ರಾಜಮೌಳಿ ಸಿನಿಮಾ ಮಾಡಲ್ಲ ಎಂದು ಹೊರನಡೆದಿದ್ದ ಈ ಸ್ಟಾರ್ ನಟ

SS Rajamouli: ರಾಜಮೌಳಿ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೆ ಸಾಕೆಂದು ಕಾದಿರುವ ಸ್ಟಾರ್ ನಟ-ನಟಿಯರ ದಂಡೇ ಇದೆ. ಆದರೆ ಇಲ್ಲೊಬ್ಬ ಸ್ಟಾರ್ ನಟ ರಾಜಮೌಳಿ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ರಿಜೆಕ್ಟ್ ಮಾಡಿದ್ದರಂತೆ.

ರಾಜಮೌಳಿ ಸಿನಿಮಾ ಮಾಡಲ್ಲ ಎಂದು ಹೊರನಡೆದಿದ್ದ ಈ ಸ್ಟಾರ್ ನಟ
ಎಸ್​ಎಸ್ ರಾಜಮೌಳಿ
Follow us
ಮಂಜುನಾಥ ಸಿ.
|

Updated on: Aug 02, 2024 | 3:19 PM

ರಾಜಮೌಳಿ ಸಿನಿಮಾದಲ್ಲಿ ನಟಿಸಲು ಯಾವ ನಟನಿಗೆ ತಾನೇ ಆಸೆ ಇರುವುದಿಲ್ಲ. ದೊಡ್ಡ-ದೊಡ್ಡ ಸ್ಟಾರ್ ನಟರೇ ರಾಜಮೌಳಿ ಸಿನಿಮಾದಲ್ಲಿ ನಟಿಸಲು ತುದಿ ಗಾಲಲ್ಲಿ ನಿಂತಿದ್ದಾರೆ. ಸಂಭಾವನೆ ಪಡೆಯದೆಯೂ ನಟಿಸಲು ಸಿದ್ಧರಿದ್ದಾರೆ ಎಷ್ಟೋ ಮಂದಿ ನಟ-ನಟಿಯರು. ರಾಜಮೌಳಿ ಸಿನಿಮಾದಲ್ಲಿ ನಟಿಸಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂಬ ಆಸೆ ಎಲ್ಲರಿಗೂ ಆದರೆ ಒಬ್ಬ ನಟ, ರಾಜಮೌಳಿ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೂ ಬೇಡ ಎಂದು ಹೇಳಿದ್ದರಂತೆ. ಅವರೇ ತಮಿಳು ನಟ ಸೂರ್ಯ.

‘ಬಾಹುಬಲಿ’ ಸಿನಿಮಾ ಬಿಡುಗಡೆ ಆಗುವ ಮುನ್ನ ಸೂರ್ಯ ನಟನೆಯ ‘ಅಂಜಾನ್’ ಸಿನಿಮಾ ತೆಲುಗಿನಲ್ಲಿ ‘ಸಿಖಂಧರ್’ ಹೆಸರಿನಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆಗುವ ಮುನ್ನ ಹೈದರಾಬಾದ್​ನಲ್ಲಿ ನಡೆದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ರಾಜಮೌಳಿಯನ್ನು ಅತಿಥಿಯನ್ನಾಗಿ ಕರೆಯಲಾಗಿದ್ದು, ವೇದಿಕೆ ಮೇಲೆ ಮಾತನಾಡಿದ್ದ ನಟ ಸೂರ್ಯ, ‘ಎಲ್ಲರೂ ಜೀವನದಲ್ಲಿ ತಪ್ಪು ಮಾಡುತ್ತಾರೆ, ನಾನೂ ಸಹ ಒಂದು ತಪ್ಪು ಮಾಡಿದ್ದೇನೆ. ನಾನು ರಾಜಮೌಳಿ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ತಪ್ಪಿಸಿಕೊಂಡಿದ್ದೇನೆ’ ಎಂದಿದ್ದರು.

ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾ ಪ್ರಾರಂಭ ಮಾಡುವ ಮುನ್ನ ಅದೇ ಸಿನಿಮಾದ ಪಾತ್ರವೊಂದಕ್ಕೆ ಸೂರ್ಯ ಅವರನ್ನು ರಾಜಮೌಳಿ ಕೇಳಿದ್ದರಂತೆ. ಆದರೆ ಪಾತ್ರದ ಔಟ್​ಲೈನ್ ಕೇಳಿದ ಬಳಿಕ ಇಷ್ಟವಾಗದ ಕಾರಣ ಸೂರ್ಯ ಅದನ್ನು ರಿಜೆಕ್ಟ್ ಮಾಡಿದ್ದರಂತೆ. ಕೆಲವು ಮೂಲಗಳ ಪ್ರಕಾರ, ಸೂರ್ಯ ಅವರನ್ನು ‘ಬಾಹುಬಲಿ’ ಸಿನಿಮಾದ ವಿಲನ್ ಬಲ್ಲಾಳದೇವನ ಪಾತ್ರಕ್ಕೆ ಕೇಳಲಾಗಿತ್ತು ಎನ್ನಲಾಗುತ್ತದೆ.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಚಿತ್ರದಲ್ಲಿ ನಟಿಸೋಕೆ ರಾಜಮೌಳಿ ಒಪ್ಪಿಸಿದ್ದು ಹೇಗೆ? ನಿರ್ದೇಶಕ ಹೇಳಿದ್ದು ಇಷ್ಟು  

‘ಸಿಖಂಧರ್’ ಸಿನಿಮಾದ ಕಾರ್ಯಕ್ರಮದಲ್ಲಿಯೇ ಮಾತನಾಡಿದ್ದ ಸೂರ್ಯ, ‘ನಾನು ಈಗಾಗಲೇ ಒಂದು ಅವಕಾಶ ಕಳೆದುಕೊಂಡಿದ್ದೇನೆ. ಮತ್ತೊಂದು ಕಳೆದುಕೊಳ್ಳಲು ಇಷ್ಟವಿಲ್ಲ. ದಯವಿಟ್ಟು ನಿಮ್ಮ ಯಾವುದೇ ಸಿನಿಮಾದಲ್ಲಿಯೂ ಸಣ್ಣ ಪಾತ್ರವಾದರೂ ಸರಿ ನನ್ನನ್ನು ಕರೆಯಿರಿ. ಸುಮ್ಮನೆ ಹೀಗೆ ಬಂದು ಹಾಗೆ ಹೋಗುವ ಪಾತ್ರವಾದರೂ ಸರಿ’ ಎಂದಿದ್ದರು ಸೂರ್ಯ. ಅದೇ ಕಾರ್ಯಕ್ರಮದಲ್ಲಿದ್ದ ನಟಿ ಸಮಂತಾ ಸಹ ತಮಗೂ ಅವಕಾಶ ಕೊಡಬೇಕು ಎಂದು ಹೇಳಿದ್ದರು.

ಸೂರ್ಯ ಈಗ ‘ಕನಗುವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಸೂರ್ಯ ಪಾಲಿಗೆ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಸಿನಿಮಾ ಶಿಲಾಯುಗದ ಕಾಲದ ಕತೆ ಹಾಗೂ ಆಧುನಿಕ ಕಾಲದ ಕತೆಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ದಿಶಾ ಪಟಾನಿ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ