮಾ ಬಗ್ಗೆ ಅವನ ಜೊತೆ ಚರ್ಚಿಸಲ್ಲ. ಬೇರೆ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದಿದ್ದರು ದರ್ಶನ್.
ಇವರ ಗೆಳೆತನ ಈಗಲೂ ಇರಬೇಕಿತ್ತು ಎಂದು ಅನೇಕರು ಹೇಳಿಕೊಂಡಿದ್ದಾರೆ. ಇಬ್ಬರೂ ಒಂದಾಗುವ ಸೂಚನೆಯನ್ನು ಅನೇಕ ಬಾರಿ ನೀಡಿದ್ದರು. ಆದರೆ, ಒಂದಾಗಲು ಸಾಧ್ಯವಾಗಲೇ ಇಲ್ಲ. ಈ ವಿಚಾರ ಅನೇಕರನ್ನು ಕಾಡುತ್ತಿದೆ. ಇಬ್ಬರೂ ಬೇರೆ ಆಗಿರುವುದರಿಂದ ಅವರ ಫ್ಯಾನ್ಸ್ ಮಧ್ಯೆ ವಾರ್ ನಡೆಯುತ್ತಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಸದ್ಯ ಜೈಲಿನಲ್ಲಿ ಇದ್ದಾರೆ. ಸುದೀಪ್ ಅವರು ಈ ಪ್ರಕರಣದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡದೆ ಅಂತರ ಕಾಯ್ದುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:38 pm, Fri, 2 August 24